ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆ ಮಹದೇಶ್ವರ ಬೆಟ್ಟದಲ್ಲಿ ಬೃಹತ್ ಪ್ರತಿಮೆ ನಿರ್ಮಾಣ

|
Google Oneindia Kannada News

ಚಾಮರಾಜನಗರ, ಫೆಬ್ರವರಿ 11: ರಾಜ್ಯದಲ್ಲಿರುವ ದೇವಾಲಯಗಳ ಪೈಕಿ ಅತಿ ಹೆಚ್ಚು ಆದಾಯ ತರುವ ದೇವಾಲಯಗಳಲ್ಲೊಂದಾದ ಕೋಟಿ ಒಡೆಯನಾಗಿರುವ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ಮಲೈ ಮಹದೇಶ್ವರನ ಬೃಹತ್ ಪ್ರತಿಮೆ ನಿರ್ಮಿಸಲು ಚಿಂತನೆ ನಡೆದಿದ್ದು, ಈ ಸಂಬಂಧ 19 ಎಕರೆ ಸರ್ಕಾರಿ ಜಮೀನು ಕೂಡ ಮಂಜೂರಾಗಿದೆ.

ಸುಮಾರು ನೂರು ಅಡಿಗೂ ಹೆಚ್ಚು ಎತ್ತರದ ಪ್ರತಿಮೆಯನ್ನು ಅಂದಾಜು 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಪ್ರತಿಮೆ ನಿರ್ಮಿಸಲಾಗುತ್ತಿರುವ ಒಂದು ಎಕರೆ ಜಮೀನು ಮಧ್ಯದಲ್ಲಿದ್ದು ಖಾಸಗಿ ಜಮೀನಾಗಿದೆ. ಹೀಗಾಗಿ ಹಿಂದಿನ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಳೆದೆರಡು ತಿಂಗಳಿನಿಂದ ಈ ಜಮೀನಿನ ಮಾಲೀಕರೊಡನೆ ಸಂಧಾನ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಮೆ ನಿರ್ಮಾಣದ ಕಾಮಗಾರಿ ಚುರುಕುಗೊಳ್ಳಲಿದೆ.

Statue Of Malemahadeshwara Will Be Built In Chamarajanagar

ಕೋಟದ ಮೂಡುಗಿಳಿಯಾರಿನಲ್ಲಿ ಅತೀ ಎತ್ತರದ ವಿವೇಕಾನಂದ ಪ್ರತಿಮೆಕೋಟದ ಮೂಡುಗಿಳಿಯಾರಿನಲ್ಲಿ ಅತೀ ಎತ್ತರದ ವಿವೇಕಾನಂದ ಪ್ರತಿಮೆ

ಜಮೀನು ಖರೀದಿ ಸಂಬಂಧದ ಕ್ರಯ ಪತ್ರವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗುತ್ತಿದ್ದು ಇನ್ನು 9 ತಿಂಗಳೊಳಗಾಗಿ ಲೋಕೋಪಯೋಗಿ ಇಲಾಖೆಯವರು ಸಂಬಂಧಿತ ಗುತ್ತಿಗೆದಾರರ ಮೂಲಕ ಬೃಹತ್ ಪ್ರತಿಮೆ ನಿರ್ಮಿಸಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಿದ್ದಾರೆ ಎಂದು ಹೇಳಲಾಗಿದೆ.

English summary
There is a plan to build a huge statue of Male Mahadeshwara statue at Mahadeshwara hill in Hanur of chamarajanagar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X