ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಸಕ್ಕರೆ ಕಾರ್ಖಾನೆಗೆ ತಮಿಳುನಾಡು ಕಾರ್ಮಿಕರು

|
Google Oneindia Kannada News

ಚಾಮರಾಜನಗರ, ಏಪ್ರಿಲ್ 29: ಹಸಿರು ವಲಯದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಪುನರಾರಂಭಗೊಂಡಿದೆ.

ಆದರೆ ಕಾರ್ಖಾನೆ ಆಡಳಿತ ಮಂಡಳಿ ತಮಿಳುನಾಡಿನಿಂದ 45 ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆಸಿಕೊಂಡಿರುವುದು ಕೊರೊನಾ ವೈರಸ್ ಮುಕ್ತವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಭಾರೀ ಆತಂಕ ಉಂಟುಮಾಡಿದೆ.

ಆಘಾತಕಾರಿ ಸುದ್ದಿ: ಪೋಷಕರೇ ಎಚ್ಚರವಾಗಿರಿ ಮಕ್ಕಳಲ್ಲೂ ಹೆಚ್ಚಿದ ಕೊರೊನಾ! ಆಘಾತಕಾರಿ ಸುದ್ದಿ: ಪೋಷಕರೇ ಎಚ್ಚರವಾಗಿರಿ ಮಕ್ಕಳಲ್ಲೂ ಹೆಚ್ಚಿದ ಕೊರೊನಾ!

ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲೇ 5 ನೇ ಸ್ಥಾನದಲ್ಲಿರುವ ತಮಿಳುನಾಡಿನಿಂದ ಕಾರ್ಮಿಕರನ್ನು ಕರೆಸಿಕೊಳ್ಳುವ ಅನಿವಾರ್ಯವಾದರೂ ಏನಿದೆ ಎಂದು ರೈತ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಒಂದು ವೇಳೆ ಆ ಕಾರ್ಮಿಕರ ಮೂಲಕ ಜಿಲ್ಲೆಗೆ ಕೊರೊನಾ ತಗುಲಿದರೆ ಯಾರು ಹೊಣೆ ಎಂದು ರೈತ ಮುಖಂಡರು ಪ್ರಶ್ನಿಸಿದ್ದಾರೆ.

Tamilnadu Workers Come To Chamarajanagar Sugar Factory

ಹೊರ ರಾಜ್ಯದಿಂದ ಬರುವ ಕಾರ್ಮಿಕರನ್ನು ಹದಿನಾಲ್ಕು ದಿನ ಕ್ವಾರಂಟೈನ್ ನಲ್ಲಿಟ್ಟು ನಂತರ ಕೆಲಸಕ್ಕೆ ತೆಗೆದುಕೊಳ್ಳಬೇಕಿತ್ತು. ಇಲ್ಲದಿದ್ದರೆ ಅವರ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆ ನಡೆಸಿ ನಂತರ ಕಾರ್ಖಾನೆಗೆ ಕಳುಹಿಸಬೇಕಿತ್ತು ಎಂದು ರೈತರ ಅಭಿಪ್ರಾಯವಾಗಿದೆ.

ಭಾರತದಲ್ಲಿ ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಭಾರತದಲ್ಲಿ ಸಾವಿರದ ಗಡಿ ದಾಟಿದ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ

ಆದರೆ ಇದ್ಯಾವುದನ್ನು ಮಾಡದೇ ಕೇವಲ ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಿ ಕಾರ್ಖಾನೆಗೆ ಕಳುಹಿಸಲಾಗಿದೆ. ಹತ್ತಾರು ಮಂದಿಗೆ ಕೊರೊನಾ ಹರಡಿದ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆ ಪ್ರಕರಣ ನಮ್ಮ ಎದುರಿಗೆ ಇದ್ದು, ತಮಿಳುನಾಡಿನ ಕಾರ್ಮಿಕರನ್ನು ಕರೆಸಿಕೊಂಡಿದ್ದು ಎಷ್ಟು ಸರಿ ಹಾಗು ಜಿಲ್ಲಾಡಳಿತ ಇದಕ್ಕೆ ಹೇಗೆ ಅವಕಾಶ ಮಾಡಿಕೊಟ್ಟಿತ್ತು ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Chamarajanagara Sugar Factory has been reopened after the lockdown was Released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X