ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಕಾಡಂಚಿನಲ್ಲಿ ಹಕ್ಕು ಚಲಾಯಿಸಿದ ಸೋಲಿಗರು

|
Google Oneindia Kannada News

ಚಾಮರಾಜನಗರ, ಏಪ್ರಿಲ್ 18:ಜಿಲ್ಲೆಯ ಕಾಡಂಚಿನಲ್ಲಿ ವಾಸವಾಗಿರುವ ಸೋಲಿಗರನ್ನು ಮತಗಟ್ಟೆಯತ್ತ ಕರೆತರುವ ಮತ್ತು ಆ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ಮಾಡುವಲ್ಲಿ ಚಾಮರಾಜನಗರ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚಾಮರಾಜನಗರ ಜಿಲ್ಲೆಯು ರಾಜ್ಯದಲ್ಲಿಯೇ ಅತೀಹೆಚ್ಚು ಬುಡಕಟ್ಟು ಸಮುದಾಯದವರನ್ನು ಒಳಗೊಂಡಿದ್ದು, ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 36 ಸಾವಿರ ಸೋಲಿಗರು ಕಾಡುಕುರುಬ ಜೇನುಕುರುಬ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ. ಇದರಲ್ಲಿ 23 ಸಾವಿರ ಮಂದಿ ಮತದಾರರಿದ್ದಾರೆ.

ಕರ್ತವ್ಯದ ವೇಳೆ ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿ:ಅಸಲಿ ಕಾರಣವೇನು?ಕರ್ತವ್ಯದ ವೇಳೆ ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿ:ಅಸಲಿ ಕಾರಣವೇನು?

ಭಾರತ ಚುನಾವಣಾ ಆಯೋಗದ ಆದೇಶದಂತೆ ಈ ಬಾರಿ ಬುಡಕಟ್ಟು ಜನಾಂಗದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚು ಮಾಡುವ ದೃಷ್ಟಿಯಿಂದ ಜಿಲ್ಲಾ ಚುನಾವಣಾ ಆಯೋಗವು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಕೆ.ಗುಡಿ ಆಶ್ರಮ ಶಾಲೆಯಲ್ಲಿ 127 ಸಂಖ್ಯೆ ಮತಗಟ್ಟೆಯನ್ನು ಸ್ಥಾಪಸಿದ್ದು, ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಪುರಾಣಿ ಪೋಡುವಿನಲ್ಲಿ 197 ಸಂಖ್ಯೆಯ ಮತಗಟ್ಟೆಯನ್ನು ಸ್ಥಾಪಿಸಿದ್ದು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮದ್ದೂರು ಕಾಲೋನಿ ಗಿರಿಜನ ಆಶ್ರಮ ಶಾಲೆಯಲ್ಲಿ 180 ಸಂಖ್ಯೆಯ ಮತಗಟ್ಟೆಯನ್ನು ಸ್ಥಾಪಿಸಿದ್ದು, ಹನೂರು ವಿಧಾನಸಭಾ ಕ್ಷೇತ್ರದ ಕೋಣನಕೆರೆ ಗಿರಿಜನ ಆಶ್ರಮ ಶಾಲೆಯಲ್ಲಿ 152 ಸಂಖ್ಯೆಯ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು.

 ಸಿಂಗಾರಗೊಂಡಿದ್ದ ಮತಗಟ್ಟೆಗಳು

ಸಿಂಗಾರಗೊಂಡಿದ್ದ ಮತಗಟ್ಟೆಗಳು

ಎಂದಿನಂತೆ ಗಿರಿಜನರು ಈ ಮತಗಟ್ಟೆಗೆ ಸಂಸ್ಕೃತಿಯನ್ನು ಬಿಂಬಿಸುವ ತಳಿರು ತೋರಣಗಳಿಂದ ಸಾಂಸ್ಕೃತಿಕ ಮತಗಟ್ಟೆಗಳನ್ನು ಚಪ್ಪರದಿಂದ ಶೃಂಗರಿಸಿದ್ದರಲ್ಲದೇ, ಮತಗಟ್ಟೆಗೆ ತಮ್ಮದೇ ಆದ ಸಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ತೊಟ್ಟು, ಗೊರುಕನ ನೃತ್ಯದ ಮೂಲಕ ಮತದಾನ ಕೇಂದ್ರಕ್ಕೆ ತೆರಳಿ, ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.

 ಮತಹಾಕಿ ಕರ್ತವ್ಯ ನಿಭಾಯಿಸಬೇಕಾದ ಯುವಜನತೆಗೇನಾಗಿದೆ? ಮತಹಾಕಿ ಕರ್ತವ್ಯ ನಿಭಾಯಿಸಬೇಕಾದ ಯುವಜನತೆಗೇನಾಗಿದೆ?

 ಮೆಹಂದಿ ಹಚ್ಚಿ ಮತದಾನಕ್ಕೆ ಸ್ವಾಗತ

ಮೆಹಂದಿ ಹಚ್ಚಿ ಮತದಾನಕ್ಕೆ ಸ್ವಾಗತ

ಗಿರಿಜನರನ್ನು ಪ್ರೋತ್ಸಾಹಿಸಲು ಕೆಲವು ಮಹಿಳೆಯರು ಅವರ ಕೈಗಳ ಮೇಲೆ ಮೆಹಂದಿ ಹಚ್ಚಿ ಮತದಾನಕ್ಕೆ ಸ್ವಾಗತ ಕೋರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಾಗೆ ನೋಡಿದರೆ ಚಾಮರಾಜನಗರ ಜಿಲ್ಲೆಯಲ್ಲಿ ಶೇ.49ರಷ್ಟು ಅರಣ್ಯ ಪ್ರದೇಶನ್ನು ಶೇ.51ರಷ್ಟು ಬಯಲು ಸೀಮೆಯನ್ನು ಒಳಗೊಂಡಿದೆ.

 ಜಿಲ್ಲೆಯ ಮತದಾರರ ಸಂಖ್ಯೆ

ಜಿಲ್ಲೆಯ ಮತದಾರರ ಸಂಖ್ಯೆ

ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಸೇರಿದಂತೆ ಎರಡು ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಮಲೈಮಹದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವನ್ಯ ಜೀವಿ ಧಾಮ ಜಿಲ್ಲೆಯ ವ್ಯಾಪ್ತಿಗೆ ಸೇರಿದೆ. ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಚಾಮರಾಜನಗರ, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲ, ಟೀ.ನರಸೀಪುರ, ನಂಜನಗೂಡು, ಹೆಗ್ಗಡದೇವನಕೋಟೆ, ವರುಣಾ, ವಿಧಾನಸಭಾ ಕ್ಷೇತ್ರಗಳು ಒಳಪಡಲಿದ್ದು, ಮತದಾರರ ಅಂತಿಮ ಪಟ್ಟಿಯಲ್ಲಿ ಈವರೆಗೆ 8 ಲಕ್ಷ 42 ಸಾವಿರ 872 ಪುರುಷರು 8 ಲಕ್ಷ 43 ಸಾವಿರ 379 ಮಹಿಳೆಯರು ಮತ್ತು 113 ತೃತೀಯ ಲಿಂಗ ಮತದಾರರಿದ್ದಾರೆ.

 ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ

ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ

ಈ ಬಾರಿ ವಿಶೇಷವಾಗಿ ಜಿಲ್ಲಾ ಚುನಾವಣಾ ಆಯೋಗವು ಅಂಗವಿಕಲರಿಗೆ ರಾಂಪ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಮತದಾರರಿಗೆ ಕಲ್ಪಿಸಿದ್ದು, ಅದನ್ನು ಕ್ಷೇತ್ರದ ಮತದಾರರು ಸದುಪಯೋಗಪಡಿಸಿಕೊಂಡು ತಮ್ಮ ಹಕ್ಕು ಚಲಾಯಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.

English summary
Lok Sabha Election 2019:Chamarajanagar district has the largest tribal community in the state.Soliga community cast their vote in Chamrajnagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X