• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಾಮರಾಜನಗರ ಜಿಲ್ಲಾಸ್ಪತ್ರೆಯ ಆಕ್ಸಿಜನ್ ಘಟಕ ಶೀಘ್ರ ಕಾರ್ಯಾರಂಭ

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಏಪ್ರಿಲ್ 21: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆರು ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕ ಸ್ಥಾಪಿಸಲಾಗಿದ್ದು, ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಘಟಕ ಸ್ಥಾಪನೆಯ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಈ ಘಟಕಕ್ಕೆ ಆಮ್ಲಜನಕ ತುಂಬಿ ಪರೀಕ್ಷೆ ನಡೆಸುವ ಕೆಲಸವಷ್ಟೇ ಬಾಕಿ ಇದ್ದು, ಒಂದೆರಡು ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ ಎಂದು ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಜೀವ್ ತಿಳಿಸಿದ್ದಾರೆ.

ಲಸಿಕೆ ಪಡೆದಿದ್ದ ಚಾಮರಾಜನಗರ ಡಿಸಿಗೆ ಕೋವಿಡ್

'ಈ ಘಟಕವನ್ನು ಒಟ್ಟು 65 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿದ್ದು, ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಗೆ ಅನುಗುಣವಾಗಿ ಆಮ್ಲಜನಕವನ್ನು ಒಮ್ಮೆ ಭರ್ತಿ ಮಾಡಿದರೆ ಈಗಿನ ಪರಿಸ್ಥಿತಿಯಲ್ಲಿ ಒಂದು ವಾರಕ್ಕೆ ಸಾಕಾಗುತ್ತದೆ' ಎಂದು ಅವರು ಹೇಳಿದರು.

ಈಗ ಪ್ರತಿ ದಿನ ಜಿಲ್ಲಾಸ್ಪತ್ರೆಗೆ ಮೈಸೂರಿನಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ತರಿಸಲಾಗುತ್ತಿದೆ. ಕೋವಿಡ್ ಹಾವಳಿ ಆರಂಭವಾದ ನಂತರ ಆಸ್ಪತ್ರೆಯಲ್ಲಿ ಆಮ್ಲಜನಕದ ಅಗತ್ಯ ಹೆಚ್ಚಾಗಿದೆ. ಆಮ್ಲಜನಕ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ವರ್ಷವೇ ಆಮ್ಲಜನಕ ಘಟಕ ಸ್ಥಾಪನೆಗೆ ಸರ್ಕಾರದಿಂದ ಮಂಜೂರಾತಿ ದೊರಕಿತ್ತು.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಘಟಕ ಆರಂಭವಾಗುತ್ತಿರುವುದರಿಂದ ಕೋವಿಡ್ ಚಿಕಿತ್ಸೆಗೆ ಅನುಕೂಲವಾಗಲಿದೆ. ಈಗ ಆಸ್ಪತ್ರೆಯಲ್ಲಿ ಪ್ರತಿ ಗಂಟೆಗೆ 10 ಸಿಲಿಂಡರ್‌ ಆಮ್ಲಜನಕದ ಅಗತ್ಯವಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ದಿನಕ್ಕೆ 240 ಸಿಲಿಂಡರ್‌ ಅವಶ್ಯಕತೆ ಇದೆ.

'ಈಗ ಪ್ರತಿ ದಿನ ಮೈಸೂರಿನಿಂದ ಒಂದು ಬಾರಿಗೆ 100 ಸಿಲಿಂಡರ್‌ ತರಲಾಗುತ್ತಿದೆ. 250 ಸಿಲಿಂಡರ್‌ಗೆ ಮೂರು ಬಾರಿ ಹೋಗಿ ಬರಬೇಕು. ಒಂದು ಬಾರಿ ಆಮ್ಲಜನಕ ತುಂಬಿ ತರಲು ಕನಿಷ್ಠ ಐದರಿಂದ ಆರು ಗಂಟೆ ಬೇಕು. ಈ ಘಟಕ ಸ್ಥಾಪನೆಯಿಂದ ಮೈಸೂರಿಗೆ ಪ್ರತಿ ದಿನ ಓಡಾಡುವುದು ತಪ್ಪುತ್ತದೆ' ಎಂದು ಜಿಲ್ಲಾಸ್ಪತ್ರೆಯ ವೈದ್ಯ, ಕೋವಿಡ್ ನೋಡಲ್ ಅಧಿಕಾರಿ ಡಾ.ಮಹೇಶ್‌ ಅವರು ತಿಳಿಸಿದರು.

'ಸದ್ಯದ ಪರಿಸ್ಥಿತಿಯಲ್ಲಿ ಒಮ್ಮೆ ಘಟಕಕ್ಕೆ ಆಮ್ಲಜನಕ ತುಂಬಿದರೆ ಒಂದು ವಾರದ ಮಟ್ಟಿಗೆ ಸಾಕು. ಆದರೆ, ಈ ಆಮ್ಲಜನಕ ಉತ್ಪಾದನಾ ಘಟಕ ಬಳ್ಳಾರಿಯಲ್ಲಿದ್ದು, ಅಲ್ಲಿಂದ ಟ್ಯಾಂಕರ್‌ನಲ್ಲಿ ತರಬೇಕಾಗುತ್ತದೆ' ಎಂದು ಅವರು ಮಾಹಿತಿ ನೀಡಿದರು.

   'ಕೊರೊನಾ ಚೈನ್‌‌ ಲಿಂಕ್‌ ಕಟ್‌ ಮಾಡಲು 14 ದಿನಗಳ ಕಠಿಣ ಕ್ರಮ ಅಗತ್ಯ'- ಆರೋಗ್ಯ ಸಚಿವ ಕೆ.ಸುಧಾಕರ್‌ | Oneindia

   ಒಂದು ಜಂಬೊ ಸಿಲಿಂಡರ್‌ನಲ್ಲಿ ಏಳು ಘನ ಮೀಟರ್‌ಗಳಷ್ಟು ಸಾಂದ್ರೀಕೃತ ದ್ರವ ರೂಪದ ಆಮ್ಲಜನಕ ಇರುತ್ತದೆ. ಆರು ಸಾವಿರ ಲೀಟರ್‌ ಸಾಮರ್ಥ್ಯದ ಘಟಕದಲ್ಲಿ 4,620 ಘನ ಮೀಟರ್‌ಗಳಷ್ಟು ಆಮ್ಲಜನಕ ಹಿಡಿಯುತ್ತದೆ. ಅಂದರೆ, ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಘಟಕದಲ್ಲಿ 660 ಜಂಬೊ ಸಿಲಿಂಡರ್‌ಗಳು ಹಿಡಿಯುವಷ್ಟು ಆಮ್ಲಜನಕವನ್ನು ತುಂಬಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

   English summary
   A 6000-liter capacity oxygen plant has been installed in the Chamarajanagar district hospital premises and will be working soon, hospital sources said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X