• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮರಾಜನಗರ: ಗಂಡನನ್ನು ಕೊಲೆ ಮಾಡಿ ನಾಟಕವಾಗಿದ್ದ ಹೆಂಡತಿ ಪೊಲೀಸರ ವಶಕ್ಕೆ

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಅಕ್ಟೋಬರ್ 8: ಪ್ರಿಯಕರನ ಜೊತೆ ಸೇರಿ ತನ್ನ ಗಂಡನನ್ನೇ ಕೊಲೆ ಮಾಡಿ, ಆತ ನಾಪತ್ತೆಯಾಗಿದ್ದಾನೆ ಎಂದು ನಾಟಕವಾಡಿದ್ದ ಹೆಂಡತಿಯನ್ನು ಪೊಲೀಸರು ಬಂಧಿಸಿದರುವ ಘಟನೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿಯಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ರಾಘವಪುರ ಗ್ರಾಮದ ನಾಗರಾಜನಾಯ್ಕ (40) ಕೊಲೆಯಾದ ವ್ಯಕ್ತಿ. ಹೆಂಡತಿ ಪದ್ಮಾ (26) ಹಾಗೂ ಪ್ರಿಯಕರ ಮಣಿಕಂಠ (26) ಎಂಬುವನನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿಯಲ್ಲಿ ಮಗನನ್ನೇ ಬರ್ಬರವಾಗಿ ಕೊಂದ ತಂದೆ

ಕಳೆದ ಸೆಪ್ಟೆಂಬರ್ 11ರ ಮಧ್ಯರಾತ್ರಿ ತೊಂಡವಾಡಿ ಜಮೀನಿನಲ್ಲಿ ಪದ್ಮಾ ಹಾಗೂ ಮಣಿಕಂಠ ಜೊತೆಗಿದ್ದ ಸಮಯ ಗಂಡನ ಕೈಗೆ ಸಿಕ್ಕಿಬಿದ್ದಿದ್ದಾರೆ. ಅದೇ ಸಮಯದಲ್ಲಿ ಇಬ್ಬರೂ ಸೇರಿ ನಾಗರಾಜನಿಗೆ ಕಲ್ಲಿನಲ್ಲಿ ಹೊಡೆದು ಕೊಂದು ಕಳಲೆ ಕಾಲುವೆಗೆ ಬಿಸಾಡಿದ್ದಾರೆ.

   Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02

   ಸೆ.16ರಂದು ಬೇಗೂರು ಠಾಣೆಯಲ್ಲಿ, ಮೈಸೂರಿಗೆ ಹೋದವರು ಇನ್ನೂ ಬಂದಿಲ್ಲ ಎಂದು ದೂರು ನೀಡಿದ್ದಾರೆ. ಈ ಕುರಿತು ಪದ್ಮಾ ಮೇಲೆ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಾಗ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳು ಶವವನ್ನು ಕಾಲುವೆಗೆ ಎಸೆದಿದ್ದು, ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

   English summary
   Police arrested a woman who killed her husband with lover in gundlupete of chamarajanagar district
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X