ಕೊಳ್ಳೇಗಾಲದಲ್ಲಿ ಎರಡು ಮುಸ್ಲಿಮ್ ಗುಂಪುಗಳ ಮಧ್ಯೆ ಘರ್ಷಣೆ; ಹಲವರಿಗೆ ಗಾಯ
ಚಾಮರಾಜನಗರ, ಮೇ 4: ನಿನ್ನೆ ಮುಸ್ಲಿಮರ ಪವಿತ್ರ ಈದ್ ಹಬ್ಬದ ದಿನದ ಅದೇ ಸಮುದಾಯದ ಎರಡು ಗುಂಪುಗಳ ಮಧ್ಯೆ ಮಾರಾಮಾರಿಯಾದ ಘಟನೆ ಕೊಳ್ಳೇಗಾಲದ ಸಾಮಂದಗೇರಿಯಲ್ಲಿ ಸಂಭವಿಸಿದೆ. ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳ ಬೆಂಬಲಿಗರ ಮಧ್ಯೆ ನಡೆದ ಘರ್ಷಣೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವುದು ವರದಿಯಾಗಿದೆ.
ಗಲಾಟೆ ಮಾಡಿಕೊಂಡ ವ್ಯಕ್ತಿಗಳು ಮೊಹಮ್ಮದ್ ಕೈಸರ್ ಮತ್ತು ನಜೀರ್ ಷರೀಫ್ ಅವರ ಬೆಂಬಲಿಗರೆನ್ನಲಾಗಿದೆ. ನಜೀರ್ ಷರೀಫ್ ಅಲಿಯಾಸ್ ಬಬ್ಲು ಹಾಲಿ ನಗರಸಭಾ ಸದಸ್ಯರಾದರೆ, ಮೊಹಮ್ಮದ್ ಕೈಸರ್ ಮಾಜಿ ನಗರಸಭಾ ಸದಸ್ಯರೆನ್ನಲಾಗಿದೆ. ಇವರಿಬ್ಬರ ಬೆಂಬಲಿಗರ ಗುಂಪುಗಳ ಮಧ್ಯೆ ಮೊದಲಿಂದಲೂ ರಾಜಕೀಯ ಹಗೆತನವಿದ್ದು ಪದೇ ಪದೇ ಜಗಳ, ಗಲಾಟೆಗಳು ನಡೆಯುತ್ತಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಇನ್ನುಮುಂದೆ ಸ್ವರ್ಣಾನಂದ ಪುರಿ ಸ್ವಾಮೀಜಿ
ನಿನ್ನೆ ರಂಜಾನ್ ಪ್ರಯುಕ್ತ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಹೊರಬಂದಾಗ ಪರಸ್ಪರ ಆಲಂಗಿಸಿ ಶುಭಾಶಯ ಕೋರುವುದು ಸಂಪ್ರದಾಯ. ಈ ಹೊತ್ತಿನಲ್ಲಿ ಎರಡು ಗುಂಪುಗಳ ಜನರ ಮಧ್ಯೆ ಗಲಾಟೆಯ ಕಿಡಿ ಹೊತ್ತುಕೊಂಡ ಮಚ್ಚು, ಚಾಕುಗಳಿಂದ ಪರಸ್ಪರ ಹಲ್ಲೆ ಮಾಡಿದರೆನ್ನಲಾಗಿದೆ.
ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಬಂದು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರ ವಹಿಸಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ವೇಳೆ, ಗ್ರಾಮದ ಸುತ್ತಮುತ್ತಲಿನ ಮುಸ್ಲಿಮ್ ಬಡಾವಣೆಗಳಲ್ಲಿ ಹಿಂಸಾಚಾರ ಏಳದಂತೆ ಕೊಳ್ಳೇಗಾಲ ಪೊಲೀಸರು ಕಟ್ಟೆಚ್ಚರ ಕೂಡ ಹಾಕಿದ್ದುದು ತಿಳಿದುಬಂದಿದೆ.
ಸಚಿವರಾಗುವ ಕನಸು: ಮೇ 6ರ ಬಳಿಕ ನನಸು
ಹಣ ದುರ್ಬಳಕೆ ಬಗ್ಗೆ ಖಾಸಗಿ ದೂರು ಪುರಸ್ಕಾರ ಸಲ್ಲ- ಹೈಕೋರ್ಟ್
ಬೆಂಗಳೂರು: ಹಣ ದುರ್ಬಳಕೆ ತಡೆ ಕಾಯಿದೆ (ಪಿಎಂಎಲ್ ) 2002ರಡಿ ವಿಚಾರಣಾ ನ್ಯಾಯಾಲಯಗಳು ಖಾಸಗಿ ದೂರುಗಳನ್ನು ಪುರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೆ, ಹಾಲಿ ಎಂಎಲ್ ಸಿ ಶಶಿಲ್ ಜಿ.ನಮೋಶಿ ವಿರುದ್ಧದ ಖಾಸಗಿ ದೂರನ್ನು ರದ್ದುಗೊಳಿಸಿದೆ. ಇದರಿಂದಾಗಿ ಶಶಿಲ್ ನಮೋಶಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಮನಿ ಲಾಂಡರಿಂಗ್ (ಪಿಎಂಎಲ್) ಆಕ್ಟ್, 2002 ರ ನಿಬಂಧನೆಗಳ ಅಡಿಯಲ್ಲಿ ವಿಚಾರಣಾ ಕೋರ್ಟ್ಗಳು ಖಾಸಗಿ ದೂರುಗಳ ಆಧಾರದ ಮೇಲೆ ಮುಂದುವರಿಯಲು ಸಾಧ್ಯವಿಲ್ಲ ಮತ್ತು ಆ ಕೋರ್ಟ್ ಗಳು ಪಿಎಂಎಲ್ ಕಾಯಿದೆಯ ಅಡಿಯಲ್ಲಿ ಅಧಿಕಾರ ಹೊಂದಿರುವ ಅಧಿಕಾರಿಗಳ ದೂರುಗಳನ್ನು ಮಾತ್ರ ಪುರಸ್ಕರಿಸಿ ವಿಚಾರಣೆ ಮಾಡಬಹುದಾಗಿದೆ ಎಂದು ಆದೇಶಿಸಿದೆ.

ಕಲಬುರಗಿ ಮೂಲದ ಹೈದರಾಬಾದ್ ಕರ್ನಾಟಕ ಎಜುಕೇಷನ್ ಸೊಸೈಟಿಯ ಮಾಜಿ ಪದಾಧಿಕಾರಿಗಳಾದ ವಿಧಾನಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ ಮತ್ತಿತರ ಮೂವರು ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ಪಿಎಂಎಲ್ ಕಾಯಿದೆ ಮತ್ತು ಅಪರಾಧ ದಂಡ ಸಂಹಿತೆ (ಸಿಆರ್ಪಿಸಿ)ಯನ್ನು ವಿಶ್ಲೇಷಿಸಿರುವ ಹೈಕೋರ್ಟ್ , "ಪಿಎಂಎಲ್ ಕಾಯಿದೆಯು ವಿಶೇಷ ಶಾಸನವಾಗಿರುವುದರಿಂದ ಸಿಆರ್ಪಿಸಿ ಅಡಿಯಲ್ಲಿ ಸೂಚಿಸಲಾದ ಸಾಮಾನ್ಯ ಕಾರ್ಯವಿಧಾನಕ್ಕಿಂತ ಸೂಚಿಸಲಾದ ವಿಶೇಷ ಕಾರ್ಯ ವಿಧಾನವು ಮೇಲುಗೈ ಸಾಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ ಮತ್ತು ಅದು ಸಾಮಾನ್ಯ ಕಾರ್ಯವಿಧಾನದೊಂದಿಗೆ ಭಿನ್ನವಾಗಿದೆ'' ಎಂದು ಏಕಸದಸ್ಯಪೀಠ ಹೇಳಿದೆ.
ಏನಿದು ಪ್ರಕರಣ?
ದೂರುದಾರರ ಕಲಬುರಗಿಯ ಒ.ಹೆಚ್. ಅಮರೇಶ್ ಮತ್ತು ಬೆಂಗಳೂರಿನ ಲಿಂಗನಗೌಡ ಅವರು ಸಮಾಜದ ಹಿಂದಿನ ಪದಾಧಿಕಾರಿಗಳಾಗಿರುವ ಅರ್ಜಿದಾರರು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ 2016ರಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಅರ್ಜಿದಾರರು ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ಸಂಜ್ಞೇಯ ಅಪರಾಧವೆಂದು ಪರಿಗಣಿಸಿ ಮಂಗಳೂರಿನ ವಿಚಾರಣಾ ನ್ಯಾಯಾಲಯವು ನೀಡಿದ ಸಮನ್ಸ್ನ ಸಿಂಧುತ್ವವನ್ನು ಪ್ರಶ್ನಿಸಿದ್ದರು.
(ಒನ್ಇಂಡಿಯಾ ಸುದ್ದಿ)