ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರದಲ್ಲಿ ವಾಹನ ಹರಾಜಿಗೆ ಮುಗಿಬಿದ್ದ ಜನ

|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 16: ಜನ ಮುಗಿ ಬಿದ್ದಿರುವ ಈ ದೃಶ್ಯ ನೋಡಿದರೆ ಅಚ್ಚರಿಯಾಗಬಹುದು. ಅದೂ ಕೊರೊನಾ ಇರುವ ಈ ಸಮಯದಲ್ಲಿ! ಹಾಗೆಂದು ಜನ ಹೀಗೆ ಮುಗಿಬಿದ್ದಿರುವುದು ಯಾವುದೋ ಜಾತ್ರೆಗಲ್ಲ, ಅಬಕಾರಿ ಇಲಾಖೆ ನಡೆಸಿದ ವಾಹನಗಳ ಹರಾಜಿಗೆ.

ಚಾಮರಾಜನಗರ ರಾಮಸಮುದ್ರದಲ್ಲಿರುವ ಉಪ ಅಬಕಾರಿ ಇಲಾಖೆಯಲ್ಲಿ ವಿವಿಧ ಮೊಕದ್ದಮೆಗಳಲ್ಲಿ ವಶಪಡಿಸಿಕೊಂಡಿದ್ದ 28 ದ್ವಿಚಕ್ರ ವಾಹನ ಹಾಗೂ 3 ಚಕ್ರಗಳ ವಾಹನಗಳ ಹರಾಜು ಪ್ರಕ್ರಿಯೆಯನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 10 ಗಂಟೆಯಿಂದಲೇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು 300ಕ್ಕೂ ಹೆಚ್ಚು ಜನ ಹಾಜರಿದ್ದರು. ಮುಂಗಡ 5000 ಸಾವಿರ ರೂ ಪಾವತಿಸಿ ರಶೀತಿ ಪಡೆದವರಿಗೆ ಮಾತ್ರ ಹರಾಜಿನಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು.

Chamarajanagar: People Gathered In Large Number For Vehicle Auction

 ಕೋಲಾರದಲ್ಲಿ ಕೊರೊನಾ ನಡುವೆಯೂ ಜಮಾಯಿಸಿದ ನೂರಾರು ವರ್ತಕರು ಕೋಲಾರದಲ್ಲಿ ಕೊರೊನಾ ನಡುವೆಯೂ ಜಮಾಯಿಸಿದ ನೂರಾರು ವರ್ತಕರು

ಆದರೂ 148 ಜನ ಮುಂಗಡ ಹಣವನ್ನು ಪಾವತಿಸಿ ಹರಾಜಿನಲ್ಲಿ ಭಾಗವಹಿಸಿದ್ದರು. ಹರಾಜಿನಲ್ಲಿ ಭಾಗವಹಿಸಿದ ಜನರು ಉತ್ತಮ ಮಟ್ಟದಲ್ಲಿ ಬಿಡ್ ಕೂಗಲು ಆರಂಭಿಸಿದರು. ವಾಹನಗಳು ಹೆಚ್ಚಿನ ಬೆಲೆಗೆ ಹರಾಜಾದವು.

Chamarajanagar: People Gathered In Large Number For Vehicle Auction

Recommended Video

ಮತ್ತೊಂದು ಬ್ರಹ್ಮಾಸ್ತ್ರ ರೆಡಿ ಮಾಡ್ತಿದೆ India..! | India Hypersonic Cruise Missile | Oneindia Kannada

ಹರಾಜಿನಲ್ಲಿ ಭಾಗವಹಿಸಿ ಬಿಡ್ ಕೂಗಿದವರು ಮುಂಗಡ ಶೇ.25ರಷ್ಟು ಕಟ್ಟಬೇಕಾಗುತ್ತದೆ. ನಂತರ ಅಬಕಾರಿ ಡಿಸಿ ಆದೇಶ ಮಾಡಿದ ಮೇಲೆ ಬಾಕಿ ಇರುವ ಶೇ.75ರಷ್ಟು ಹಣವನ್ನು ನೀಡಬೇಕಾಗುತ್ತದೆ ಎಂದು ಅಬಕಾರಿ ಉಪ ನಿರೀಕ್ಷಕ ಪಿ.ಎಮೇಶ್ ತಿಳಿಸಿದ್ದು, ಒಂದು ವೇಳೆ 5000 ನೀಡಿ ವಾಹನನ್ನು ಪಡೆಯದೆ ಇದ್ದರೆ ಅವರು ನೀಡಿರುವ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿ, ನಂತರ ನಡೆಯುವ ಹರಾಜಿನಲ್ಲಿ ಆ ವಾಹನಗಳನ್ನು ಹರಾಜು ಮಾಡಲಾಗುವುದು. ಆದರೆ ಈ ಸಮಯದಲ್ಲೂ ಇಷ್ಟು ಜನ ಸೇರಿದ್ದುದು ಅಚ್ಚರಿ ಮೂಡಿಸಿತ್ತು.

English summary
People gathered in large number for vehicle auction which was organised by excise department in chamarajangar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X