ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಜಿಲ್ಲೆಯಲ್ಲಿ ನೆಲೆಯೂರಿದ ರಷ್ಯಾ ಅತಿಥಿ!

|
Google Oneindia Kannada News

ಚಾಮರಾಜನಗರ, ನವೆಂಬರ್.27 : ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಒಂದು ಊರಿನಿಂದ ಮತ್ತೊಂದು ಊರಿಗೆ ಪಕ್ಷಿಗಳು ವಲಸೆ ಹೋಗುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಅದರಲ್ಲೂ ಇದೀಗ ದೂರದ ರಷ್ಯಾ ಮತ್ತು ಚೀನಾದಲ್ಲಿ ಕಂಡು ಬರುವ ಪುಟ್ಟ ಹಕ್ಕಿಯೊಂದು ಚಾಮರಾಜನಗರ ಜಿಲ್ಲೆಗೆ ಆಗಮಿಸಿದೆ.

ಹೀಗೆ ಆಗಮಿಸಿರುವ ಪುಟ್ಟ ಹಕ್ಕಿಯು ಇದೀಗ ಗುಂಡ್ಲುಪೇಟೆಯ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಎಂಬುವರ ಮನೆಯ ಆವರಣದಲ್ಲಿರುವ ಗಿಡ ಮರಗಳಲ್ಲಿ ಆಶ್ರಯ ಪಡೆದಿದೆ. ಮರದಿಂದ ಮರಕ್ಕೆ ಹಾರುತ್ತಾ ತನ್ನದೇ ವಿಶಿಷ್ಟ ಚೆಲುವಿನಿಂದ ನೋಡುಗರನ್ನು ಆಕರ್ಷಿಸುವ ಈ ಹಕ್ಕಿಯ ಹೆಸರು ಬೂಟೆಡ್ ವಾಬ್ಲರ್.

ಎಂಥ ಸುದ್ದಿ! ಮನುಷ್ಯನೊಂದಿಗೆ ನೀರುಕಾಗೆಯ ಕುಚುಕು ಸ್ನೇಹ!ಎಂಥ ಸುದ್ದಿ! ಮನುಷ್ಯನೊಂದಿಗೆ ನೀರುಕಾಗೆಯ ಕುಚುಕು ಸ್ನೇಹ!

ಈ ಹಕ್ಕಿಯ ಕುರಿತ ಮಾಹಿತಿ ನೀಡಿರುವ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಅವರು ಸುಮಾರು 12ಸೆ.ಮೀ. ಉದ್ದ, 10ಗ್ರಾಂ ತೂಕದ ಗುಬ್ಬಚ್ಚಿಗಿಂತ ಪುಟ್ಟದಾದ ಬೂಟೆಡ್ ವಾಬ್ಲರ್ ಹಕ್ಕಿಯು ನೋಡಲು ಸುಂದರವಾಗಿದೆ. ಹಕ್ಕಿಯ ಮೇಲ್ಭಾಗ ತೆಳು ಬೂದು ಬಣ್ಣವನ್ನು ಹೊಂದಿದೆ. ಬಿಳಿ, ತೆಳು ಕ್ರೀಂ ಬಣ್ಣದ ತಳ, ಉದ್ದಬಾಲ, ಕಣ್ಣ ಮೇಲೆ ಬಿಳಿ ಹುಬ್ಬು ಹೊಂದಿ ಆಕರ್ಷಕವಾಗಿದೆ.

Russian booted Warbler bird arrived at Chamarajanagar

ಇವು ರಷ್ಯಾ ಹಾಗೂ ಚೀನಾ ದೇಶಗಳಲ್ಲಿ ವಾಸಿಸುತ್ತಿದ್ದು, ಮೇ-ಜೂನ್‌ನಲ್ಲಿ4-6 ಮೊಟ್ಟೆ ಇಟ್ಟು ಮರಿಮಾಡುತ್ತವೆ. ಆದರೆ ಚಳಿಗಾಲದಲ್ಲಿ ಭಾರತ, ಶ್ರೀಲಂಕಾಗಳಿಗೆ ವಲಸೆ ಬರುತ್ತವೆ. ಜತೆಯಾಗಿ ವಾಸಿಸುವ ಇವು ಚಳಿಗಾಲ ಮುಗಿಯುತ್ತಿದ್ದಂತೆ ತಮ್ಮ ಮೂಲನೆಲೆಗೆ ವಾಪಸಾಗುತ್ತವೆ ಎಂದು ಅವರು ಹೇಳಿದ್ದಾರೆ.

ಸೋಜಿಗ ಹುಟ್ಟಿಸುವ ಗೀಜಗದ ಜಗತ್ತು, ಸಂತಸ ಪಡಲು ಕಾರಣ ಅದೆಷ್ಟೋ!ಸೋಜಿಗ ಹುಟ್ಟಿಸುವ ಗೀಜಗದ ಜಗತ್ತು, ಸಂತಸ ಪಡಲು ಕಾರಣ ಅದೆಷ್ಟೋ!

ಪಕ್ಷಿಗಳ ಬಗ್ಗೆ ಹೆಚ್ಚಿ ಆಸಕ್ತಿ ವಹಿಸಿ ಮಾಹಿತಿ ಸಂಗ್ರಹಿಸುತ್ತಿರುವ ಮಧು ಅವರು ಬೂಟೆಡ್ ವಾಬ್ಲರ್ ಹಕ್ಕಿಯ ಬಗ್ಗೆಯೂ ಕಳೆದ 2 ವರ್ಷಗಳಿಂದ ಅಧ್ಯಯನ ನಡೆಸುತ್ತಿದ್ದು, ಈ ಹಕ್ಕಿಗಳ ಮೂಲ ಮತ್ತು ಅವುಗಳ ಜೀವನ ಕ್ರಮಗಳ ಬಗ್ಗೆಯೂ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

ಹಂಪಿಯಲ್ಲಿ ಕಾಣಿಸಿಕೊಂಡಿದೆ ಅಪರೂಪದ ಹಳದಿಕಾಲಿನ ಹಸಿರು ಪಾರಿವಾಳಹಂಪಿಯಲ್ಲಿ ಕಾಣಿಸಿಕೊಂಡಿದೆ ಅಪರೂಪದ ಹಳದಿಕಾಲಿನ ಹಸಿರು ಪಾರಿವಾಳ

ದೂರದಿಂದ ಬರುವ ಈ ಹಕ್ಕಿಗಳು ಕುರುಚಲು ಕಾಡು, ಹೊಲಗದ್ದೆಗಳಲ್ಲಿ ಹಾರಾಡುತ್ತಾ ಹುಳಹುಪ್ಪಟೆಗಳನ್ನು ತಿನ್ನುತ್ತಾ ಜೀವಿಸುತ್ತವೆ ಇವು ಚಳಿಗಾಲ ಮುಗಿದು ಬೇಸಿಗೆ ಬರುತ್ತಿದ್ದಂತೆಯೇ ತಮ್ಮ ಮೂಲ ನೆಲೆಗೆ ಮರಳುವುದನ್ನು ನಾವು ಕಾಣಬಹುದಾಗಿದೆ.

English summary
Russian booted Warbler bird arrived at Chamarajanagar district. Wildlife photographer RK Madhu informed about this bird.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X