ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಜಿ. ಟೊಮೆಟೋಗೆ 4 ರೂ.! ರೈತರ ಗೋಳು ಕೇಳೋರ್ಯಾರು?!

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಫೆಬ್ರವರಿ 20: ಈ ಬಾರಿ ಉತ್ತಮ ಹಿಂಗಾರು ಮಳೆಯಾದ ಕಾರಣ ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯಲ್ಲಿ ರೈತರು ಹುಮ್ಮಸ್ಸಿನಿಂದ ಟೊಮೆಟೋ ಬೆಳೆ ಬೆಳೆದಿದ್ದರು. ಆದರೆ ಫಸಲು ಬರುವ ಹೊತ್ತಿಗೆ ನಿರೀಕ್ಷೆಗೂ ಮೀರಿ ರೈತರು ಬೆಳೆ ಬೆಳೆದಿದ್ದರಿಂದ ಬೇಡಿಕೆ ಕಡಿಮೆಯಾಗಿ ದರ ಪಾತಾಳಕ್ಕೆ ಕುಸಿದಿದೆ. ಇದರಿಂದ ರೈತರು ಆತಂಕ ಪಡುವಂತಾಗಿದೆ.

ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತವಾದ್ದರಿಂದ ರೈತರಿಂದ ಟೊಮೆಟೋ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಇದರಿಂದಾಗಿ ಒಂದು ಕೆಜಿಗೆ 2ರಿಂದ 4 ರೂ.ಗೆ ಮಾರುವಂತಾಗಿದೆ. ರೈತರಿಗೆ ಮಾಡಿದ ಖರ್ಚು ಇರಲಿ ಕೊಯ್ಲು ಮಾಡಿದ ಖರ್ಚು ಕೂಡ ಬರದಂತಾಗಿದೆ.

ಬೆಲೆ ಕುಸಿಯಿತು ಎಂಬ ಸಿಟ್ಟಲ್ಲಿ ಟೊಮೆಟೊ ಪುಕ್ಕಟೆ ಹಂಚಿದ ರೈತಬೆಲೆ ಕುಸಿಯಿತು ಎಂಬ ಸಿಟ್ಟಲ್ಲಿ ಟೊಮೆಟೊ ಪುಕ್ಕಟೆ ಹಂಚಿದ ರೈತ

ರೈತರು ಕೃಷಿ ಮಾಡುವ ಸಂದರ್ಭ ಅಂದರೆ ಎರಡು ತಿಂಗಳ ಹಿಂದೆ ಕೆಜಿಗೆ 40 ರೂ. ಇತ್ತು. ಹೀಗಾಗಿ ಹುರುಪಿನಿಂದ ರೈತರು ಸಾವಿರಾರು ರೂಪಾಯಿ ಬಂಡವಾಳ ಹಾಕಿ ಕೃಷಿ ಮಾಡಿದ್ದರು. ಆದರೆ ಫಸಲು ಬರುವ ವೇಳೆಗೆ ಎಲ್ಲವೂ ಉಲ್ಟಾ ಆಗಿದೆ. ರೈತರ ನಿರೀಕ್ಷೆ ಹುಸಿಯಾಗಿದೆ. ಗುಂಡ್ಲುಪೇಟೆ ತಾಲೂಕುವೊಂದರಲ್ಲೇ ಸುಮಾರು 1000 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಬೆಳೆಯಲಾಗಿದೆ. ರೈತರಿಗೆ ಒಂದು ಎಕರೆ ಟೊಮೆಟೋ ಬೆಳೆಯಲು ಸುಮಾರು 40ಸಾವಿರ ರೂ. ಖರ್ಚಾಗುತ್ತದೆ.

Tomato prices drop as supplies improve

ರೈತರು ಕೊಯ್ಲು ಮಾಡಿ ಅದನ್ನು ಮಾರುಕಟ್ಟೆಗೆ ಸಾಗಿಸುವ ವೇಳೆಗೆ ಸಾಕಷ್ಟು ಖರ್ಚು ಬೀಳುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಕೆಜಿಗೆ 2 ರೂ.ಗೆ ಕೇಳುತ್ತಿರುವುದರಿಂದ ಸಾಗಣೆ ವೆಚ್ಚವೇ ಸಿಗದೆ ರೈತರು ಖಾಲಿ ಕೈಯ್ಯಲ್ಲಿ ಮರಳುವಂತಾಗಿದೆ. ಇದೀಗ ಟೊಮೆಟೋ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಕೆಲವರು ಕೊಯ್ಲು ಮಾಡಿ ಮಾರುಕಟ್ಟೆಗೆ ತಂದು ಉತ್ತಮ ಬೆಲೆ ಸಿಗದ ಕಾರಣ ರಸ್ತೆ ಬದಿಗೆ ಸುರಿಯುತ್ತಿದ್ದಾರೆ. ಮತ್ತೆ ಕೆಲವರು ಕೊಯ್ಲು ಮಾಡದೆ ದನಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ. ಒಟ್ಟಾರೆ ಟೊಮೆಟೋ ಬೆಳೆದ ಬೆಳೆಗಾರನ ಬದುಕು ಮಾತ್ರ ಕಣ್ಣೀರಾಗುತ್ತಿದೆ.

English summary
Tomato prices drop as supplies improve. Chamarajanagar farmers suffering from heavy loss of money from tomato crop. Farmers are selling tomatos for RS 2 to 4 per KG now!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X