ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮರಸ್ಯಕ್ಕೊಂದು ಅರ್ಥ: ಚಾಮರಾಜನಗರದಲ್ಲಿ ಮುಸ್ಲಿಂ ವ್ಯಕ್ತಿಯಿಂದ ಗಣೇಶ ದೇವಸ್ಥಾನ ನಿರ್ಮಾಣ

|
Google Oneindia Kannada News

ಚಾಮರಾಜನಗರ, ಏಪ್ರಿಲ್ 8: ಸಮಾಜದಲ್ಲಿ ಧಾರ್ಮಿಕ ಸೌಹಾರ್ದತೆಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿಜಾಬ್, ಹಲಾಲ್, ಅಜಾನ್ ಮತ್ತಿತರ ವಿವಾದಗಳ ನಡುವೆ ಚಾಮರಾಜನಗರ ತಾಲೂಕಿನ ಚಿಕ್ಕಹೊಳೆ ಅಣೆಕಟ್ಟೆ ಬಳಿ ಮುಸ್ಲಿಂ ವ್ಯಕ್ತಿಯೊಬ್ಬರು ಸಾಮರಸ್ಯ ಸಂದೇಶ ಸಾರಿದ್ದಾರೆ.

ಜಲಸಂಪನ್ಮೂಲ ಇಲಾಖೆಯ ನಿವೃತ್ತ ನೌಕರ ಪಿ. ರೆಹಮಾನ್ ಎಂಬುವರು ಚಿಕ್ಕಹೊಳೆ ಅಣೆಕಟ್ಟೆ ಬಳಿ ಗಣೇಶನ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ನಿತ್ಯ ಪೂಜೆ ನಡೆಸಲು ಒಬ್ಬ ಅರ್ಚಕರನ್ನೂ ನೇಮಿಸಿದ್ದಾರೆ. ರೆಹಮಾನ್ ಸದ್ಯ ಸುವರ್ಣಾವತಿ ಮತ್ತು ಚಿಕ್ಕಹೊಳೆ ಅಣೆಕಟ್ಟುಗಳಲ್ಲಿ ಗೇಟ್ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಲಾಲ್, ಹಿಜಾಬ್ ವಿವಾದ; ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ಎಂದ ಸಿಎಂ ಹಲಾಲ್, ಹಿಜಾಬ್ ವಿವಾದ; ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ ಎಂದ ಸಿಎಂ

ಅರ್ಚಕನಿಗೆ ಮಾಸಿಕ ಸಂಬಳ ಕೊಡುತ್ತಿದ್ದು, ದೇವಸ್ಥಾನದಲ್ಲಿ ಪ್ರತಿ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆಗಳು ನಡೆಯುತ್ತವೆ ಮತ್ತು ಗ್ರಾಮಸ್ಥರು ಈ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

The Ganesha Temple Was Built By A Muslim Man In Chamarajanagar

ಪಿ. ರೆಹಮಾನ್ ಅವರು 2018ರಲ್ಲಿ ಜಲಸಂಪನ್ಮೂಲ ಇಲಾಖೆಯಿಂದ ನಿವೃತ್ತರಾಗಿದ್ದರು. ಅವರು ನಿವೃತ್ತರಾಗುವ ಒಂದೆರಡು ತಿಂಗಳ ಮೊದಲು ಚಿಕ್ಕಹೊಳೆ ಅಣೆಕಟ್ಟಿನ ಬಳಿಯ ಉದ್ಯಾನವನದಿಂದ ಗಣೇಶನ ಮೂರ್ತಿಯನ್ನು ಕಳವು ಮಾಡಲಾಗಿದೆ ಎಂದು ಹೇಳಿದರು.

"ಗಣೇಶನ ಮೂರ್ತಿ ಕಳವು ಸುದ್ದಿ ಕೇಳಿ ನನಗೆ ಬೇಸರವಾಗಿತ್ತು. ನಂತರ ಶೀಘ್ರದಲ್ಲೇ ನನಗೆ ಮರುಕಳಿಸುವ ಕನಸುಗಳು ಬಿದ್ದವು, ಅದರಲ್ಲಿ ದೇವರು ನನಗೆ ದೇವಾಲಯವನ್ನು ನಿರ್ಮಿಸಲು ಹೇಳಿದನು. ಹೀಗಾಗಿ ನಾನು ಗಣೇಶನ ದೇವಾಲಯವನ್ನು ನಿರ್ಮಿಸಿದೆ," ಎಂದು ಪಿ. ರೆಹಮಾನ್ ಹೇಳಿದರು.

Recommended Video

Zameer Ahmed ಕಾಂಗ್ರೆಸ್ ತೊರೆದು JDS ಸೇರಲಿದ್ದಾರ | Oneindia Kannada

"ನಾವು ಅಲ್ಲಾನನ್ನು ಪೂಜಿಸುವಂತೆ, ಹಿಂದೂಗಳು ಈಶ್ವರನನ್ನು ಪೂಜಿಸುತ್ತಾರೆ. ರಕ್ತದ ಬಣ್ಣವು ಹಿಂದೂ ಮತ್ತು ಮುಸ್ಲಿಂ ಇಬ್ಬರಿಗೂ ಒಂದೇ ಆಗಿರುತ್ತದೆ. ಎಲ್ಲಾ ದೇವರುಗಳು ಒಂದೇ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಬಹಳ ಸಮಯದಿಂದ ಗಣೇಶನನ್ನು ಪೂಜಿಸುತ್ತಿದ್ದೇನೆ. ನನಗೆ ಸಂತೋಷವಾಗಿದೆ," ಎಂದು ಪಿ. ರೆಹಮಾನ್ ಹೇಳಿದ್ದಾರೆ.

English summary
P Rehman, a retired employee of the water resources department, has got a Ganesha temple built near Chikkahole Dam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X