ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಬಂಡೀಪುರದಲ್ಲಿ ಆನೆಗೆ ಸುಖಾಸುಮ್ಮನೆ ಗುಂಡು ಹೊಡೆದ ಸಿಬ್ಬಂದಿ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಮಾರ್ಚ್ 12: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹೆಡಿಯಾಲದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಇಲ್ಲಿನ ಅರಣ್ಯ ಇಲಾಖೆ ಅರೆಕಾಲಿಕ ಸಿಬ್ಬಂದಿ ಆನೆಯೊಂದರ ಮೇಲೆ ಗುಂಡು ಹಾರಿಸಿದ್ದು, ಈ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

ಅರಣ್ಯ ಇಲಾಖೆ ಈ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ. ಮಾರ್ಚ್ 7ರಂದು ಅರಣ್ಯ ಇಲಾಖೆ ಸಿಬ್ಬಂದಿ ರಹೀಂ ಹಾಗೂ ಉಮೇಶ್ ಸಫಾರಿಗೆ ಹೋಗಿದ್ದರು. ಸಫಾರಿಯ ರಸ್ತೆ ಪಕ್ಕದಲ್ಲಿ ಕಬ್ಬಿಣದ ಬೇಲಿ ಹಿಂದೆ ಆನೆ ನಿಂತಿತ್ತು. ಅದು ದಾಳಿ ನಡೆಸಲೂ ಅವಕಾಶವಿರಲಿಲ್ಲ. ಹೀಗಿದ್ದೂ ರಹೀಂ ಆನೆಗೆ ಗುಂಡು ಹೊಡೆದಿದ್ದರು. ಗುಂಡು ಹೊಡೆದ ಈ ದೃಶ್ಯವನ್ನು ಮತ್ತೊಬ್ಬ ಸಿಬ್ಬಂದಿ ಉಮೇಶ್ ವಿಡಿಯೋ ಮಾಡಿಕೊಂಡಿದ್ದಾರೆ.

Forest Department Staff Firing Elephant In Bandipura

ಅದನ್ನು ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದಾರೆ. ಈ ಕುರಿತು ಟೀಕೆಗಳು ವ್ಯಕ್ತಗೊಂಡಿದ್ದವು. ಅರಣ್ಯಕ್ಕೆ ಆನೆಯನ್ನು ವಾಪಸ್ ಕಳುಹಿಸುವ ಬದಲು ಹೀಗೆ ಗುಂಡು ಹೊಡೆದು, ಅದನ್ನೂ ವಿಡಿಯೋ ಮಾಡಿದ್ದಾರೆ ಎಂದು ಟೀಕೆಗಳು ವ್ಯಕ್ತಗೊಂಡಿದ್ದವು.

"ರಹೀಂನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ವಿಚಾರಣೆ ಬಳಿಕ ಉಮೇಶ್ ಕುರಿತು ಕ್ರಮ ಕೈಗೊಳ್ಳಲಾಗುವುದು" ಎಂದು ಬಂಡೀಪುರ ಯೋಜನೆ ನಿರ್ದೇಶಕ ಟಿ ಬಾಲಚಂದ್ರ ತಿಳಿಸಿದ್ದಾರೆ.

English summary
Criticism for the video of Forest department staff who fired at an elephant in Tiger reserve area of ​​Bandipur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X