ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಲಿ ಗಣತಿಗಾಗಿ ಬಂಡೀಪುರದಲ್ಲಿ 670 ಕ್ಯಾಮೆರಾ ಅಳವಡಿಕೆ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಗುಂಡ್ಲುಪೇಟೆ, ನವೆಂಬರ್ 22: ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿನ ವನ್ಯಜೀವಿಗಳ ಗಣತಿಗೆ 2 ಹಂತಗಳಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ನಡೆಸುವ ಕಾರ್ಯಕ್ಕೆ ಸಿದ್ಧತೆಗಳು ನಡೆಯುತ್ತಿವೆ. ನವೆಂಬರ್ 23ರಿಂದ 45 ದಿನ ಹುಲಿಗಳ ಗಣತಿಯ ಮೊದಲನೇ ಹಂತದ ಕಾರ್ಯ ನಡೆಯಲಿದೆ.

ಉದ್ಯಾನ ವ್ಯಾಪ್ತಿಯಲ್ಲಿನ ಮೂಲೆಹೊಳೆ, ಕುಂದಕೆರೆ, ಕಲ್ಕೆರೆ, ಮದ್ದೂರು, ಗೋಪಾಲಸ್ವಾಮಿಬೆಟ್ಟ, ಬಂಡೀಪುರ, ಕಲ್ಕೆರೆ, ಹೆಡೆಯಾಲ, ನುಗು ಹಾಗೂ ಎನ್.ಬೇಗೂರು ಸೇರಿದಂತೆ 10 ವಲಯಗಳಲ್ಲಿ ಟ್ರ್ಯಾಪಿಂಗ್ ಗೆ ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದೆ. ಕ್ಯಾಮೆರಾ ಅಳವಡಿಕೆಗೆ ಸಿದ್ಧತೆಗಳನ್ನು ನಡೆಸಲಾಗಿದೆ. ಇದಕ್ಕಾಗಿ ಸುಮಾರು 670 ಕ್ಯಾಮೆರಾಗಳನ್ನು ಬಳಕೆ ಮಾಡುತ್ತಿದ್ದು, ಆಯಾ ವಲಯಾರಣ್ಯ ಕಚೇರಿಗಳಿಗೆ ಕಳುಹಿಸಲಾಗಿದೆ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]

Tiger

ಕ್ಯಾಮೆರಾಗಳ ಕೊರತೆಯಿಂದಾಗಿ ಏಕಕಾಲದಲ್ಲಿ ಎಲ್ಲ ವಲಯಗಳಲ್ಲೂ ಗಣತಿ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಎರಡನೇ ಹಂತದಲ್ಲಿ ಗುಂಡ್ರೆ, ಗುಂಡ್ಲುಪೇಟೆ ಹಾಗೂ ಓಂಕಾರ್ ವಲಯಗಳಲ್ಲಿ ಪ್ರಾರಂಭವಾಗಲಿದೆ. ಆಯಾ ವಲಯಾಧಿಕಾರಿಗಳು ಎರಡು ದಿನಕ್ಕೊಮ್ಮೆ ಕ್ಯಾಮೆರಾಗಳಲ್ಲಿನ ದತ್ತಾಂಶಗಳನ್ನು ಸಂಗ್ರಹಿಸಲಿದ್ದಾರೆ.[ಬಂಡೀಪುರದಲ್ಲಿ 'ಪ್ರಿನ್ಸ್' ಹುಲಿ ಕಂಡಾಗ ಕುಪ್ಪಳಿಸಿದ ಮನ]

Camera

ಇವುಗಳ ಪರಿಶೀಲನೆಯ ನಂತರ ಉದ್ಯಾನದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆಯ ನಿಖರ ಮಾಹಿತಿ ದೊರಕಲಿದೆ ಎಂದು ಹುಲಿ ಯೋಜನೆಯ ನಿರ್ದೇಶಕ ಟಿ.ಹೀರಾಲಾಲ್ ತಿಳಿಸಿದ್ದಾರೆ. ಆನೆಗಳ ಗಣತಿಗಾಗಿ ಅವುಗಳ ಲದ್ದಿಯನ್ನು ವಿಶ್ಲೇಷಿಸುವ ಕಾರ್ಯವನ್ನೂ ಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭ ಹೇಳಿದ್ದಾರೆ.

English summary
Tiger census first phase starts from November 23rd in Bandipur. 670 camera deployed for census.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X