ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ವಾಡಿ ಮಾರಮ್ಮ ದುರಂತ ಪ್ರಕರಣ : ಆರೋಪಿಗಳಿಗೆ ವಕೀಲರು ಸಿಕ್ಕರು

|
Google Oneindia Kannada News

ಚಾಮರಾಜನಗರ, ಜನವರಿ 24 : ಸುಳ್ವಾಡಿ ಮಾರಮ್ಮ ದೇವಾಲಯದ ಪ್ರಸಾದ ದುರಂತ ಪ್ರಕರಣದ ಆರೋಪಿಗಳಿಗೆ ಕೊನೆಗೂ ವಕೀಲರು ಸಿಕ್ಕಿದ್ದಾರೆ. ಜನವರಿ 29ರಂದು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಮಡಿಕೇರಿ ಮೂಲದ ವಕೀಲ ಅಪ್ಪಣ್ಣ, ಸುದೇಶ್, ಲೋಹಿತ್ ಅವರು ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರವಾಗಿ ವಕಾಲತ್ತು ವಹಿಸಲಿದ್ದಾರೆ. ಈಗಾಗಲೇ ಆರೋಪಿ ಪರವಾಗಿ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿದೆ.

ವಕಾಲತ್ತು ವಹಿಸದ ವಕೀಲರು: ವಿಷಪ್ರಸಾದ ಆರೋಪಿಗಳಿಗೆ ಜೈಲೇ ಗತಿ!ವಕಾಲತ್ತು ವಹಿಸದ ವಕೀಲರು: ವಿಷಪ್ರಸಾದ ಆರೋಪಿಗಳಿಗೆ ಜೈಲೇ ಗತಿ!

Sulvadi case

ಚಾಮರಾಜನಗರ ಜಿಲ್ಲೆಯ ವಕೀಲರು ಆರೋಪಿಗಳ ಪರವಾಗಿ ವಾದ ಮಂಡನೆ ಮಾಡದಿರಲು ತೀರ್ಮಾನ ಕೈಗೊಂಡಿದ್ದರು. ಆದರೆ, ಈಗ ಮಡಿಕೇರಿ ಮೂಲದ ವಕೀಲರು ಚಾಮರಾಜನಗರ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಹಾಕಿದ್ದಾರೆ.

ಸುಳ್ವಾಡಿ ದುರಂತಕ್ಕೆ ಒಂದು ತಿಂಗಳು : ಇನ್ನೂ ಮಾಸದ ಸಾವಿನ ನೋವುಸುಳ್ವಾಡಿ ದುರಂತಕ್ಕೆ ಒಂದು ತಿಂಗಳು : ಇನ್ನೂ ಮಾಸದ ಸಾವಿನ ನೋವು

ಸರ್ಕಾರಿ ವಕೀಲರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಆದ್ದರಿಂದ, ಅರ್ಜಿಯ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿ ನ್ಯಾಯಾಧೀಶ ಬಸವರಾಜು ಆದೇಶ ಹೊರಡಿಸಿದ್ದಾರೆ.

'ಕೆಲವೇ ದಿನಗಳಲ್ಲಿ ಕಿಚ್ಚುಗುತ್ತಿ ಮಾರಮ್ಮನ ದೇಗುಲ ಸರ್ಕಾರದ ವಶಕ್ಕೆ''ಕೆಲವೇ ದಿನಗಳಲ್ಲಿ ಕಿಚ್ಚುಗುತ್ತಿ ಮಾರಮ್ಮನ ದೇಗುಲ ಸರ್ಕಾರದ ವಶಕ್ಕೆ'

ಆರೋಪಿಗಳ ಪರವಾಗಿ ವಕಾಲತ್ತು ವಹಿಸಬಾರದೆಂಬ ತಮ್ಮ ನಿರ್ಣಯವನ್ನು ಬೆಂಬಲಿಸುವಂತೆ ಚಾಮರಾಜನಗರ ವಕೀಲರ ಸಂಘ ಮಡಿಕೇರಿ ವಕೀಲರಿಗೆ ಮನವಿ ಮಾಡಲಿದೆ.

English summary
Accused of the Sulvadi temple prasadam poison case finally get advocate. Madikeri based advocate will appear in court. Chamarajanagar advocates decided not to appear in favor of accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X