• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಕಲಿ ಖಾತೆ ಮೂಲಕ ಹಣಕ್ಕೆ ಬೇಡಿಕೆ; ಈಗ ಶಿಕ್ಷಣ ಸಚಿವರ ಸರದಿ

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಫೆಬ್ರವರಿ 20: ಸುಲಭದಲ್ಲಿ ಹಣ ಗಳಿಸಲು ಹೊರಡುವ ಖದೀಮರು ವಿಐಪಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ನಂತರ ಹಣಕ್ಕಾಗಿ ಬೇಡಿಕೆ ಇಡುವುದು ಈಗ ಮಾಮೂಲಾಗಿಬಿಟ್ಟಿದೆ.

   ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ- ಸಚಿವರ ಹೆಸರಲ್ಲಿ ಹಣ ಹಾಕಿಸಿಕೊಳ್ತಿರೋ ಗ್ಯಾಂಗ್ ಇದೆ ಎಚ್ಚರಿಕೆ | Oneindia Kannada

   ಸಾಮಾಜಿಕ ಜಾಲತಾಣಗಳನ್ನು ಇದಕ್ಕಾಗಿ ಬಳಸಿಕೊಳ್ಳುವ ಖದೀಮರು ಸಿಕ್ಕಿದಷ್ಟು ಸಿಕ್ಕಲಿ ಎಂಬ ಉದ್ದೇಶದಿಂದ ಈ ಉಪಾಯ ಮಾಡುತ್ತಿದ್ದಾರೆ. ಇದೀಗ ಶಿಕ್ಷಣ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆಯಲಾಗಿದ್ದು, ಫ್ರೆಂಡ್‌ ರಿಕ್ವೆಸ್ಟ್ ಕಳಿಸಿ, ಸ್ವೀಕರಿಸಿದ ನಂತರ ಐದು ಸಾವಿರ ರೂ. ಹಣದ ಅವಶ್ಯಕತೆ ಇದೆ ಎಂದು ಬೇಡಿಕೆಯಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

   ಸಚಿವ, ಶಾಸಕರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚನೆಗೆ ಯತ್ನ!

   ಸಾಮಾಜಿಕ ತಾಣದಲ್ಲಿ ಸಕ್ರಿಯವಾಗಿರುವ ಸಚಿವರಿಗೆ ಈ ವಿಷಯ ಬೇಗನೇ ಗಮನಕ್ಕೆ ಬಂದಿದ್ದು, ಇದು ಗಮನಕ್ಕೆ ಬರುತ್ತಿದ್ದಂತೆ ಸಚಿವರ ಆಪ್ತ ಕಾರ್ಯದರ್ಶಿ ಸೈಬರ್ ಸೆಲ್​ನಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಈ ಕುರಿತು ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

   ಸಿಐಡಿ ಪೊಲೀಸ್ ಮಹಾನಿರ್ದೇಶಕರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಆಪ್ತ ಕಾರ್ಯದರ್ಶಿ ಚಿದಂಬರ ಪಿ.ಎಂ ಅವರು ಪತ್ರದ ಮೂಲಕ ದೂರು ನೀಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ.

   English summary
   A fake Facebook account has been opened in the name of Education Minister S. Suresh Kumar and the demand for money by friend request has come to light.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X