ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೌದೆ ಕಡಿಯಲು ಕಾಡಿಗೆ ಹೋದ ವ್ಯಕ್ತಿ ಕಾಡಾನೆ ದಾಳಿಗೆ ಬಲಿ

|
Google Oneindia Kannada News

ಚಾಮರಾಜನಗರ, ನವೆಂಬರ್ 18: ಸೌದೆ ಕಡಿಯಲೆಂದು ಹೋದ ವ್ಯಕ್ತಿಯೊಬ್ಬ ಕಾಡಾನೆಗೆ ಬಲಿಯಾಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಕಾಲೋನಿಯಲ್ಲಿ ನಡೆದಿದೆ.

 ಜಮೀನಿಗೆ ಹೋದವ ಮರಳಿ ಬರಲೇ ಇಲ್ಲ; ಕಾಡು ಪ್ರಾಣಿಗೆ ಆಹಾರವಾದ ರೈತ ಜಮೀನಿಗೆ ಹೋದವ ಮರಳಿ ಬರಲೇ ಇಲ್ಲ; ಕಾಡು ಪ್ರಾಣಿಗೆ ಆಹಾರವಾದ ರೈತ

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕರೆ ವಲಯಕ್ಕೆ ಸೇರಿದ ಕಣಿಯನಪುರ ಕಾಲೋನಿ ಗ್ರಾಮದ ರಂಗರಾಜು (54) ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ. ಇವರು ಭಾನುವಾರ ಸೌದೆ ತರಲೆಂದು ಕಾಡಿಗೆ ತೆರಳಿದ ಅವರು ಸಂಜೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಹೀಗಾಗಿ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸಿಬ್ಬಂದಿ ಹುಡುಕಾಟ ನಡೆಸಿದ್ದರಾದರೂ ಸುಳಿವು ಸಿಕ್ಕಿರಲಿಲ್ಲ.

Person Killed By Elephant When Went To Bring Wood In Chamarajanagar

ಸೋಮವಾರ ಬೆಳಿಗ್ಗೆ ರಂಗರಾಜುವಿನ ಶವ ದೊರೆತಿದೆ. ಅವರ ಮೇಲೆ ಕಾಡಾನೆಗಳು ದಾಳಿ ಮಾಡಿರುವುದು ದೃಢಪಟ್ಟಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತಂತೆ ಮಾತನಾಡಿದ ಕುಂದಕೆರೆ ವಲಯ ಅರಣ್ಯಾಧಿಕಾರಿ ಮಂಜುನಾಥ ಅವರು ಮರಣೋತ್ತರ ಪರೀಕ್ಷೆ ಆಧರಿಸಿ ಹಾಗೂ ತಹಶೀಲ್ದಾರ್ ವರದಿ ಸಲ್ಲಿಸಿ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

English summary
The incident that took place in Kaniyanapura colony in the village of Gundlupet taluk where a man who went to a bring wood attacked by elephants,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X