ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಳಿಗಿರಿರಂಗನ ಬೆಟ್ಟದಲ್ಲಿ ಪ್ರವಾಸಿಗರ ಸೆಳೆದ ಮೂರು ಹುಲಿಗಳು!

|
Google Oneindia Kannada News

ಚಾಮರಾಜನಗರ, ಫೆಬ್ರವರಿ 10: ಬಂಡೀಪುರದಂತೆ ಇದೀಗ ಬಿಳಿಗಿರಿರಂಗನ ಬೆಟ್ಟದ ಅರಣ್ಯದಲ್ಲಿಯೂ ಹುಲಿಗಳು ಕಾಣಿಸಿಕೊಳ್ಳುತ್ತಿರುವುದು ಪ್ರಾಣಿಪ್ರಿಯರ ಮನವನ್ನು ಮುದಗೊಳಿಸಿದೆ.

ಬಂಡೀಪುರ ಸಫಾರಿಯ ವೇಳೆ ಹುಲಿಗಳು ಕಾಣಿಸುವುದು ಮಾಮೂಲಿ. ಆದರೆ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿ ಪ್ರದೇಶದಲ್ಲಿ ಮೂರು ಹುಲಿಗಳು ಜೊತೆಯಾಗಿ ದರ್ಶನ ನೀಡಿರುವುದು ಪ್ರವಾಸಿಗರನ್ನು ಪುಳಕಗೊಳಿಸಿದೆ.

ಬಂಡೀಪುರದಲ್ಲಿ ವೀಕ್ಷಕರನ್ನು ಪುಳಕಗೊಳಿಸಿದ ಪಕ್ಷಿಗಳು ಬಂಡೀಪುರದಲ್ಲಿ ವೀಕ್ಷಕರನ್ನು ಪುಳಕಗೊಳಿಸಿದ ಪಕ್ಷಿಗಳು

ಮೂರು ಹುಲಿಗಳ ಅಪರೂಪದ ದರ್ಶನ

ಮೂರು ಹುಲಿಗಳ ಅಪರೂಪದ ದರ್ಶನ

ಬೇಸಿಗೆ ಕಾಲ ಆರಂಭವಾಗುತ್ತಿದ್ದು, ಅರಣ್ಯದಲ್ಲಿದ್ದ ಕುರುಚಲು ಕಾಡುಗಳು ಒಣಗಿವೆ. ಬಹುತೇಕ ಮರಗಳ ಎಲೆಗಳು ಉದುರಿ ಬೋಳು ಬೋಳಾಗಿದೆ. ಹೀಗಾಗಿ ಮಳೆಗಾಲದಲ್ಲಿ ಒತ್ತೊತ್ತಾಗಿ ಹಸಿರಿನಿಂದ ಕಂಗೊಳಿಸುತ್ತಿದ್ದ ಅರಣ್ಯ ಪ್ರದೇಶ ಸಡಿಲಗೊಂಡಂತೆ ಭಾಸವಾಗುತ್ತಿದೆ. ಪ್ರಾಣಿಗಳು ಆಹಾರ ಮತ್ತು ನೀರನ್ನು ಅರಸುತ್ತಾ ಅರಣ್ಯದಲ್ಲಿ ಓಡಾಡುತ್ತಿವೆ. ಈ ನಡುವೆ ಹುಲಿಗಳು ಕೂಡ ನೀರು ಮತ್ತು ಬೇಟೆಗೆ ಒಂದೆಡೆಯಿಂದ ಮತ್ತೊಂದೆಡೆ ಸಂಚಾರ ಹೊರಟಿವೆ. ಹೀಗಾಗಿ ಹುಲಿಗಳ ಅಪರೂಪದ ದೃಶ್ಯ ಮಂಗಳವಾರ ಕೆ.ಗುಡಿ ಸಫಾರಿಗೆ ತೆರಳಿದವರಿಗೆ ನೋಡಲು ಸಿಕ್ಕಿದೆ. ಸಾಮಾನ್ಯವಾಗಿ ಹುಲಿಗಳು ಏಕಾಂಗಿಯಾಗಿ ಅಡ್ಡಾಡುವ ದೃಶ್ಯಗಳು ಆಗಾಗ್ಗೆ ಕಾಣುತ್ತಿರುತ್ತವೆ. ಆದರೆ ಇಲ್ಲಿ ಮೂರು ಹುಲಿಗಳು ಜತೆಯಾಗಿ ತೆರಳುತ್ತಿದ್ದದ್ದು ವಿಶೇಷವಾಗಿತ್ತು.

ಯಳಂದೂರಿನಿಂದ ಸುಮಾರು 15 ಕಿ.ಮೀ ದೂರ

ಯಳಂದೂರಿನಿಂದ ಸುಮಾರು 15 ಕಿ.ಮೀ ದೂರ

ಹಾಗೆ ನೋಡಿದರೆ ಬಿಳಿಗಿರಿರಂಗನ ಬೆಟ್ಟವು ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಕುಲ, ಬೆಟ್ಟಗುಡ್ಡಗಳಿಂದ ಆವೃತವಾದ ನಿಸರ್ಗ ಸುಂದರ ಅರಣ್ಯವಾಗಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 1552 ಮೀಟರ್ ಎತ್ತರದಲ್ಲಿದ್ದು, ಸುಮಾರು 750 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದೆ. ಇಲ್ಲಿನ ಮುಖ್ಯ ವಿಶೇಷತೆ ಏನೆಂದರೆ ಬಿಳಿಪಟ್ಟೆಗಳ ಹುಲಿಗಳ ಹಾಗೂ ಏಷ್ಯಾದ ಆನೆಗಳ ವಾಸಕ್ಕೆ ಇದು ಯೋಗ್ಯ ತಾಣವಾಗಿದೆ. ಅರಣ್ಯದಲ್ಲಿ ಶ್ರೀಗಂಧ, ಹೊನ್ನೆ, ಮತ್ತಿ, ಬೂರುಗ, ಬೀಟೆ, ಬನ್ನಿ, ಮೊದಲಾದ ಅಮೂಲ್ಯ ಮರಗಳಲ್ಲದೆ ಐತಿಹಾಸಿಕ ದೊಡ್ಡ ಮತ್ತು ಚಿಕ್ಕ ಸಂಪಿಗೆ ಇಲ್ಲಿನ ಆಕರ್ಷಣೆಯಾಗಿದೆ. ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ಕಾಡು ಪ್ರಾಣಿಗಳು, 420ಕ್ಕೂ ಅಧಿಕ ಪಕ್ಷಿ ಸಂಕುಲಗಳಿವೆ ಎಂದು ಹೇಳಲಾಗುತ್ತಿದೆ.

ಬಿಳಿಗಿರಿರಂಗನ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶ

ಬಿಳಿಗಿರಿರಂಗನ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶ

ವನ್ಯಧಾಮವಾಗಿರುವ ಬಿಳಿಗಿರಿರಂಗನ ಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಗಿದ್ದು, ಇದು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿಯಾಗಿದೆ. ಈ ಅರಣ್ಯದಲ್ಲಿ ಬಹಳ ಹಿಂದಿನಿಂದಲೂ ಸೋಲಿಗರು ವಾಸ ಮಾಡುತ್ತಾ ಬಂದಿದ್ದು, ಇಲ್ಲಿ ಸಿಗುವ ಅರಣ್ಯ ಉತ್ಪನ್ನವೇ ಅವರ ಬದುಕಿಗೆ ಆಸರೆಯಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ಅಭಿವೃದ್ಧಿ ಕಾರ್ಯ ಇದೀಗ ನಡೆಯುತ್ತಿದೆ. ಇನ್ನು ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಗೆ ಸೇರುವ ಬೇಡಗುಳಿ, ಹೊನ್ನಮೇಟಿ, ಅತ್ತಿಖಾನಿ ಮೊದಲಾದ ಅರಣ್ಯ ಪ್ರದೇಶಗಳು ನಿಸರ್ಗ ಸುಂದರ ಪ್ರದೇಶಗಳಾಗಿವೆ.

Recommended Video

ನಾಳೆಯಿಂದ ಫೆ. 25ರವರೆಗೆ ಕೃಷಿ ಹಾಗೂ ಕರಾವಳಿ ಕಲೋತ್ಸವ | Oneindia Kannada
ಅಲ್ಲಲ್ಲಿ ಕಾಣಸಿಗುವ ಸೋಲಿಗರ ಜೋಪಡಿ

ಅಲ್ಲಲ್ಲಿ ಕಾಣಸಿಗುವ ಸೋಲಿಗರ ಜೋಪಡಿ

ಇದುವರೆಗೆ ಬಿಳಿಗಿರಿರಂಗನ ಬೆಟ್ಟದ ಅರಣ್ಯದಲ್ಲಿ ಸಂಚರಿಸುವ ಪ್ರವಾಸಿಗರಿಗೆ ಕಾಡಿನ ನಡುವೆ ಅಲ್ಲಲ್ಲಿ ಕಾಣಸಿಗುವ ಸೋಲಿಗರ ಜೋಪಡಿಗಳು, ಅದರಾಚೆಗೆ ಕಾಫಿ, ಕಿತ್ತಳೆ, ಬಾಳೆ, ಹಿಪ್ಪನೇರಳೆ ಬೆಳೆಯ ತೋಟಗಳು, ಕಾಡಿನ ನಡುವಿನ ಅಂಕುಡೊಂಕಿನ ರಸ್ತೆಗಳಲ್ಲಿ ತಲೆ ಮೇಲೆ ಅರಣ್ಯ ಉತ್ಪನ್ನಗಳ ಹೊರೆ ಹೊತ್ತು ಸಾಗುವ ಸೋಲಿಗರು, ನೆಗೆದು ಓಡುವ ಜಿಂಕೆಗಳು, ಘೀಳಿಡುವ ಆನೆಗಳು ಕಾಣಿಸುತ್ತಿದ್ದವು. ಇದೀಗ ಕೆ.ಗುಡಿ ಸಫಾರಿ ಪ್ರದೇಶದಲ್ಲಿ ಹುಲಿಗಳು ಕಂಡು ಬಂದಿರುವುದು ಪ್ರಾಣಿಪ್ರಿಯರನ್ನು ಅತ್ತ ಸುಳಿಯುವಂತೆ ಮಾಡಿದೆ.

English summary
Tigers are also appearing in the Biligirirangana Betta, like Bandipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X