ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಂಬಿ ಹರಿಯುತ್ತಿರುವ ಕಾವೇರಿ, ಭರಚುಕ್ಕಿಗೆ ಪ್ರವೇಶ ನಿಷೇಧ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜುಲೈ, 15: ಕಾವೇರಿ ನದಿಯಲ್ಲಿ ನೀರು ಹೆಚ್ಚಾದಂತೆಲ್ಲಾ ಕೊಳ್ಳೇಗಾಲ ತಾಲೂಕಿನ 8ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಆವರಿಸುತ್ತಿದೆ. ಈಗಾಗಲೇ ಕೆಲವು ಕಡೆ ಜಮೀನುಗಳು ಜಲಾವೃತವಾಗಿದೆ ರೈತರಲ್ಲಿ ಆತಂಕ ತರಿಸಿದೆ.

ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ಕಾವೇರಿ ನದಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗಿದೆ.

ಮಳೆ ಅಬ್ಬರ; ಕರ್ನಾಟಕದ ಜಲಾಶಯಗಳ ನೀರಿನ ಮಟ್ಟಮಳೆ ಅಬ್ಬರ; ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ

ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆ ಅಣಗಳ್ಳಿ, ಹರಳೆ, ಸರಗೂರು, ಧನಗೆರೆ, ಎಡಕುರಿಯ, ಸತ್ತೇಗಾಲ ಮುಂತಾದ ನದಿಯ ಎರಡೂ ದಂಡೆಗಳಲ್ಲಿರುವ ಗ್ರಾಮಗಳು ಮತ್ತು ನದಿಯ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

Tourists Banned to Barachukki Falls after Heavy Water Flowing in Cauvery River

ನದಿಯಲ್ಲಿ ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ಹಸು ತೊಳೆಯುವುದು, ಈಜುವುದು ಇನ್ನಿತರ ಚಟುವಟಿಕೆಗಳನ್ನು ಮಾಡಬಾರದು' ಎಂದು ಈಗಾಗಲೇ ಜಿಲ್ಲಾಡಳಿತ ಸೂಚಿಸಿದೆ‌.

ನೆರೆ ಆತಂಕದಲ್ಲಿರುವ ಗ್ರಾಮಗಳಿಗೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಧರ್ ಭೇಟಿ ನೀಡಿದ ವೇಳೆ ನೀರಿನ ಮಟ್ಟ ಏರುತ್ತಿದ್ದರೂ, ಗ್ರಾಮಸ್ಥರು ನದಿ ನೀರಿನಲ್ಲಿ ಬಟ್ಟೆ ತೊಳೆಯುವುದು, ನೀರನ್ನು ಸಂಗ್ರಹಿಸುವುದನ್ನು ಕಂಡು ಇಒಗೆ ಫೋನಾಯಿಸಿ ಕುಡಿಯುವ ನೀರು ಸೌಲಭ್ಯ ಕಲ್ಪಿಸುವಂತೆ ಸೂಚಿಸಿದ್ದಾರೆ.

ದಾಸನಪುರ ಗ್ರಾಮದಲ್ಲಿ ಕಾವೇರಿ ನೀರು ಹರಿಯುತ್ತದೆ. ಆದರೆ ನಮಗೆ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗುವುದಿಲ್ಲ. ಹೀಗಾಗಿ ನದಿಗೆ ಬಂದು ನೀರು ತೆಗೆದುಕೊಳ್ಳುತ್ತೇವೆ. ಪಾತ್ರೆ, ಬಟ್ಟೆಗಳನ್ನು ನದಿಗೆ ಬಂದು ತೊಳೆಯುತ್ತೇವೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದರು. ಇದಕ್ಕೆ ಸ್ಪಂಧಿಸಿದ ನ್ಯಾಯಾದೀಶರು ಅಗತ್ಯ ಮೂಲಸೌಕರ್ಯ ಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸುವುದಾಗಿ ತಿಳಿಸಿ, ನದಿ ಬಳಿ ಯಾರೂ ದೈನಂದಿನ ಕಾರ್ಯ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

ಭರಚುಕ್ಕಿಗೆ ನಿರ್ಬಂಧ; ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಜಿಲ್ಲಾಡಳಿತ ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾತ, ವೆಸ್ಲಿ ಸೇತುವೆ, ಶಿವನಸಮುದ್ರ ಸಮೂಹ ದೇವಾಲಯಗಳು, ದರ್ಗಾ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ. ಶ್ರೀರಂಗಪಟ್ಟಣದ ಸಂಗಮದಲ್ಲಿ ಕಾವೇರಿ ನದಿಯಲ್ಲಿ ಈಜಲು ತೆರಳಿದ ಇಬ್ಬರು ಯುವಕರು ನೀರಲ್ಲಿ ಕೊಚ್ಚಿ ಹೋದ ಬೆನ್ನಲ್ಲೇ ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದೆ.

ಹೋಗೆನಕಲ್‌ನಲ್ಲಿ ತೆಪ್ಪ ಸವಾರಿಗೆ ನಿರ್ಬಂಧ; ಕೆಆರ್‌ಎಸ್‌​​ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ಹಾಗೂ ಕಬಿನಿಯಿಂದ 30 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಬಿಡಲಾಗಿದೆ ಜೊತೆಗೆ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಪರಿಣಾಮ ಹೊಗೆನಕಲ್‌ನಲ್ಲಿ ಕಾವೇರಿ ರುದ್ರರಮಣೀಯವಾಗಿ ಹರಿಯುತ್ತಿದ್ದಾಳೆ. ನೀರಿನ ಮಟ್ಟ ಅಪಾಯದ ಸ್ಥಿತಿ ತಲುಪಿರುವುದರಿಂದ ತೆಪ್ಪ ಸವಾರಿಯನ್ನು ನಿಷೇಧಿಸಲಾಗಿದೆ.

Recommended Video

Metro ರೈಲಿನಲ್ಲಿ ಲವರ್ಸ್ ಕಿತ್ತಾಟದ ವಿಡಿಯೋ ಪ್ರಯಾಣಿಕರಿಗೆ ಕೊಡ್ತು ಸಖತ್ ಮನರಂಜನೆ | *viral | OneIndia Kannada

English summary
Heavy water was released from KRS and Kabini dams, tourists were restricted from visiting Barachukki waterfalls by the Chamarajanagar district administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X