ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈನಾಡ್ ಅಭಯಾರಣ್ಯದಲ್ಲಿ ಗಂಡು ಹುಲಿ ಸಾವು

|
Google Oneindia Kannada News

ಚಾಮರಾಜನಗರ, ಏಪ್ರಿಲ್ 14: ಬಂಡೀಪುರ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಕೇರಳದ ವೈನಾಡ್ ಅಭಯಾರಣ್ಯದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಮೃತಪಟ್ಟ ಹುಲಿ ಸುಮಾರು ಆರು ವರ್ಷದ್ದಾಗಿದ್ದು, ಒಂದೆರಡು ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ಹುಲಿ ಹೇಗೆ ಸಾವನ್ನಪ್ಪಿದೆ ಎಂಬುದು ತಿಳಿದು ಬಂದಿಲ್ಲ. ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಾ ಬಂಡೀಪುರ ಅಭಯಾರಣ್ಯ ಪಕ್ಕದ ವೈನಾಡ್ ಅಭಯಾರಣ್ಯದ ಕುರಿಚಿಯಾಡ್ ವಲಯದ ತತೂರ್ ಎಂಬಲ್ಲಿ ತೆರಳುತ್ತಿದ್ದಾಗ ಹುಲಿಯ ಮೃತದೇಹ ಪತ್ತೆಯಾಗಿದೆ.

Tiger Death In Wayanad Which Is Adjascent To Bandipura

 ಹುಲಿಗೂ ಬಂತು ಕೊರೊನಾ, ಜಗತ್ತಿನಲ್ಲಿ ಮೊದಲ ಪ್ರಾಣಿ ಕೇಸ್? ಹುಲಿಗೂ ಬಂತು ಕೊರೊನಾ, ಜಗತ್ತಿನಲ್ಲಿ ಮೊದಲ ಪ್ರಾಣಿ ಕೇಸ್?

ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಹಿರಿಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ, ಮಹಜರು ನಡೆಸಿ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಿದ್ದಾರೆ. ಬೇಸಿಗೆಯ ದಿನವಾಗಿರುವುದರಿಂದ ನೀರು ಮತ್ತು ಆಹಾರ ಹುಡುಕಿಕೊಂಡು ಒಂದೆಡೆಯಿಂದ ಮತ್ತೊಂದು ಕಡೆಗೆ ತೆರಳುತ್ತಿದ್ದಾಗ ಹುಲಿಗಳ ನಡುವೆ ಕಾದಾಟ ನಡೆದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

English summary
A tiger died in a wayanad forest area which is adjacent to bandipura national park
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X