ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕರ ತೇಜೋವಧೆ ಮಾಡುತ್ತಿದ್ದ 7 ಜನರ ಬಂಧನ

|
Google Oneindia Kannada News

ಬೆಂಗಳೂರು, ಆ. 22: ಸಾಮಾಜಿಕ ಜಾಲತಾಣದಲ್ಲಿ ಬೇಕಾಬಿಟ್ಟಿಯಾಗಿ ತೇಜೋವಧೆ ಪೋಸ್ಟ್‌ಗಳನ್ನು ಹಾಕುತ್ತಿದ್ದವರಿಗೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಪೊಲೀಸರು ಪಾಠ ಕಲಿಸಿದ್ದಾರೆ. ಬಿಎಸ್‌ಪಿ ಉಚ್ಚಾಟಿತ ಶಾಸಕ ಎನ್. ಮಹೇಶ್ ಅವರ ತೇಜೋವಧೆ ಮಾಡುತ್ತಿದ್ದವರನ್ನು ಕೊಳ್ಳೆಗಾಲ ಪೊಲೀಸರು ಬಂಧಿಸಿದ್ದಾರೆ. ಅತ್ಯಂತ ವ್ಯವಸ್ಥಿತವಾಗಿ ತಂಡ ಕಟ್ಟಿಕೊಂಡು ಕಳೆದ ಒಂದು ವರ್ಷದಿಂದ ಶಾಸಕ ಎನ್. ಮಹೇಶ್ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಲಾಗುತ್ತಿತ್ತು. ಈ ಬಗ್ಗೆ ದೂರು ಕೊಟ್ಟರೂ ಯಾವುದೇ ಪ್ರಯೋಜವಾಗಿರಲಿಲ್ಲ. ಹೀಗಾಗಿ ನ್ಯಾಯಾಲಯದ ಮೂಲಕ ಶಾಸಕ ಮಹೇಶ್ ಅವರ ಬೆಂಬಲಿಗ ದೂರು ದಾಖಲಿಸಿದ್ದರು.

Recommended Video

Rajinikanth, Modi ನಂತರ ಕಾಡಿಗೆ ಎಂಟ್ರಿ ಕೊಟ್ಟ Akshay Kumar | Oneindia Kannada

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಜೆ.ಎಂ.ಎಫ್.ಸಿ ನ್ಯಾಯಾಲಯದ ಸೂಚನೆಯಂತೆ ತೇಜೋವಧೆ ಹಾಗೂ ಅವಹೇಳನಕಾರಿ ಪೋಸ್ಟ್‌ಗಳ ಕುರಿತು ಶಾಸಕ ಎನ್. ಮಹೇಶ್ ಬೆಂಬಲಿಗ ಸಿದ್ದರಾಜು ಎಂಬುವರು ದೂರು ದಾಖಲಿಸಿದ್ದರು. ನ್ಯಾಯಾಲಯದ ಸೂಚನೆಯಂತೆ ತನಿಖೆ ನಡೆಸಿದ್ದ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಎನ್. ಮಹೇಶ್ ಮೇಲೆ ತೇಜೋವಧೆ, ಅವಹೇಳನಕಾರಿ ಪೋಸ್ಟ್ ಮಾಡುತ್ತಿದ್ದ ಏಳು ಜನರ ಮೇಲೆ ಎಫ್.ಐ.ಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.

Police Arrested 7 People Who Posting Derogatory Posts In Social Media On Mla N Mahesh

ಕಳೆದ ಒಂದು ವರ್ಷದಿಂದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಕೆಟ್ಟ ಪದಗಳಿಂದ ನಿಂದನೆ ಮಾಡುತ್ತಿದ್ದರು. ಹೀಗೆ ಪೋಸ್ಟ್ ಮಾಡುತ್ತಿದ್ದ ಶ್ರೀಕಾಂತ್ ಅಪ್ಪಗೆರೆ, ಮಹಿಮಹೀಷ, ಮೋಹನ್ ಮೂಕನಾಯಕ, ಸದಾಶಿವ ರಾವಣ್, ಮುರುಳೀಧರ ಮೌರ್ಯ ಹಾಗೂ ರವಿಕುಮಾರ್ ಎಂಬುವರ ಮೇಲೆ ದೂರು ದಾಖಲಾಗಿತ್ತು. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ನ್ಯಾಯಾಲಯದ ಸೂಚನೆಯಂತೆ ಎನ್. ಮಹೇಶ್ ಅಭಿಮಾನಿ ಬಳಗದ ಸಿದ್ದರಾಜು ಪ್ರಕರಣ ದಾಖಲಿಸಿದ್ದರು.

English summary
Police have arrested seven people who make derogatory posts on Chamarajanagar district Kollegala assembly costituency BSP expelled MLA N Mahesh on Social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X