• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಟ್ಟು ಹಬ್ಬದ ದಿನ ರಾಜಕೀಯ ನಿವೃತ್ತಿ ಘೋಷಿಸಿದ ವಿ. ಶ್ರೀನಿವಾಸ ಪ್ರಸಾದ್

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಆಗಸ್ಟ್ 06; ಕರ್ನಾಟಕ ಬಿಜೆಪಿಯ ಹಿರಿಯ ನಾಯಕ ಹಾಗೂ ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್, ತಮ್ಮ ಹುಟ್ಟುಹಬ್ಬದ ದಿನದಂದೇ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ.

ಶುಕ್ರವಾರ 75ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ 'ಶ್ರೀನಿವಾಸ್‌ ಪ್ರಸಾದ್‌ರ 50 ವರ್ಷದ ರಾಜಕೀಯ ಜೀವನ' ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು.

ಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕುರುಬ ಸಮುದಾಯ ಕೆಂಡಾಮಂಡಲಸಂಸದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಕುರುಬ ಸಮುದಾಯ ಕೆಂಡಾಮಂಡಲ

ಈ ವೇಳೆ ಮಾತನಾಡಿದ ಅವರು, "ಮುಂದೆ ನಾನು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದೇನೆ. ನನ್ನ ರಾಜಕೀಯ ಜೀವನದ ಎಲ್ಲ ಏಳು ಬೀಳುಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದೇನೆ. ನಾನು ಆತ್ಮ ತೃಪ್ತಿಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ" ಎಂದು ನಿವೃತ್ತಿ ಘೋಷಿಸಿದರು.

 ಭ್ರಷ್ಟರೇ ಸಿಎಂ ಆಗುತ್ತಾರೆ ಎಂದಿದ್ದ ಸಿದ್ದರಾಮಯ್ಯಗೆ ಶ್ರೀನಿವಾಸ್ ಪ್ರಸಾದ್ ತಿರುಗೇಟು ಭ್ರಷ್ಟರೇ ಸಿಎಂ ಆಗುತ್ತಾರೆ ಎಂದಿದ್ದ ಸಿದ್ದರಾಮಯ್ಯಗೆ ಶ್ರೀನಿವಾಸ್ ಪ್ರಸಾದ್ ತಿರುಗೇಟು

"ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿ ಬಯಸಿದ್ದೆ. ಆದರೆ ರಾಜಕೀಯ ಬೆಳವಣಿಗೆಗಳಿಂದಾಗಿ ಕಾರಣದಿಂದಾಗಿ ಮತ್ತೆ ಸ್ಪರ್ಧೆ ಮಾಡಿದ್ದೆ. ಮುಂದೆ ನಾನು ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಈ‌ ಮಾತಿನಿಂದ ಹಿಂದೆ ಸರಿಯುವುದು ಇಲ್ಲ" ಎಂದು ಸ್ಪಷ್ಟಪಡಿಸಿದರು.

ಶ್ರೀನಿವಾಸ್ ಪ್ರಸಾದ್ ಒತ್ತಡಕ್ಕೆ ಮಣಿದ ಸಿಎಂ: ವಿಜಯೇಂದ್ರ ಆಪ್ತಗೆ ಹಿನ್ನಡೆ ಶ್ರೀನಿವಾಸ್ ಪ್ರಸಾದ್ ಒತ್ತಡಕ್ಕೆ ಮಣಿದ ಸಿಎಂ: ವಿಜಯೇಂದ್ರ ಆಪ್ತಗೆ ಹಿನ್ನಡೆ

"ನಾನು ಈಗ ಆತ್ಮತೃಪ್ತಿಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದು, ಮುಂದಿನ ಚುನಾವಣೆಗಳಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ" ಎಂದು ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.

ದಲಿತ ನಾಯಕ; ಮೈಸೂರು ಭಾಗದ ಹಿರಿಯ ರಾಜಕೀಯ ನಾಯಕರಾಗಿರುವ ಶ್ರೀನಿವಾಸ್ ಪ್ರಸಾದ್, ರಾಜ್ಯ ಹಾಗೂ ದೇಶದ‌ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಪ್ರಭಾವಿ ದಲಿತ ನಾಯಕರಾಗಿ ಗುರುತಿಸಿಕೊಂಡಿರುವ ಪ್ರಸಾದ್, ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಕೇಂದ್ರ ಸಚಿವರಾಗಿ ಸಹ ಕೆಲಸ‌ ಮಾಡಿದ್ದರು.

   ಸಂಕಷ್ಟದಲ್ಲಿ ಟೀಮ್ ಇಂಡಿಯಾದ ಗೋಡೆಯಾಗಿ ನಿಂತ ಕೆ ಎಲ್ ರಾಹುಲ್ | Oneindia Kannada

   ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದದ್ದರು. ಶ್ರೀನಿವಾಸ್ ಪ್ರಸಾದ್ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆರ್. ಧ್ರುವನಾರಾಯಣ್‌ರನ್ನು ಸೋಲಿಸಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

   ಸಿದ್ದರಾಮಯ್ಯ ವಿರುದ್ಧ ಮುನಿಸು; 2013ರ ಚುನಾವಣೆಯಲ್ಲಿ ಗೆದ್ದ ಬಳಿಕ ವಿ. ಶ್ರೀನಿವಾಸ ಪ್ರಸಾದ್ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಆದರೆ ಸಂಪುಟ ಪುನಾರಚನೆ ಸಮಯದಲ್ಲಿ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಇದರಿಂದಾಗಿ ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಂಡರು.

   ನಂಜನಗೂಡು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷವನ್ನು ಶ್ರೀನಿವಾಸ ಪ್ರಸಾದ್ ತೊರೆದರು. ನಂಜನಗೂಡು ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ವಿರುದ್ಧ ಶ್ರೀನಿವಾಸ ಪ್ರಸಾದ್ ಸೋಲು ಕಂಡರು.

   2018ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ವಿ. ಶ್ರೀನಿವಾಸ ಪ್ರಸಾದ್‌ರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿತು. 2018ರ ಚುನಾವಣೆಗೆ ಅವರು ಕಣಕ್ಕಿಳಿಯಲಿಲ್ಲ. ನಂಹನಗೂಡಿನಲ್ಲಿ ಶ್ರೀನಿವಾಸ ಪ್ರಸಾದ್ ಅಳಿಯ ಹರ್ಷವರ್ಧನ್ ಬಿಜೆಪಿಯಿಂದ ಕಣಕ್ಕಿಳಿದು ಗೆಲುವು ಸಾಧಿಸಿದರು.

   ವಿ. ಶ್ರೀನಿವಾಸ ಪ್ರಸಾದ್ 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಚಾಮರಾಜನಗರದಿಂದ ಕಣಕ್ಕಿಳಿದರು. ಚುನಾವಣೆಯಲ್ಲಿ ಗೆಲವು ಸಾಧಿಸಿದರು. ಆದರೆ ಆರೋಗ್ಯದ ಕಾರಣದಿಂದಾಗಿ ಪಕ್ಷದ ಚಟುವಟಿಕೆಗಳು, ಪ್ರವಾಸದಿಂದ ದೂರ ಉಳಿದರು.

   ಈಗ ಶ್ರೀನಿವಾಸ ಪ್ರಸಾದ್ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಮೈಸೂರು-ಚಾಮರಾಜನಗರ ಭಾಗದ ನಾಯಕರೊಬ್ಬರ ರಾಜಕೀಯ ಜೀವನದ ಅಧ್ಯಾಯವೊಂದು ಮುಗಿದಿದೆ.

   ಎನ್. ಮಹೇಶ್ ಭೇಟಿ; ವಿ. ಶ್ರೀನಿವಾಸ ಪ್ರಸಾದ್‌ರನ್ನು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಶುಕ್ರವಾರ ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, "ಬಿಎಸ್‌ಪಿಯಿಂದ ನನಗೆ ಮೋಸವಾಗಿದೆ. ನನ್ನಿಂದ ಬಿಎಸ್‌ಪಿ ಪಕ್ಷಕ್ಕೆ ಮೋಸವಾಗಿಲ್ಲ" ಎಂದರು.

   ಗುರುವಾರ ಎನ್. ಮಹೇಶ್ ಬಿಜೆಪಿ ಸೇರಿದ್ದಾರೆ. "ಬಿಎಸ್‌ಪಿ ನನ್ನ ತಾಯಿ ಪಕ್ಷ ಎಂದು ಹೇಳಿದ್ದೆ. ಆದರೆ ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಏನು ಮಾಡಬೇಕು?. ಮಗ ಅನಾಥನಾಗಿದ್ದ, ಈಗಾಗಿ ರಾಜಕೀಯವಾಗಿ ದಾರಿ ಕಂಡುಕೊಂಡಿದ್ದೇನೆ" ಎಂದು ಹೇಳಿದರು.

   English summary
   Chamarajanagar MP and BJP senior leader V. Srinivas Prasad announced retirement from active politics.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X