ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಣಾ ಸ್ಥಾನ ತುಂಬಲು ಬಂಡೀಪುರಕ್ಕೆ ಬಂದ ಮುಧೋಳ್ ನಾಯಿ ಮರಿಗಳು

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 22: ಬಂಡೀಪುರದಲ್ಲಿ ಬೇಟೆಗಾರರ ಪತ್ತೆ ಹಾಗೂ ಹುಲಿ ಕಾರ್ಯಾಚರಣೆಯಲ್ಲಿ ಕಿಂಗ್ ಆಗಿದ್ದ ರಾಣಾ ನಿವೃತ್ತಿ ಅಂಚಿಗೆ ಬಂದಿರುವುದರಿಂದ ಆತನ ಸ್ಥಾನ ತುಂಬಲು ಎರಡು ಮುಧೋಳ್ ನಾಯಿ ಮರಿಗಳನ್ನು ಕರೆತರಲಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಸಮೀಪದ ತಿಮ್ಮಾಪುರದ ಶ್ವಾನ ಸಂಶೋಧನಾ ಕೇಂದ್ರದಿಂದ 1 ತಿಂಗಳಿನ 1 ಗಂಡು, 1 ಹೆಣ್ಣು ಮರಿಯನ್ನು 27 ಸಾವಿರ ರೂ.ಗೆ ಬಂಡೀಪುರ ಅರಣ್ಯ ಇಲಾಖೆ ಖರೀದಿಸಿದೆ. ಅರಣ್ಯ ಅಪರಾಧ ಪತ್ತೆಯಲ್ಲಿ ಬಂಡೀಪುರ ಅರಣ್ಯ ಇಲಾಖೆಯು 'ರಾಣಾ' ಎಂಬ ಜರ್ಮನ್‌ ಶೆಫರ್ಡ್ ತಳಿಯ ನಾಯಿಯನ್ನು ಬಳಸಿಕೊಳ್ಳುತ್ತಿದೆ.

Chamarajanagar: Two Mudhol Puppies Have Been Brought To Bandipura

 ಅ.17ರಂದು ಬಿಎಸ್‌ಎಫ್‌ ಸೇರಲಿವೆ ನಾಲ್ಕು ಮುಧೋಳ ನಾಯಿ ಅ.17ರಂದು ಬಿಎಸ್‌ಎಫ್‌ ಸೇರಲಿವೆ ನಾಲ್ಕು ಮುಧೋಳ ನಾಯಿ

Recommended Video

Mohammed Siraj ಬೆಳೆದು ಬಂದ ಹಾದಿ , ಹಾಗು IPLಗೆ ಪ್ರವೇಶ ಹೇಗಿತ್ತು | Oneindia Kannada

ಈಗಾಗಲೇ ರಾಣಾ ನಿವೃತ್ತಿ ಅಂಚಿಗೆ ಬಂದಿರುವುದರಿಂದ ರಾಣಾ ಬಳಿಕ ಅದರ ಸ್ಥಾನ ತುಂಬಲು ನಮ್ಮ ರಾಜ್ಯದ ತಳಿಯಾದ ಮುಧೋಳ್ ನಾಯಿಗಳನ್ನು ತರಿಸಿದ್ದು, ಬಂಡೀಪುರ ಸಫಾರಿ ಕೇಂದ್ರದ ಬಳಿ ಪಾಲನೆ ಮಾಡಲಾಗುತ್ತಿದೆ. ಇನ್ನು, ಮುಧೋಳ್ ನಾಯಿ ಮರಿಗಳಿಗೆ ಎಲ್ಲಿ ತರಬೇತಿ ಕೊಡಬೇಕು ಎಂದು ಅರಣ್ಯ ಇಲಾಖೆ ಚಿಂತಿಸುತ್ತಿದ್ದು, ಬೆಂಗಳೂರು ಇಲ್ಲವೇ ಮೈಸೂರಿನಲ್ಲಿ ತರಬೇತಿ ಕೊಡಿಸುವ ಸಾಧ್ಯತೆ ದಟ್ಟವಾಗಿದೆ. ರಾಣಾಗೆ ಭೋಪಾಲ್​ನಲ್ಲಿ ಬರೋಬ್ಬರಿ 11 ತಿಂಗಳು ಕಠಿಣ ತರಬೇತಿ ನೀಡಲಾಗಿತ್ತು ಎಂದು ತಿಳಿದುಬಂದಿದೆ.

English summary
Two Mudhol puppies have been brought to bandipura to fill the place of rana which was specialised in locating hunter and tiger operations in Bandipura
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X