ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ : ಕಾಡಿನ ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ದಂಡ

|
Google Oneindia Kannada News

ಚಾಮರಾಜನಗರ, ಜನವರಿ 07 : ಮಲೆ ಮಹದೇಶ್ವರ ಬೆಟ್ಟದಲ್ಲಿ ಹಾದು ಹೋಗುವ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ ದಂಡ ಕಟ್ಟಬೇಕಾಗುತ್ತದೆ. 2 ಸಾವಿರ ರೂ. ದಂಡವನ್ನು ಪಾವತಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಸಂಚಾರ ನಡೆಸುವ ವಾಹನಗಳು ಗುದ್ದಿ ಕಾಡು ಪ್ರಾಣಿಗಳು ಮೃತಪಡುವ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ, ಪ್ರಾಣಿಗಳ ರಕ್ಷಣೆಗಾಗಿ ವಾಹನ ನಿಲ್ಲಿಸಬಾರದು ಎಂದು ಅರಣ್ಯ ಇಲಾಖೆ ಹೇಳಿದ್ದು, ಜನವರಿ 1ರಿಂದ ಇದು ಜಾರಿಗೆ ಬಂದಿದೆ.

 ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಮೃತದೇಹ ಪತ್ತೆ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಮೃತದೇಹ ಪತ್ತೆ

ಕಾಡಿನ ಸೌಂದರ್ಯದ ಫೋಟೋ ತೆಗೆಯಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ಪ್ರಾಣಿಗಳಿಗೆ ಆಹಾರ ಹಾಕಲು ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ಸ್ಥಳದಲ್ಲಿಯೇ ದಂಡವನ್ನು ಹಾಕಲಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ದಂಡ ಪ್ರಯೋಗವನ್ನು ಈಗಾಗಲೇ ಆರಂಭಿಸಿದ್ದಾರೆ.

28 ದಿನದಲ್ಲಿ ಮಲೆ ಮಾದೇಶ್ವರದಲ್ಲಿ 1.25 ಕೋಟಿ ಕಾಣಿಕೆ ಸಂಗ್ರಹ 28 ದಿನದಲ್ಲಿ ಮಲೆ ಮಾದೇಶ್ವರದಲ್ಲಿ 1.25 ಕೋಟಿ ಕಾಣಿಕೆ ಸಂಗ್ರಹ

Pay Fine If Stop Vehicle In Male Mahadeshwara Hill Road

ವಾಹನಗಳು ಡಿಕ್ಕಿ ಹೊಡೆದು ಪ್ರಾಣಿಗಳು ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅರಣ್ಯ ಇಲಾಖೆ ರಸ್ತೆಯ ನಡುವೆ ವಾಹನ ನಿಲ್ಲಿಸಬೇಡಿ ಎಂದು ಸೂಚನೆ ನೀಡಿದ್ದಾರೆ, ಫಲಕಗಳನ್ನು ಹಾಕಿದ್ದಾರೆ. ಆದರೆ, ವಾಹನ ಸವಾರರು ಅದನ್ನು ಪಾಲಿಸುತ್ತಿಲ್ಲ.

 ಅರಣ್ಯ ಸೇವೆಗೆ ಬದುಕು ಮುಡಿಪಾಗಿಟ್ಟ ಕುಟುಂಬವಿದು ಅರಣ್ಯ ಸೇವೆಗೆ ಬದುಕು ಮುಡಿಪಾಗಿಟ್ಟ ಕುಟುಂಬವಿದು

ವಾಹನ ಸವಾರರು ನಿಯಮ ಪಾಲಿಸಿದ ಕಾರಣ ಅರಣ್ಯ ಇಲಾಖೆಯವರು ಸ್ಥಳದಲ್ಲಿಯೇ ದಂಡ ಹಾಕುವ ತೀರ್ಮಾನ ಕೈಗೊಂಡಿದ್ದಾರೆ. ಫೋಟೋ ತೆಗೆಯಲು, ಪ್ರಾಣಿಗಳಿಗೆ ಆಹಾರ ನೀಡಲು ವಾಹನ ನಿಲ್ಲಿಸಿದರೆ 2 ಸಾವಿರ ರೂ. ದಂಡವನ್ನು ಕಟ್ಟಬೇಕಾಗಿದೆ.

ಅರಣ್ಯ ಇಲಾಖೆ ಪ್ರತಿ ವಲಯದಲ್ಲಿಯೂ ಪರಿಸರ ಅಭಿವೃದ್ಧಿ ಸಮಿತಿಯನ್ನು ರಚನೆ ಮಾಡಿದೆ. ವಾಹನ ಸವಾರರಿಂದ ಸಂಗ್ರಹಿಸಿದ ದಂಡ ಮೊತ್ತವನ್ನು ಸಮಿತಿಗೆ ಹಸ್ತಾಂತರ ಮಾಡಲಾಗುತ್ತದೆ.

English summary
Forest department imposing on spot fine if people stopped vehicles in midway on the road passing through Male Mahadeshwara Hill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X