ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟ್ಯಾಧೀಶ ವಿ.ಶ್ರೀನಿವಾಸ್ ಪ್ರಸಾದ್ ಬಳಿ ಚಿನ್ನವಿಲ್ಲವಂತೆ!

|
Google Oneindia Kannada News

ಚಾಮರಾಜನಗರ, ಮಾರ್ಚ್ 27:ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್ ಅವರು ಕೋಟ್ಯಾಧೀಶರಾಗಿದ್ದಾರೆ. ಆದರೆ ಚಿನ್ನ ಮಾತ್ರವಿಲ್ಲವಂತೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಾಮಪತ್ರ ಸಲ್ಲಿಸಿದ ವೇಳೆ ಆಸ್ತಿ ಕುರಿತು ಸಲ್ಲಿಸಿದ ಅಫಿಡವಿಟ್ ನಲ್ಲಿ ಒಟ್ಟು 14,16,98,082 ರೂ. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಕೈಯ್ಯಲ್ಲಿ 8.54 ಲಕ್ಷ ರೂ. ನಗದು ಸೇರಿದಂತೆ 77,62,766 ರೂ. ಮೌಲ್ಯದ ಚರಾಸ್ತಿ ಮತ್ತು 13,39,35,316 ರೂ.ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ನಟ ರವಿ ಕಿಶನ್ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ನಟ ರವಿ ಕಿಶನ್

2017-18ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವಂತೆ ಅವರ ವಾರ್ಷಿಕ ಆದಾಯ 25.77 ಲಕ್ಷ ರೂ.ಗಳಾಗಿದ್ದು ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ. ಇನ್ನು ಮೈಸೂರಿನ ಕೆ.ಎಂ.ಪುರಂನ ಎಸ್‌ಬಿಐ ಶಾಖೆಯ ಉಳಿತಾಯ ಖಾತೆಯಲ್ಲಿ 2.92 ಲಕ್ಷ ರೂ. ಚಾಮುಂಡಿಪುರಂ ಎಸ್‌ಬಿಐನಲ್ಲಿ 4.20 ಲಕ್ಷ ರೂ. ಅಪೆಕ್ಸ್ ಬ್ಯಾಂಕ್‌ನಲ್ಲಿ 1.89 ಲಕ್ಷ ರೂ., ಚಾಮುಂಡಿಪುರಂ ಎಸ್‌ಬಿಐನ ಕರೆಂಟ್ ಖಾತೆಯಲ್ಲಿ 2 ಲಕ್ಷ ರೂ. ಹಾಗೂ ವಿಶ್ವೇಶ್ವರನಗರ ಎಸ್‌ಬಿಐನಲ್ಲಿ 1.90 ಲಕ್ಷ ರೂ. ನಂಜನಗೂಡಿನ ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ 5.22 ಲಕ್ಷ ರೂ., ಠೇವಣಿ ಹಣವಿದೆ.

Srinivas Prasad filed an affidavit on the property

ರೇಮಂಡ್ಸ್ ಸಿಂಥೆಟಿಕ್ ಲಿಮಿಟೆಡ್‌ನ 5 ಸಾವಿರ ಮುಖಬೆಲೆಯ 500 ಷೇರ್ ಗಳಿವೆ. ಇದರ ಮಾರುಕಟ್ಟೆ ಮೌಲ್ಯ 4.25 ಲಕ್ಷ ರೂ.ಗಳಾಗಿದೆ. 2016ರಲ್ಲಿ ಖರೀದಿಸಿದ ಇನ್ನೋವಾ ಕ್ರಿಸ್ಟಾ ಕಾರಿದೆ. 10ಲಕ್ಷ ರೂ. ಮೌಲ್ಯದ ಪೀಠೋಪಕರಣ, ಗೃಹೋಪಯೋಗಿ ವಸ್ತುಗಳಿವೆ.

 ಲೋಕಸಭೆ ಚುನಾವಣೆ: ಕೆಲವು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ ಲೋಕಸಭೆ ಚುನಾವಣೆ: ಕೆಲವು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಮೈಸೂರಿನ ಇಂಡಸ್ಟ್ರಿಯಲ್ ಸಬರ್ಬ್ ನಲ್ಲಿ 2.94ಕೋಟಿ ರೂ. ಮೌಲ್ಯದ ಎಲ್‌ಪಿಜಿ ಗ್ಯಾಸ್ ಗೋದಾಮು, ಮೈಸೂರಿನ ಜಯಲಕ್ಷ್ಮಿ ಪುರಂನಲ್ಲಿ 3.48ಕೋಟಿ ರೂ. ಮೌಲ್ಯದ ಮನೆ ಹಾಗೂ ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿ6.96 ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ. ಎಸ್‌ಬಿಐ ನಲ್ಲಿ 3.25 ಲಕ್ಷ ರೂ. ವಾಹನ ಸಾಲ ಬಾಕಿ ಇದೆ.

ಶ್ರೀನಿವಾಸಪ್ರಸಾದ್ ಅವರ ಪತ್ನಿ ಡಿ.ಭಾಗ್ಯಲಕ್ಷ್ಮಿ ಅವರು 1.42ಲಕ್ಷ ರೂ. ನಗದು ಹೊಂದಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿರುವ ಠೇವಣಿಗಳು ಸೇರಿ ಒಟ್ಟು 20.54 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. ಪ್ರಸಾದ್ ಅವರು ಯಾವುದೇ ಚಿನ್ನಾಭರಣ ಹೊಂದಿಲ್ಲ. ಅವರ ಪತ್ನಿ 175 ಗ್ರಾಂನ 5.25 ಲಕ್ಷ ರೂ.ನ ಚಿನ್ನಾಭರಣ ಹೊಂದಿದ್ದಾರೆ. 4 ಕೆಜಿ ತೂಕದ 1.64 ಲಕ್ಷ ರೂ.ಗಳ ಬೆಳ್ಳಿ ಸಾಮಾನುಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

English summary
Former BJP minister V. Srinivas Prasad filed an affidavit on the property at the time of nomination.There is no mention of gold in it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X