ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಶಿಕ್ಷಕನ ಎಡವಟ್ಟಿನಿಂದ ವಿದ್ಯಾರ್ಥಿ ಬಾಳಲ್ಲಿ ಕತ್ತಲು

By ರಾಮಸಮುದ್ರ ಎಸ್.ವೀರಭದ್ರಸ್ವಾಮಿ
|
Google Oneindia Kannada News

ಚಾಮರಾಜನಗರ, ಜೂನ್ 02: ಮಕ್ಕಳು ಗಲಾಟೆ ಮಾಡುತ್ತಿದ್ದರು ಎಂದು ಶಿಕ್ಷಕನೋರ್ವ ತನ್ನ ಕೈಯಲ್ಲಿದ್ದ ಕೋಲನ್ನ ವಿದ್ಯಾರ್ಥಿಗಳ ಮೇಲೆ ಬಿಸಾಡಿ ಅದು ವಿದ್ಯಾರ್ಥಿಯೊಬ್ಬನ ಎಡಗಣ್ಣಿಗೆ ಬಿದ್ದಿದ್ದರಿಂದ ಈಗ ವಿದ್ಯಾರ್ಥಿ ಕಣ್ಣಿಗೆ ಹಾನಿಯಾಗಿ ಹುಡುಗನ ಬಾಳಲ್ಲಿ ಅಂದತ್ವ ಆವರಿಸಿದೆ.

ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ 'ಶಾಲಾ ಡೈರಿ' ಕಡ್ಡಾಯ!ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ 'ಶಾಲಾ ಡೈರಿ' ಕಡ್ಡಾಯ!

ಚಾಮರಾಜನಗರ ಪಟ್ಟಣದಲ್ಲಿನ ಸಿ.ಆರ್.ಬಿ.ಪಿ ಎಚ್.ಪಿ.ಎಸ್ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ಗಿರಿ ಮಲ್ಲೇಶನೇ ಶಿಕ್ಷಕನ ತಪ್ಪಿನಿಂದ ಕಣ್ಣು ಕಳೆದುಕೊಂಡ ಬಾಲಕ.

Student lose his eye due to teachers mistake

ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗಿರಿ ಮಲ್ಲೇಶ್ ‌ಶಾಲಾವದಿಯಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗುತ್ತಿದ್ದು, ಈ ವೇಳೆಯಲ್ಲಿ ಶಿಕ್ಷಕ ಯೋಸೆಫ್ ಎಂಬುವವರು ತಮ್ಮ ಕೈಯಲ್ಲಿದ್ದ ಕೋಲನ್ನ ಅವರ ಗುಂಪಿನ ಮೇಲೆ ಬಿಸಾಡಿದ್ದಾರೆ ಅವರು ನೇರವಾಗಿ ಅವನ ಕಣ್ಣಿಗೆ ತಾಗಿದೆ ಉರಿ ಪ್ರಾರಂಭವಾಗಿದೆ ಆ ನಂತರ ಹುಡುಗನ ಕಣ್ಣಿಗೆ ಡ್ರಾಪ್ ಹಾಕಿ ಈ ವಿಷಯ ಯಾರಿಗೂ ಹೇಳದಂತೆ ಮನೆಗೆ ಕಳುಹಿಸಿದ್ದಾರೆ.

ಶಾಲಾ ಬೋಧನ ಅವಧಿಯಲ್ಲಿ ಶಿಕ್ಷಕರಿಗೆ ಮೊಬೈಲ್ ನಿಷೇಧಶಾಲಾ ಬೋಧನ ಅವಧಿಯಲ್ಲಿ ಶಿಕ್ಷಕರಿಗೆ ಮೊಬೈಲ್ ನಿಷೇಧ

ಮುಂದೆ ನೋವು ಹೆಚ್ಚಾಗುತ್ತಿದ್ದಂತೆ ಪೋಷಕರು ಮೈಸೂರಿನ ಕೆ.ಆರ್. ಆಸ್ಪತ್ರೆ, ವಸನ್ ಐ ಕೇರ್, ವಾತ್ಸಲ್ಯ,ಶುಶ್ರೂಶ, ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ತೋರಿಸಿದರೂ ಸಹ ಪ್ರಯೋಜನವಾಗಿಲ್ಲ. ಎಲ್ಲ ವೈದ್ಯರು ಕೈಚೆಲ್ಲಿ ಕಣ್ಣು ಬರುವುದಿಲ್ಲ, ಕಣ್ಣು ಕೊಟ್ಟರೂ ಕಣ್ಣು ಕಾಣಲು ಅಸಾದ್ಯ ಎಂದು ಬಿಟ್ಟಿದ್ದಾರೆ.

Student lose his eye due to teachers mistake

ವಿಷಯ ಗೊತ್ತಾಗುತ್ತಿದ್ದಂತೆ ಶಾಲೆಗೆ 10 ದಿನಗಳ ಕಾಲ ರಜೆ ಘೋಷಿಸಿ ಎಲ್ಲರೂ ಕಾಣೆಯಾಗಿಬಿಟ್ಟಿದ್ದಾರೆ. ಕೃತ್ಯ ಎಸಗಿದ ಯೂಸಫ್ ಅಂತೂ ಶಾಲೆ ಬಳಿಕೆ ಬಂದಿಲ್ಲ. ಕಣ್ಣು ಕಳೆದುಕೊಂಡ ಹುಡುಗನ ಪೋಷಕರು ಯೂಸಫ್‌ ಮೇಲೆ ಪ್ರಕರಣ ದಾಖಲಿಸಿದ್ದಾರೆ.

English summary
Student Giri Mallesh of Chamarajnagar lost his eye for his teachers mistake. Teacher Yusaf angrily thrown stick on Giri Mallesh which struck to his eye and damaged the eye sight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X