ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ಬುಕ್ ಸ್ನೇಹಿತರಿಂದ ಈ ಸರಕಾರಿ ಶಾಲೆಗೆ ಬಂತು 22 ಸಾವಿರ ಮೌಲ್ಯದ ಚಾಕೋಲೆಟ್

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜೂ. 14: ಶಿಕ್ಷಣ ವ್ಯಾಪಾರೀಕರಣವಾದ ನಂತರ ಖಾಸಗಿ ಶಾಲೆಗಳು ಹೆಚ್ಚಾದಂತೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಸರ್ಕಾರಗಳು ಈ ಬಗ್ಗೆ ಗಮನಹರಿಸಬೇಕಾಗಿದೆ. ಪೋಷಕರು ಸಂಘಟನೆಗಳು, ಶಿಕ್ಷಕರು, ಜನಪ್ರತಿನಿಧಿಗಳು, ಸರ್ಕಾರ ಎಲ್ಲರೂ ಸೇರಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಈ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಂಡರೇ ಅದರಷ್ಟು ಪರಿಣಾಮಕಾರಿ ಸಾಧನ ಮತ್ತೊಂದಿಲ್ಲ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆ.

ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಶಾಲೆಯ ದೈಹಿಕ‌ ಶಿಕ್ಷಕ ನಾರಾಯಣ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ತಮ್ಮ ಎಫ್ ಬಿ ಸ್ನೇಹಿತರ ಮೂಲಕ ಆಗಾಗ್ಗೆ ಶಾಲೆಗೆ ಸಾಧನಾ- ಸಲಕರಣೆ, ಪುಸ್ತಕಗಳನ್ನು ಕೊಡಿಸುತ್ತಾ ಬಂದಿದ್ದಾರೆ. ಅದೇ ರೀತಿ, ಸೋಮವಾರ ಮೋಕ್ಷಗುಂಡಂ ಎಂಬ ಫೇಸ್ ಬುಕ್ ಸ್ನೇಹಿತರೊಬ್ಬರು ಬರೋಬ್ಬರಿ 22 ಸಾವಿರ ರೂ. ಮೌಲ್ಯದಷ್ಟು ಚಾಕೋಲೆಟ್ ಗಳನ್ನು ಶಾಲೆಗೆ ಕಳುಹಿಸಿಕೊಟ್ಟಿದ್ದಾರೆ.

ಖಾಸಗಿ ಶಾಲೆಗಳಿಗೆ ಪೈಪೋಟಿ

ಖಾಸಗಿ ಶಾಲೆಗಳಿಗೆ ಪೈಪೋಟಿ

ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಮೂಗು ಮುರಿದು ಮಾತನಾಡುವ ಜನರೇ ಹೆಚ್ಚು. ಆದರೆ, ಇಲ್ಲೊಂದು ಶಾಲೆ ಮಾತ್ರ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಹಾಗೆ ಸ್ಮಾರ್ಟ್ ಆಗಿ, ರಾಜ್ಯದ ಮನೆ, ಮನದ ಮಾತಾಗಿದೆ.

ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ. ಈ ಶಾಲೆ ಇಡೀ ರಾಜ್ಯದಲ್ಲೇ ಗಮನ ಸೆಳೆಯುವಂತೆ ಮಾಡಿದ ಕೀರ್ತಿ ದೈಹಿಕ‌ ಶಿಕ್ಷಣ ನಾರಾಯಣ ಅಸಾಧಾರಣ ವ್ಯಕ್ತಿ ಸಲ್ಲುತ್ತದೆ. ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಂಡರೇ ಅದರಷ್ಟು ಪರಿಣಾಮಕಾರಿ ಸಾಧನಾ ಮತ್ತೊಂದಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ ಬೇಕಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳೂ ಖಾಸಗಿ ಪಬ್ಲಿಕ್ ಶಾಲೆಗಳಿಗೆ ಪೈಪೋಟಿ ನೀಡಬೇಕು ಎಂಬ ಮಹತ್ತ ಕನಸನ್ನು ಕಟ್ಟಿಕೊಂಡು ಅದೊಂದು ದಿನ ಸೋಮವಾರ ಮೋಕ್ಷಗುಂಡಂ ಎಂಬ ಎಂಬ ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ.

150, 180 ರೂ. ಮೌಲ್ಯದ ಚಾಕೋಲೆಟ್

150, 180 ರೂ. ಮೌಲ್ಯದ ಚಾಕೋಲೆಟ್

ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಂಡರೇ ಅದರಷ್ಟು ಪರಿಣಾಮಕಾರಿ ಸಾಧನಾ ಮತ್ತೊಂದಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿ ಬೇಕಿಲ್ಲ. 150, 180 ರೂ.ಮೌಲ್ಯದ ಚಾಕೋಲೆಟ್ ಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಿದ್ದು, ಪಿಟಿ ಟೀಚರ್ ನಾರಾಯಣ ಅವರು ಇಂದು ದಾನಿಗಳ ಕೊಟ್ಟ ಚಾಕೋಲೆಟ್ ಗಳನ್ನು ವಿದ್ಯಾರ್ಥಿಗಳಿಗೆ ಹಂಚಿದ್ದಾರೆ. ಚಾಕೋಲೆಟ್ ಶಾಲೆಯ ನೂರಾರು ಮಕ್ಕಳು ಸಖತ್ ಖುಷಿಯಾಗಿದ್ದಾರೆ.

ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರ ಕಾವ್ಯಾ ಎಂಬಾಕೆ ಎಸ್ಎಸ್ಎಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಪಿಯುಸಿಗೆ ಸೇರಲು ಆರ್ಥಿಕ ಸಮಸ್ಯೆ ತಲೆದೂರಿತ್ತು. ಇದನ್ನರಿತ ನಾರಾಯಣ ಅವರು ಫೇಸ್ಬುಕ್ ಸ್ನೇಹಿತರ ಮೂಲಕ 22,500 ರೂ. ನಷ್ಟು ಹಣ, ಪುಸ್ತಕಗಳನ್ನು ಕೊಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಒಟ್ಟಿನಲ್ಲಿ ಯಾವುದೇ ಸಾಧನವನ್ನದರೂ ಒಳತಿಗೆ ಬಳಸಿದರೇ ಪರಿಣಾಮಕಾರಿಯಾಗಿರಲಿದೆ ಎಂಬುದಕ್ಕೆ ನಾರಾಯಣ ಮಾದರಿಯಾಗಿದ್ದಾರೆ

ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆದು ನಿಂತಿದೆ ಶಾಲೆ

ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆದು ನಿಂತಿದೆ ಶಾಲೆ

ಸರ್ಕಾರಿ ಶಾಲೆಗಳೆಂದರೆ ಸಾಕು ಎಲ್ಲರೂ ಮೂಗು ಮುರಿಯುವಂತೆ ಇರುತ್ತವೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಸಂಖ್ಯೆಯೂ ಸಹ ಎಲ್ಲ ಕಡೆ ಕಡಿಮೆ ಇರುತ್ತೆ. ಆದ್ರೆ ಇಲ್ಲೊಂದು ಶಾಲೆ ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆದು ನಿಂತಿದೆ. ಅದಕ್ಕೆಲ್ಲ ಕಾರಣ ಫೇಸ್​ಬುಕ್​..!

ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರದಲ್ಲಿರೋ ಸರ್ಕಾರಿ ಶಾಲೆಗೆ ಒಮ್ಮೆ ಮಾಡಿದರೇ ಯಾವುದೋ ಖಾಸಗಿ ಕಾನ್ವೆಂಟಿಗೆ ಬಂದಂತೆ ಫೀಲಾಗುತ್ತೆ. ಸುಂದರವಾದ ಆಟದ ಮೈದಾನ, ಮಕ್ಕಳಿಗೆ ಕೂರಲು ಗ್ರಾನೈಟ್ ಬೆಂಚುಗಳು, ಬಣ್ಣ-ಬಣ್ಣದ ಬಾವುಟಗಳು, ಕೊಠಡಿಯ ಮುಂದೆ ಸ್ವಾಗತ ಕಮಾನು.. ಇವೆಲ್ಲ ಶಾಲೆಯ ಅಂದ ಹೆಚ್ಚಿಸೋ ಜೊತೆಗೆ ಆಹ್ಲಾದಕರ ವಾತಾವರಣ ಸೃಷ್ಟಿಸಿವೆ.

ಈ ಶಾಲೆಯ ಉದ್ದಾರಕ್ಕೆ ಕಾರಣ ಆಗಿರೋದು ಫೇಸ್​ಬುಕ್​. ಶಾಲೆಯ ಪ್ರಗತಿಗೋಸ್ಕರ ಫೇಸ್​ಬುಕ್​ ಬಳಸಿಕೊಳ್ಳೋಕೆ ಐಡಿಯಾ ಮಾಡಿದ್ದೇ, ದೈಹಿಕ ಶಿಕ್ಷಕ ನಾರಾಯಣ ಸ್ವಾಮಿ. ಪ್ರತಿದಿನ ಇವ್ರು ಫೇಸ್ ಬುಕ್​​ನಲ್ಲಿ ಸಮಾಜ ಸೇವಕರು, ಎನ್ ಜಿಒಗಳು, ಹೊಸ ಸ್ನೇಹಿತರನ್ನು ಸಂಪರ್ಕಿಸಿ ಶಾಲಾಭಿವೃದ್ಧಿಗೆ ಕೈ ಜೋಡಿಸುವಂತೆ ಮನವಿ ಮಾಡುತ್ತಾರೆ. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಶಾಲೆಯಲ್ಲಿ ಆಚರಿಸಿ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ನೀಡುವಂತೆ ಕೋರುತ್ತಾರೆ. ಹೀಗಾಗಿ 5 ಲಕ್ಷ ರೂ.ಗಿಂತಲೂ ಹೆಚ್ಚಿನ ಮೌಲ್ಯದ ವಸ್ತುಗಳು ಕೊಡುಗೆ ರೂಪದಲ್ಲಿ ಶಾಲೆಗೆ ಹರಿದುಬಂದಿದೆ.

ದತ್ತು ಪಡೆದವರೇ ಗಿಡಗಳ ಪಾಲನೆ ನೋಡಬೇಕಿದೆ

ದತ್ತು ಪಡೆದವರೇ ಗಿಡಗಳ ಪಾಲನೆ ನೋಡಬೇಕಿದೆ

ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರದಲ್ಲಿರೋ ಸರ್ಕಾರಿ ಶಾಲೆಯಲ್ಲಿ ಇನ್ನು ಈ ಶಾಲೆಯಲ್ಲಿ 1-8 ನೇ ತರಗತಿವರೆಗೆ ಒಟ್ಟು 182 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ದಾನಿಗಳು ನೀಡಿದ ಕೊಡುಗೆಯಿಂದ ಎಲ್ಲಾ ವಿದ್ಯಾರ್ಥಿಗಳಿಗೂ ವ್ಯಾಸಂಗಕ್ಕೆ ಅನುಕೂಲವಾಗಿದೆ. ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಮಕ್ಕಳಿಗೇ ನೇರವಾಗಿ ದಾನಿಗಳೇ ವಿತರಿಸುವುದರಿಂದ ಅವರಿಗೂ ಒಂದು ಆತ್ಮತೃಪ್ತಿ ಸಿಗಲಿದೆ. ಶಾಲೆಯು ಯಾವುದೇ ರೀತಿಯ ನಗದು ದಾನವನ್ನು ಪಡೆಯದಿರುವುದು ಫೇಸ್ ಬುಕ್ ಸ್ನೇಹಿತರಲ್ಲಿ ವಿಶ್ವಾಸಾರ್ಹತೆ ಮೂಡಲು ಕಾರಣವಾಗಿದೆ.

ಶಾಲಾವರಣದ ಸುತ್ತ ಗಿಡಗಳನ್ನು ನೆಟ್ಟಿರೋ ಶಿಕ್ಷಕರು ತಾವೂ ಒಳಗೊಂಡಂತೆ ಮಕ್ಕಳಿಗೆ ಒಂದೊಂದು ಗಿಡಗಳನ್ನು ದತ್ತು ನೀಡಿದ್ದು ಆ ಗಿಡಗಳ ಪಾಲನೆಯನ್ನು ದತ್ತು ಪಡೆದವರೇ ನೋಡಿಕೊಳ್ಳಬೇಕಿದೆ. ಇನ್ನು, ಶಾಲೆಗೆ ಕೊಡುಗೆ ನೀಡಲು ಬಂದ ದಾನಿಗಳು ಒಂದೊಂದು ಗಿಡವನ್ನು ನೆಡಲಿದ್ದಾರೆ.

ಸಾಮಾಜಿಕ ಜಾಲತಾಣದಿಂದ ಮಾದರಿ

ಸಾಮಾಜಿಕ ಜಾಲತಾಣದಿಂದ ಮಾದರಿ

ಚಾಲೆಂಜಿಂಗ್​ ಸ್ಟಾರ್​ ದ​ರ್ಶನ್ ಅಭಿಮಾನಿಗಳ ಸಂಘವು ಕೂಡ ಶಾಲೆಗೆ ಕೊಡುಗೆ ನೀಡಲು ಮುಂದೆ ಬಂದಿದೆ. ಡಿಬಾಸ್ ಅವರ ಮೂಲಕವೇ ಶಾಲೆಗೆ ಸುಸಜ್ಜಿತ ಲ್ಯಾಬ್ ನೀಡುವ ಭರವಸೆ ಕೊಡಲಾಗಿದೆ.

ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಒಂದು ಕಾಳಜಿಯಿಂದ ಯಾವ ಖಾಸಗಿ ಶಾಲೆಗೂ ನಾವೇನೂ ಕಡಿಮೆಯಿಲ್ಲ ಎನ್ನುವಂತೆ ಎಲ್ಲಾ ಸೌಲಭ್ಯಗಳನ್ನು ದಾನಿಗಳಿಂದ ಪಡೆದು ಇಲ್ಲಿನ ಮಕ್ಕಳಿಗೆ ಶಿಕ್ಷಣದಲ್ಲಿ ಮತ್ತಷ್ಟು ಉತ್ಸಾಹ ತುಂಬುವ ಕೆಲಸವನ್ನು ಮಾಡಿದ್ದಾರೆ. ಏನೇ ಆದರೂ ಇಂದು ಸಾಮಾಜಿಕ ಜಾಲತಾಣಗಳಿಂದ ಕೆಟ್ಟದ್ದೇ ಹೆಚ್ಚು ಎನ್ನುವ ಸಂದರ್ಭದಲ್ಲಿ ಈ ಶಿಕ್ಷಕರೊಬ್ಬರು ಕಾಳಜಿ ಮತ್ತು ಸಮಯ ಪ್ರಜ್ಞೆ ಬದಲಾವಣೆಗೆ ನಾಂದಿಹಾಡಿದೆ. ಸಾಮಾಜಿಕ ಜಾಲತಾಣದಿಂದ ಒಳ್ಳೆಯ ಕೆಲಸವನ್ನು ಮಾಡಬಹುದು ಅನ್ನೋದನ್ನ ತೋರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

(ಒನ್ಇಂಡಿಯಾ ಸುದ್ದಿ)

Recommended Video

Dinesh Karthik 7 ನೇ ಕ್ರಮಾಂಕದಲ್ಲಿ ಬಂದ್ರೆ ಏನಾಗುತ್ತೆ ಎಂದು ಹೇಳಿದ Shreyas Iyer | *Cricket | OneIndia

English summary
Social Media can have big impact on anything we live on. A govt school at Siddayyanapura village in Chamarajanagar has felt it as the PE teacher Narayana arranges many facilities through this friends in his social media accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X