ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರದಲ್ಲಿ ಗುರು ಶಿಷ್ಯರ ಹೆಸರಲ್ಲಿ ಕದನಕಲಿಗಳ ವಾಕ್ಸಮರ

|
Google Oneindia Kannada News

ಚಾಮರಾಜನಗರ, ಮಾರ್ಚ್ 23 : ಹಿಂದಿನಿಂದಲೂ ಗುರು -ಶಿಷ್ಯರೆಂಬ ಹೆಸರಿನಲ್ಲಿ ಚಿರಪರಿಚಿತರಾದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ಸಂಸದ ಧ್ರುವನಾರಾಯಣ್ ಈಗ ಲೋಕಸಭಾ ಚುನಾವಣೆಯಲ್ಲಿ ಕದನಕಲಿಗಳು. ಇದೇ ನಾಮಧೇಯವೇ ಸದ್ಯ ಇವರೀರ್ವರ ವಾಕ್ಸಮರಕ್ಕೆ ಆಹಾರವಾದಂತಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ನನ್ನ ಗುರುಗಳಲ್ಲ. ನನ್ನ ಗುರುಗಳು ರಾಜಶೇಖರ ಮೂರ್ತಿ ಅವರು ಎಂದು ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಸಂಸದ ಧ್ರುವನಾರಾಯಣ್ ಇಂದು ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಮಾ.26ರಂದು ನಾಮಪತ್ರ ಸಲ್ಲಿಸಲಿರುವ ಶ್ರೀನಿವಾಸ್ ಪ್ರಸಾದ್ ಚಾಮರಾಜನಗರದಲ್ಲಿ ಮಾ.26ರಂದು ನಾಮಪತ್ರ ಸಲ್ಲಿಸಲಿರುವ ಶ್ರೀನಿವಾಸ್ ಪ್ರಸಾದ್

ನಾನು ಮೊದಲ ಬಾರಿಗೆ ಶಾಸಕರಾಗಿದ್ದಾಗ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ಪಕ್ಷದಲ್ಲಿರಲಿಲ್ಲ. ನಾನು ಸಂತೆಮರನಹಳ್ಳಿಯಲ್ಲಿ ಗೆದ್ದಾಗ ಅವರು ಜೆಡಿಎಸ್ ನಲ್ಲಿದ್ದರು. ನಾನು ಮೊದಲ ಬಾರಿ ಗೆದ್ದಾಗ ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್ ನಾಯಕ ನಾನಾಗಿದ್ದೆ. ಅವರು ಪಕ್ಷಕ್ಕೆ ಬಂದಾಗ ಹಿರಿಯ ನಾಯಕರು ಎಂದು ಗೌರವ ಕೊಡುತ್ತಿದ್ದೆ ಅಷ್ಟೇ ಎಂದು ಹೇಳಿದರು.

Srinivas prasad and dhruvanarayan talk war on teacher student relationship on politics

ನನ್ನನ್ನ ರಾಜಕೀಯವಾಗಿ ಬೆಳೆಸಿದ್ದು ಶ್ರೀನಿವಾಸ್ ಪ್ರಸಾದ್ ಅಲ್ಲ. ರಾಜಶೇಖರ್ ಮೂರ್ತಿ ಅವರು ನನ್ನನು ರಾಜಕೀಯವಾಗಿ ಬೆಳೆಸಿದ್ದು ಅವರೇ ನನ್ನ ಗುರುಗಳು ತಿಳಿಸಿದರು. ಗುರು -ಶಿಷ್ಯ ಎಂಬ ಹೆಸರು ರಾಜಕಾರಣದಲ್ಲಿ ಇಲ್ಲ : ಗುರು - ಶಿಷ್ಯ ಕುರಿತ ಧ್ರುವನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿದ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್, ಗುರು ಶಿಷ್ಯರ ಸಂಬಂಧ ಏನಿದ್ದರೂ ರಾಮಾಯಣದಲ್ಲಿ ಮಾತ್ರ. ಇಲ್ಲೇನಿದ್ದರೂ ಅವರು ಕಾಂಗ್ರೆಸ್ , ನಾನು ಬಿಜೆಪಿ ಅಭ್ಯರ್ಥಿ ಅಷ್ಟೇ.

ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

ಶಿಷ್ಯ ಅನ್ನೋದೆಲ್ಲ ಈಗ ಉಳಿದಿಲ್ಲ ಪ್ರಜಾಪ್ರಭುತ್ವದಲ್ಲಿ ಜನರೇ ಎಲ್ಲ ತೀರ್ಮಾನ ಮಾಡುತ್ತಾರೆ. ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅವರು ಬೇರೆ ಪಕ್ಷ ನಾನು ಬೇರೆ ಪಕ್ಷ ಇಲ್ಲಿ ಗುರು ಶಿಷ್ಯ ಸಂಬಂಧ ಲೆಕ್ಕಕ್ಕೆ ಬರುವುದಿಲ್ಲ ಎನ್ನುವ ಮೂಲಕ ಶ್ರೀನಿವಾಸ್ ಪ್ರಸಾದ್ ನನ್ನ ರಾಜಕೀಯ ಗುರು ಅಲ್ಲ ಎಂಬ ವಿಷಯ ತಿರುಗೇಟು ನೀಡಿದ್ದಾರೆ.

ಆ ದುರಹಂಕಾರಿ ನಾಯಕರಿಗೆ ಜನರು ಸರಿಯಾದ ಉತ್ತರ ನೀಡಲಿದ್ದಾರೆ' ಆ ದುರಹಂಕಾರಿ ನಾಯಕರಿಗೆ ಜನರು ಸರಿಯಾದ ಉತ್ತರ ನೀಡಲಿದ್ದಾರೆ'

ಇದು ದೊಡ್ಡ ಮಹಾಸಮರ ಚುನಾವಣೆಯೇ ಆಗಿದೆ. ನಾವು ಸುಲಭವಾಗಿ ಚುನಾವಣೆಯನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಈ ಬಾರಿ ಎನ್ಡಿಎ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ದುರ್ಬಲವಾಗಿ ಎಂಟು ಸ್ಥಾನ ಬಿಟ್ಟುಕೊಟ್ಟಿದೆ.

ಬಾಗಲಕೋಟೆ ಕ್ಷೇತ್ರದ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ

ಕಾಂಗ್ರೆಸ್ ನಲ್ಲಿ ಅಸಮಾಧಾನವಾಗಿ ಮೈತ್ರಿಯಲ್ಲಿ ಅಪಸ್ವರವಿದೆ. ಕರ್ನಾಟಕ ಬಿಜೆಪಿ ಬಗ್ಗೆ ಜನರಿಗೆ ವಿಶ್ವಾಸವಿದೆ. 28 ಸ್ಥಾನಗಳಲ್ಲಿ ಅತಿ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಡೈರಿ ಬಿಡುಗಡೆಗೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರಿಂದ ಯಾವುದೇ ಪ್ರಯೋಜನವಾಗಲ್ಲ. ಚುನಾವಣೆ ಸಂದರ್ಭದಲ್ಲಿ ಇಂತಹವೆಲ್ಲ ಸಹಜ ಆರೋಪ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ನಾವು ಇಂತಹ ಸಾಕಷ್ಟು ಆರೋಪ ಮಾಡಬಹುದು. ಆದರೆ ನಮಗೆ ಅದು ಬೇಕಾಗಿಲ್ಲ. ಡೈರಿ ಬಿಡುಗಡೆ ವಿಚಾರ ಎಂದು ರಾಜಕೀಯ ಪ್ರೇರಿತ ಅಷ್ಟೇ ಎಂದರು.

ಕರ್ನಾಟಕದ ಮತದಾರರೆ, ನಿಮ್ಮ ಕ್ಷೇತ್ರ ಯಾವುದು? ಕಳೆದ ಬಾರಿ ಗೆದ್ದವರು, ಸೋತವರು ಯಾರು?

ಮಂಡ್ಯದಲ್ಲಿ ಬಿಜೆಪಿ ಸ್ಪರ್ಧೆ ವಿಚಾರ, ನಮ್ಮ ಕೈಯಲ್ಲಿ ಇಲ್ಲ. ಇದು ಮೋದಿ, ಅಮಿತ್ ಶಾ ಗಮನಕ್ಕೆ ಬಂದಿದೆ. ಮಂಡ್ಯ ಕ್ಷೇತ್ರದ ವಿಚಾರದಲ್ಲಿ ಅವರದ್ದೇ ಅಂತಿಮ ತೀರ್ಮಾನ. ಮಂಡ್ಯದಲ್ಲಿ ಪರಿಸ್ಥಿತಿ ಬೇರೆಯದೇ.

ಸುಮಲತಾ ಸ್ಪರ್ಧೆ ಮಾಡಿದ್ದಾರೆ ಅಲ್ಲಿ ಬೆಂಬಲ ಕೊಡಬೇಕೋ ಬೇಡವೋ ಅನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಅಲ್ಲಿನ ಕಾಂಗ್ರೆಸ್ ಪರಿಸ್ಥಿತಿ ಕೆಟ್ಟದಾಗಿದೆ ಕಾರ್ಯಕರ್ತರನ್ನು ಸಸ್ಪೆಂಡ್ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಯೋಚನೆ ಮಾಡಿ ನಮ್ಮ ನಾಯಕರು ನಿರ್ಧಾರ ಮಾಡುತ್ತಾರೆ ಎಂದರು .

English summary
Talk war started between BJP leader Srinivasprasad and Congress Mp dhruvanarayan about teacher – student relationship of both in Chamarajnagara politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X