ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿನೂತನ ಪ್ರಯತ್ನ; ಹಾಡಿಯ ಜನರಿಗೆ 24×7 ಸಾರಿಗೆ ವಾಹನ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜೂನ್ 19: ಆಸ್ಪತ್ರೆಗೆ ಹೋಗಬೇಕಾದರೆ ಡೋಲಿ, ಪಡಿತರ ತರಬೇಕಾದರೇ ಹೆಗಲೇ ಗತಿ ಎಂಬ ಪರಿಸ್ಥಿತಿ ಇರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಜನರಿಗೆ 24×7 ವಾಹನ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಜಾರಿಗೆ ತಂದಿದೆ‌.

ಈ ಜನರಿಗೆ ಹಲವು ವರ್ಷಗಳಿಂದ ಡೋಲಿಗಳೇ ಆಂಬುಲೆನ್ಸ್ ಆಗಿದ್ದವು, ಅನಾರೋಗ್ಯಕ್ಕೆ ತುತ್ತಾದವರನ್ನು, ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಡೋಲಿಯಲ್ಲಿಯೇ ಬೆಟ್ಟ ಹತ್ತಿ ಇಳಿದು ಕರೆತರಬೇಕಿತ್ತು. ಅಲ್ಲಿನ ಮಕ್ಕಳು ಇನ್ನು ವಾಹನ ಸೌಲಭ್ಯವೂ ಇಲ್ಲದೆ, ಕಾಡುಪ್ರಾಣಿಗಳ ಭಯಕ್ಕೆ ಶಿಕ್ಷಣದಿಂದ ವಂಚಿತರಾಗಿಗುತ್ತಿದ್ದರು. ಪಡಿತರ ತರಲು, ಅಗತ್ಯ ವಸ್ತುಗಳನ್ನು ಖರೀದಿಸಲು ಸಹಾ ಹಳ್ಳಕೊಳ್ಳಗಳನ್ನು ದಾಟಿ ಬರಬೇಕಿತ್ತು.

ಚಾಮರಾಜನಗರದಲ್ಲಿ ಆನೆ ದಾದಾಗಿರಿ; ಲಾರಿ ಅಡ್ಡಗಟ್ಟಿ ಕಬ್ಬು ವಸೂಲಿಚಾಮರಾಜನಗರದಲ್ಲಿ ಆನೆ ದಾದಾಗಿರಿ; ಲಾರಿ ಅಡ್ಡಗಟ್ಟಿ ಕಬ್ಬು ವಸೂಲಿ

ಮಲೆಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಏಡುಕುಂಡಲು ವಿಶೇಷ ಪ್ರಯತ್ನದಿಂದಾಗಿ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿರುವ ಕುಗ್ರಾಮಗಳ ನಿವಾಸಿಗಳ ಹಲವು ವರ್ಷಗಳ ಕನಸು ಕೊನೆಗೂ ಈಡೇರುತ್ತಿದೆ.

 ದಟ್ಟ ಕಾಡಿನ ಮಧ್ಯೆ ಪುಟ್ಟ ಶಾಲೆ; ಮಕ್ಕಳಿಗೆ 14 ವರ್ಷಗಳಿಂದ ಪಾಠದ ಜೊತೆ ಪರಿಸರ ಕಾಳಜಿ ದಟ್ಟ ಕಾಡಿನ ಮಧ್ಯೆ ಪುಟ್ಟ ಶಾಲೆ; ಮಕ್ಕಳಿಗೆ 14 ವರ್ಷಗಳಿಂದ ಪಾಠದ ಜೊತೆ ಪರಿಸರ ಕಾಳಜಿ

ಜಿಲ್ಲಾಡಳಿತ-ಅರಣ್ಯ ಇಲಾಖೆಯಿಂದ ಯೋಜನೆ

ಜಿಲ್ಲಾಡಳಿತ-ಅರಣ್ಯ ಇಲಾಖೆಯಿಂದ ಯೋಜನೆ

ಮಲೆಮಹದೇಶ್ವರ ವನ್ಯಧಾಮದ ಮಹದೇಶ್ವರಬೆಟ್ಟ ಮತ್ತು ಹನೂರು ವನ್ಯಜೀವಿ ವಲಯ ವ್ಯಾಪ್ತಿಯ ಅರಣ್ಯದೊಳಗೆ ರಸ್ತೆ ಮತ್ತಿತರ ಮೂಲ ಸೌಲಭ್ಯಗಳ ಕೊರತೆ ಇರುವ ಗ್ರಾಮಗಳಿಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸೇರಿ ಕಲ್ಪಿಸಿರುವ ವಾಹನ ವ್ಯವಸ್ಥೆಯೇ ಜನವನ ಸೇತುವೆ ಸಾರಿಗೆ. ಅರಣ್ಯದೊಳಗಿನ ಗ್ರಾಮಗಳ ಜನರಿಗೆ ಆರೋಗ್ಯದ ತುರ್ತು ಸಂದರ್ಭಗಳಲ್ಲಿ, ಮಕ್ಕಳು ಶಾಲೆಗೆ ಹೋಗಿ ಬರಲು, ಜನರು ಪಡಿತರ ತರಲು ಸೇರಿದಂತೆ ಇತರೆ ಉದ್ದೇಶಗಳಿಗಾಗಿ 24×7 ಅವಧಿಯಲ್ಲಿಯೂ ನಾಲ್ಕು ವಾಹನಗಳು ಸೇವೆ ನೀಡಲಿದೆ.

ನಾಲ್ಕು ವಾಹನಗಳಿಗೆ ನಾಲ್ಕು ಮಾರ್ಗಗಳನ್ನು ನಿಗದಿ ಮಾಡಲಾಗಿದೆ. ಮೊದಲನೇ ಮಾರ್ಗವು ಮೆದಗನಾಣೆ, ಮಲೆಮಹದೇಶ್ವರಬೆಟ್ಟ, ತುಳಸಿಕೆರೆ, ಇಂಡಿಗನತ್ತ, ಎರಡನೇ ಮಾರ್ಗವು ಪಡಿಸಲನತ್ತ, ಪಾಲಾರ್, ಮಲೆಮಹದೇಶ್ವರಬೆಟ್ಟ, ಮೂರನೇ ಮಾರ್ಗ ಕೊಕ್ಕಬೆರೆ, ತೋಕೆರೆ, ದೊಡ್ಡಾಣೆ, ಮಲೆಮಹದೇಶ್ವರಬೆಟ್ಟ, ನಾಲ್ಕನೇ ಮಾರ್ಗ ಪಚ್ಚೆದೊಡ್ಡಿ, ಕಾಂಚಳ್ಳಿ, ಅಜ್ಜೀಪುರ ಭಾಗಗಳಲ್ಲಿ ವಾಹನಗಳು ಸಂಚರಿಸಲಿದೆ.

ದಿನದ 24 ಗಂಟೆ ಸೇವೆ

ದಿನದ 24 ಗಂಟೆ ಸೇವೆ

ಕಡಿದಾದ ರಸ್ತೆಗಳಲ್ಲೂ ಸಂಚರಿಸುವ ಸಾಮರ್ಥ್ಯವಿರುವ 4x4 ವೀಲ್‌ ಡ್ರೈವ್‌ನ ಫೋರ್ಸ್‌ ಕಂಪನಿಯ ಗೂರ್ಖಾ ವಾಹನಗಳು ಇದಾಗಿದ್ದು ಮಲೆ ಮಹದೇಶ್ವರ ಬೆಟ್ಟದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿ ಇಂದಿನಿಂದ ಕಾರ್ಯಾರಂಭ ಮಾಡಿವೆ‌. ದಿನದ 24 ಗಂಟೆಗಳ ಕಾಲ ವಾರದ ಏಳು ದಿನಗಳೂ ಈ ವಾಹನಗಳ ಸೇವೆ ಲಭ್ಯ ಇರಲಿದೆ. ಕಳೆದವಾರ ಚಾರುಲತಾ ಸೋಮಲ್‌ ತಾವೇ ಚಲಾವಣೆ ಮಾಡುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದ್ದರು, ಇದೀಗ ಸೋಮವಾರ ಕಾರ್ಯಾರಂಭವಾಗಲಿದೆ.

ತುರ್ತುಪರಿಸ್ಥಿತಿಯಲ್ಲಿ ಉಚಿತ ಸೇವೆ

ತುರ್ತುಪರಿಸ್ಥಿತಿಯಲ್ಲಿ ಉಚಿತ ಸೇವೆ

ಜಿಲ್ಲಾಡಳಿತವು ವಾಹನಗಳ ಖರೀದಿಗಾಗಿ ₹55 ಲಕ್ಷ ವೆಚ್ಚ ಮಾಡಿದೆ. ಅರಣ್ಯ ಇಲಾಖೆಯ ನಿಯಂತ್ರಣದಲ್ಲಿ ವಾಹನಗಳು ಇರಲಿವೆ. ಈ ಸಾರಿಗೆ ವ್ಯವಸ್ಥೆ ಉಚಿತ ಅಲ್ಲ. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಾಗೂ ಶಾಲಾ ಮಕ್ಕಳನ್ನು ಉಚಿತವಾಗಿ ಕರೆದೊಯ್ಯಲಾಗುವುದು. ಪಡಿತರವನ್ನು ಕೂಡ ಉಚಿತವಾಗಿ ಸಾಗಿಸಬಹುದು. ಉಳಿದ ಸಂದರ್ಭಗಳಲ್ಲಿ ಜನರು ಹಣ ನೀಡಬೇಕಾಗುತ್ತದೆ. ಕನಿಷ್ಠ ದರವನ್ನು ನಿಗದಿ ಪಡಿಸಲಾಗುತ್ತದೆ. ಈ ಮೂಲಕ ಸಂಗ್ರಹವಾಗುವ ಹಣದಲ್ಲಿ ವಾಹನಕ್ಕೆ ಇಂಧನ ಮತ್ತು ಗ್ರಾಮಗಳ ಅಭಿವೃದ್ದಿಗೆ ಖರೀದಿಸಲಾಗುವುದು ಎಂದು ಡಿಸಿಎಫ್‌ ಏಡುಕುಂಡಲು ತಿಳಿಸಿದ್ದಾರೆ.

ಹಲವು ವರ್ಷಗಳ ಕಾಡು ಜನರ ಕಷ್ಟಕ್ಕೆ ಕೊನೆ

ಹಲವು ವರ್ಷಗಳ ಕಾಡು ಜನರ ಕಷ್ಟಕ್ಕೆ ಕೊನೆ

ಹಲವಾರು ವರ್ಷಗಳಿಂದ ಇಲ್ಲಿನ ಜನರ ಕಷ್ಟ ರಾಜಕೀಯ ನಾಯಕರು, ಅಧಿಕಾರಿಗಳಿಗೆ ಗೊತ್ತಿದ್ದರೂ ಯಾವುದೇ ಸೌಲಭ್ಯ ಒದಗಿಸಿ ಕೊಡಲು ಸಾಧ್ಯವಾಗಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳು ಇಲ್ಲಿವತೆಗೂ ಭರವಸೆಗಳಾಗಿಯೇ ಉಳಿದುಕೊಂಡಿದ್ದವು. ಆದರೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಈ ಪ್ರದೇಶಗಳಿಗೆ ಭೇಟಿ ನೀಡಿಮ ಜನರ ಕಷ್ಟಗಳನ್ನು ಕಣ್ಣಾರೆ ನೋಡಿಬಂದಿದ್ದರು. ನಂತರ ಈ ಸಮಸ್ಯಗೆ ಪರಿಹಾರ ಕಂಡು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಈ ಹಿನ್ನಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಈ ಜನ ವನಸಾರಿಗೆ ಸೇವೆಯನ್ನು ಆರಂಭಿಸಲಯ ನೆರವಾಗಿದ್ದಾರೆ. ಈ ಯೋಜನೆ ಕಾಡಿನ ಮಧ್ಯೆ ವಾಸಿಸುವ ಜನರಿಗೆ ಹೊಸ ಹೊಸ ಚೈತನ್ಯ ಬಂದಂತಾಗಿದೆ.

English summary
Chamarajanagar district administration and Forest department provide 24x7 transport facilities to the villages inside the forest under Male Mahadeshwara hills, Hanur Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X