ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಡ್ಯಾಂಗಳ ಅಭಿವೃದ್ಧಿಗೆ ಕ್ರಮ; ನಿಜಗುಣರಾಜು

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಆಗಸ್ಟ್‌, 01: "ಚಾಮರಾಜನಗರದ ಜಿಲ್ಲಾ ವ್ಯಾಪ್ತಿಯ ಜಮೀನುಗಳು, ನಾಲೆಗಳು ಹಾಗೂ ಅಚ್ಚುಕಟ್ಟು ಪ್ರದೇಶಗಳಿಗೆ ಪ್ರಥಮ ಅದ್ಯತೆ ನೀಡಲಾಗುವುದು. ಜೊತೆಗೆ ಇತರೆ ಜಿಲ್ಲೆಗಳಲ್ಲೂ ಕಾರ್ಯಕ್ರಮ ರೂಪಿಸಿ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತೇನೆ" ಎಂದು ಕಾವೇರಿ ಅಚ್ಚಕಟ್ಟು ಪ್ರಾದೇಶಿಕ ಅಭಿವೃದ್ಧಿಯ ನೂತನ ಅಧ್ಯಕ್ಷ ನಿಜಗುಣರಾಜು ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನ ಮೇಲೆ ವಿಶ್ವಾಸವಿಟ್ಟು ಪದವಿಯನ್ನು ನೀಡಿದ್ದು, ಅವರ ನಿರೀಕ್ಷೆಗೂ ಮೀರಿ ಹೆಚ್ಚು ಅಭಿವೃದ್ಧಿ ಕೆಲಸವನ್ನು ಮಾಡುತ್ತೇನೆ. ಚಾಮರಾಜನಗರ ಜಿಲ್ಲೆ ನನ್ನ ಕರ್ಮ ಭೂಮಿಯಾಗಿದ್ದು, ಈ ಭಾಗದಲ್ಲಿರುವ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳು ಹಾಗೂ ಗುಂಡಾಲ್ ಡ್ಯಾಂ ಕಾಡಾ ವ್ಯಾಪ್ತಿಗೆ ಬರುತ್ತದೆ" ಎಂದರು.

ಸೋಮವಾರ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬೊಮ್ಮಾಯಿ ಭೇಟಿ ಸೋಮವಾರ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬೊಮ್ಮಾಯಿ ಭೇಟಿ

"ಈ ನಿಟ್ಟಿನಲ್ಲಿ ಡ್ಯಾಂಗಳ ವ್ಯಾಪ್ತಿಯಲ್ಲಿರುವ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಅಚ್ಚುಕಟ್ಟುದಾರರ ರೈತರ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಾಡುತ್ತೇನೆ. ಈ ಮೂಲಕ ಹೊಳೆ ಭಾಗದಲ್ಲಿರುವ ರೈತರು ಹಾಗೂ ಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ಸಮನ್ವಯತೆ ಸಾಧಿಸಿ, ವಿಶೇಷ ಕಾರ್ಯ ಯೋಜನೆಗಳನ್ನು ಅನುಷ್ಠಾನ ಮಾಡುವುದಾಗಿ" ತಿಳಿಸಿದರು.

Priority development of Chamarajanagar reservoirs says Nijagunaraju

"ಸುವರ್ಣಾವತಿ ಮತ್ತು ಚಿಕ್ಕಹೊಳೆ ಎರಡು ಜಲಾಶಯಗಳು ಚಾಮರಾಜನಗರದ ರೈತರ ಜೀವನಾಡಿಯಾಗಿದೆ. ಇವುಗಳ ಪ್ರಗತಿ, ನಾಲೆಗಳ ದುರಸ್ತಿ, ದೊಡ್ಡಕೆರೆ, ಚಿಕ್ಕಕೆರೆ ಅಭಿವೃದ್ದಿ ಮತ್ತು ಕೆರೆಗಳಿಗೆ ನೀರು ತುಂಬಿಸಲು ಹೆಚ್ಚಿನ ಒತ್ತು ನೀಡಿ, ಕಾಲುವೆಗಳ ದುರಸ್ತಿಗೆ ಕ್ರಮ ವಹಿಸುತ್ತೇನೆ. ಕಾವೇರಿ ಜಲಾಶಯದ ಅಚ್ಚಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 19 ಡ್ಯಾಂಗಳು ಸೇರಿವೆ. ನೀರು ಬಳಕೆದಾರರ ಸಂಘ, ಅಚ್ಚುಕಟ್ಟು ಪ್ರದೇಶದ ಮುಖ್ಯ ನಾಲೆಗಳನ್ನು ಹೊರತುಪಡಿಸಿ, ಇತರೇ ನಾಲೆಗಳು ಕಾಡಾ ವ್ಯಾಪ್ತಿಗೆ ಬರುತ್ತದೆ. ನನ್ನ ಹೊಲ, ನನ್ನ ರಸ್ತೆ " ಯೋಜನೆಯು ಬಹಳ ಪ್ರಾಮುಖ್ಯತೆ ಹೊಂದಿದ್ದು, ಅನುದಾನದ ಲಭ್ಯತೆಯೊಂದಿಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ" ಹೇಳಿದರು.

Priority development of Chamarajanagar reservoirs says Nijagunaraju

"ಆಗಸ್ಟ್‌ 1ರಂದು ಅಧಿಕಾರಿಗಳ ಜೊತೆ ಸಭೆ ನಡೆಸಿ, ಕಾಡಾ ವ್ಯಾಪ್ತಿಯ ಕಾರ್ಯಾಭಾರ ಮತ್ತು ಇತರೆ ವಿಚಾರಗಳನ್ನು ಚರ್ಚೆ ಮಾಡಲಾಗುವುದು. ನಂತರ ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸುತ್ತೇನೆ. ಸಭೆ ನಂತರ ಬೆಂಗಳೂರಿಗೆ ತೆರೆಳಿ ಮುಖ್ಯಮಂತ್ರಿಗಳು, ನೀರಾವರಿ ಸಚಿವರನ್ನು ಭೇಟಿ ಮಾಡಿ ಅನುದಾನ ನೀಡುವಂತೆ ಕೋರಿಕೆ‌ ಸಲ್ಲಿಸುತ್ತೇನೆ" ಎಂದರು.

Recommended Video

Basavaraj Bommai ಅವರಿಗೂ ತಟ್ಟಿದ ಮಳೆ ಎಫೆಕ್ಟ್ | *Politics | OneIndia Kannada

English summary
First priority will be given to lands, canals areas of Chamarajanagar district said president of KADA Nijgunaraju. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X