ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದ್ಯದಲ್ಲೇ ಮುಜರಾಯಿ ವಶಕ್ಕೆ ಕಿಚ್ಚಗುತ್ತಿ ಮಾರಮ್ಮ ದೇವಸ್ಥಾನ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಡಿಸೆಂಬರ್ 16: ಕಿಚ್ಚಗುತ್ತಿ ಮಾರಮ್ಮ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಒಳಪಡಿಸಲು ಚಿಂತನೆ ನಡೆಸಲಾಗುತ್ತಿದೆ. ಸುಳ್ವಾಡಿ ಗ್ರಾಮದ ದೇವಸ್ಥಾನದಲ್ಲಿ ಪೂಜಾರಿಗಳ ಎರಡು ಬಣ ಹಾಗೂ ಟ್ರಸ್ಟ್ ನಲ್ಲೂ ಎರಡು ಬಣಗಳಿದ್ದವು. ಆದರೆ ಸ್ಪಷ್ಟವಾಗಿ ಯಾರು ಕೃತ್ಯಕ್ಕೆ ಕಾರಣ ಎಂದು ಗೊತ್ತಿಲ್ಲ ಎಂದು ಹನೂರು ಶಾಸಕ ನರೇಂದ್ರ ತಿಳಿಸಿದರು.

ಜಂಟಿ ಸುದ್ದಿಗೋಷ್ಠಿ ನಡೆಸಿ ಮಾರಮ್ಮ ದೇಗುಲದಲ್ಲಿ ವಿಷಪ್ರಸಾದ ಪ್ರಕರಣ ಕುರಿತು ಮಾತನಾಡಿದ ಶಾಸಕ ನರೇಂದ್ರ, ದೇವಾಸ್ಥಾನವನ್ನು ಮುಜರಾಯಿ ಇಲಾಖೆಗೆ ಒಳಪಡಿಸಲು ಚಿಂತನೆ ನಡೆಸಲಾಗುತ್ತಿದೆ. ಸುಳ್ವಾಡಿ ಗ್ರಾಮದ ದೇವಸ್ಥಾನದಲ್ಲಿ ಪೂಜಾರಿ ಗಳ ಎರಡು ಬಣ ಹಾಗೂ ಟ್ರಸ್ಟ್ ನಲ್ಲೂ ಎರಡು ಬಣಗಳಿದ್ದವು.

ಕಿಚ್ಚುಗುತ್ತಿ ಮಾರಮ್ಮ ದೇಗುಲದ ಅಭಿವೃದ್ಧಿಯೇ ಭಕ್ತರ ಜೀವಕ್ಕೆ ಕುತ್ತಾಯಿತಾ? ಕಿಚ್ಚುಗುತ್ತಿ ಮಾರಮ್ಮ ದೇಗುಲದ ಅಭಿವೃದ್ಧಿಯೇ ಭಕ್ತರ ಜೀವಕ್ಕೆ ಕುತ್ತಾಯಿತಾ?

ಈ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಪಡೆಯುವ ಚಿಂತನೆ ಆಗುತ್ತಿದೆ. ಸರ್ಕಾರಕ್ಕೆ ಈ ಬಗ್ಗೆ ಒತ್ತಾಯಿಸುತ್ತೇನೆ ಎಂದು ಆಗ್ರಹಿಸಿದರು. ಪ್ರಸಾದದಲ್ಲಿ ವಿಷ ಹಾಕಿರುವವರು ಯಾರೆಂದು ತನಿಖೆಯ ನಂತರವಷ್ಟೇ ಗೊತ್ತಾಗಲಿದೆ. 13ಜನ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು.

Shortly Kichchugutti Maramma temple is captured by Muzrai Department.

ವಿಷಪ್ರಸಾದಕ್ಕೆ ಮತ್ತೆರೆಡು ಬಲಿ: ಸಾವಿನ ಸಂಖ್ಯೆ 13ಕ್ಕೆ ಏರಿಕೆ ವಿಷಪ್ರಸಾದಕ್ಕೆ ಮತ್ತೆರೆಡು ಬಲಿ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಅಂದು ಮಾಲೆ ಹಾಕಿಕೊಂಡ ಎರಡು ಗುಂಪುಗಳ ಪೈಕಿ ಮೊದಲು ಬಂದ ಗುಂಪು ಪ್ರಸಾದ ಸ್ವೀಕರಿಸಿದ್ದಾರೆ. ಪ್ರಸಾದದಲ್ಲಿ ವಾಸನೆ ಬಂದರು ಕೆಲವರು ದೇವರ ಪ್ರಸಾದ ಕೆಳಗೆ ಬೀಸಾಡಬಾರದೆಂದು ತಿಂದಿದ್ದಾರೆ ಎಂದರು. ಸುಳ್ವಾಡಿ ಗ್ರಾಮದ ವಿಷಾಹಾರ ಸೇವನೆ ಪ್ರಕರಣದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ ಅವರು ಮೈಸೂರಿನ ಅಪೋಲೋ ಬಿಜಿಎಸ್ ಮತ್ತು ಜೆ ಎಸ್ ಎಸ್ ಆಸ್ಪತ್ರೆಗಳಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

English summary
Shortly Sulvadi Kichchugutti Maramma temple is captured by Muzrai Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X