ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರ; ಹುಲಿ ಜೊತೆ ಸಸ್ಯಾಹಾರಿ ಪ್ರಾಣಿಗಳ ಗಣತಿ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 13; ಈಗಾಗಲೇ ಬಂಡೀಪುರದಲ್ಲಿ ಹುಲಿಯ ಗಣತಿ ಮಾಡಿರುವ ಅರಣ್ಯಾಧಿಕಾರಿಗಳು ಇದೀಗ ಹುಲಿಗಳ ನಡುವೆ ವಾಸವಿರುವ ಇತರೆ ಸಸ್ಯಹಾರಿ ಪ್ರಾಣಿಗಳ ಗಣತಿಗೂ ಮುಂದಾಗಿದ್ದಾರೆ.

ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ಸಂಗತಿಯಾಗಿದ್ದರೂ ಅವುಗಳೇ ವಾಸವಿರುವ ಹುಲಿಸಂರಕ್ಷಿತ ಪ್ರದೇಶದಲ್ಲಿ ಇತರೆ ಪ್ರಾಣಿಗಳು ಎಷ್ಟಿವೆ? ಎಂಬುದು ಈಗ ಅಷ್ಟೇ ಮುಖ್ಯವಾಗಿದೆ. ಜೊತೆಗೆ ವನ್ಯಪ್ರಾಣಿ ಪ್ರೇಮಿಗಳಲ್ಲಿಯೂ ಈ ಬಗ್ಗೆ ಕಾತರವಿದೆ. ಇದೆಲ್ಲದಕ್ಕೆ ಉತ್ತರ ಸಸ್ಯಹಾರಿ ಪ್ರಾಣಿಗಳ ಗಣತಿ ಎಂದರೆ ತಪ್ಪಾಗಲಾರದು.

ವಿಶೇಷ ವರದಿ: ಜುಲೈ 5ರಿಂದ ಆನ್‌ಲೈನ್‌ನಲ್ಲಿ ಬಂಡೀಪುರ ಸಫಾರಿ ಟಿಕೆಟ್ ಲಭ್ಯ!ವಿಶೇಷ ವರದಿ: ಜುಲೈ 5ರಿಂದ ಆನ್‌ಲೈನ್‌ನಲ್ಲಿ ಬಂಡೀಪುರ ಸಫಾರಿ ಟಿಕೆಟ್ ಲಭ್ಯ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಷ್ಟು ಸಸ್ಯಾಹಾರಿ ಪ್ರಾಣಿಗಳು ವಾಸವಾಗಿವೆ? ಎಂಬುವುದರ ಅಂಕಿ ಅಂಶಗಳ ಪತ್ತೆಗೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದು, ಈ ಸಂಬಂಧ ವಿವಿಧ ತಂಡಗಳನ್ನು ರಚಿಸಿ ಗಣತಿ ಕಾರ್ಯವನ್ನು ನಡೆಸುತ್ತಿದ್ದಾರೆ. ಸುಮಾರು 8 ದಿನಗಳ ಕಾಲ ಬಂಡೀಪರ ಹುಲಿ ಸಂರಕ್ಷಿತ ಪ್ರದೇಶದ ಎಲ್ಲ ವಲಯದಲ್ಲಿ ಗಣತಿ ಕಾರ್ಯ ನಡೆಯಲಿದೆ.

ವೀಕೆಂಡ್ ನಲ್ಲಿ ಬಂಡೀಪುರ ಸಫಾರಿಯತ್ತ ಹೆಚ್ಚಾಗಿದೆ ಪ್ರವಾಸಿಗರ ಒಲವುವೀಕೆಂಡ್ ನಲ್ಲಿ ಬಂಡೀಪುರ ಸಫಾರಿಯತ್ತ ಹೆಚ್ಚಾಗಿದೆ ಪ್ರವಾಸಿಗರ ಒಲವು

ಈ ಕುರಿತಂತೆ ಮಾತನಾಡಿ ಮಾಹಿತಿ ನೀಡಿರುವ ಎಸಿಎಫ್ ಕೆ. ಪರಮೇಶ್, "ಪ್ರತಿ 14 ವರ್ಷಗಳಿಗೊಮ್ಮೆ ನಡೆಸುವ ಅಂದಾಜು ಪ್ರಕ್ರಿಯೆಯು ಈ ಹಿಂದೆ 2005, 2009, 20013, 20017ರಲ್ಲಿ ಅಂದರೆ ನಾಲ್ಕು ಬಾರಿ ನಡೆಸಲಾಗಿತ್ತು. ಈಗ ನಡೆಯುತ್ತಿರುವುದು 15ನೇ ಅಖಿಲ ಭಾರತ ಹುಲಿ ಹಾಗೂ ದೊಡ್ಡ ಸಸ್ಯಹಾರಿ ಪ್ರಾಣಿಗಳ ಅಂದಾಜು ಪ್ರಕ್ರಿಯೆ ಆಗಿರುತ್ತದೆ. ಈ ಗಣತಿ ಭಾರತದ್ಯಾಂತ ಕೈಗೊಳ್ಳುವ ಪ್ರಕ್ರಿಯೆಯಾಗಿದ್ದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ನಡೆಸಲಾಗುತ್ತಿದೆ" ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ; ಘೋಷಣೆ ಬಾಕಿ ಕರ್ನಾಟಕದಲ್ಲಿ ಮತ್ತೊಂದು ಹುಲಿ ಸಂರಕ್ಷಿತ ಪ್ರದೇಶ; ಘೋಷಣೆ ಬಾಕಿ

25 ತಂಡಗಳಿಂದ ಗಣತಿ ಕಾರ್ಯ

25 ತಂಡಗಳಿಂದ ಗಣತಿ ಕಾರ್ಯ

ಪ್ರತಿ ಬಾರಿ ಮಾಡುತ್ತಿದ್ದಂತೆ ಒಟ್ಟಾಗಿ ಪೂರ್ಣ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಪ್ರಕ್ರಿಯೆ ಮಾಡುವ ಬದಲು 25 ತಂಡಗಳು ಒಟ್ಟಾಗಿ ಎರಡೆರಡು ವಲಯಗಳಲ್ಲಿ ಗಣತಿ ಕಾರ್ಯ ಮಾಡಲಿದ್ದಾರೆ. ತಂಡದ ಸಿಬ್ಬಂದಿ ವರ್ಗ ಕಾಲ್ನಡಿಗೆಯಲ್ಲಿ ಎರಡು ಕಿಲೋಮೀಟರ್ ನಡೆದು ಅಲ್ಲಿ ಸಿಗುವ ಪ್ರಾಣಿಗಳ ಹೆಜ್ಜೆ ಗುರುತು, ಹಿಕ್ಕೆಗಳನ್ನು ಸಂಗ್ರಹಿಸಿ ಒಂದು ಪ್ರದೇಶದಲ್ಲಿ ಎಷ್ಟು ಹುಲಿ ಇದೆ ಎಂದು ಅಂದಾಜು ಮಾಡಬೇಕಾಗಿದೆ. ಅಖಿಲ ಭಾರತ ಹುಲಿ ಮತ್ತು ದೊಡ್ಡ ಸಸ್ಯಹಾರಿ (ಆನೆ ಮತ್ತು ಕಾಟಿ) ಗಣತಿಯ ಅಂದಾಜಿನ ತರಬೇತಿಯನ್ನು ಈ ಹಿಂದೆ ಆಗಸ್ಟ್ ತಿಂಗಳಲ್ಲಿ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನೀಡಲಾಗಿತ್ತು.

ಗಣತಿಯಲ್ಲಿ ಮಾಸ್ಟರ್ ತರಬೇತುದಾರರು

ಗಣತಿಯಲ್ಲಿ ಮಾಸ್ಟರ್ ತರಬೇತುದಾರರು

ಈಗ ಮಾಸ್ಟರ್ ತರಬೇತುದಾರನ್ನಾಗಿ ಮಾಡಿ ಮಾಸ್ಟರ್ ತರಬೇತುದಾರರಿಂದ ತರಬೇತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಭಾರತೀಯ ವನ್ಯಜೀವಿ ಸಂಸ್ಥೆ ಹಾಗೂ ಅರಣ್ಯ ಜೀವಶಾಸ್ತ್ರದಲ್ಲಿ ಅಭ್ಯಸಿಸಿ ಪರಿಣತಿ ಪಡೆದಿರುವ ಸಿಬ್ಬಂದಿಗಳು ಈ ಬಾರಿಯ ಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ಹಾಗೆ ನೋಡಿದರೆ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬಿರುವ ಕಾರಣದಿಂದಾಗಿ ಸಸ್ಯಹಾರಿ ಪ್ರಾಣಿಗಳಿಗೆ ಕುಡಿಯಲು ನೀರು ಮತ್ತು ಹಸಿರು ಮೇವು ಸಿಗುತ್ತಿರುವುದರಿಂದ ಆನೆ, ಕಾಡುಕೋಣಗಳಂತಹ ಪ್ರಾಣಿಗಳು ನೆಮ್ಮದಿಯಾಗಿ ಓಡಾಡಿಕೊಂಡಿವೆ. ಜತೆಗೆ ಜಿಂಕೆಗಳು ಕೂಡ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ.

ಹುಮ್ಮಸ್ಸಿನಲ್ಲಿರುವ ಗಣತಿದಾರರು

ಹುಮ್ಮಸ್ಸಿನಲ್ಲಿರುವ ಗಣತಿದಾರರು

ಮೊದಲೆಲ್ಲ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಮತ್ತು ಕಾಡ್ಗಿಚ್ಚು ಸಂಭವಿಸುತ್ತಿದ್ದರಿಂದ ಕಾಡು ಪ್ರಾಣಿಗಳು ನೀರು ಆಹಾರ ಅರಸಿ ದೂರ ಹೋಗುತ್ತಿದ್ದವು. ಆದರೆ ಕಳೆದ ಎರಡು ಬೇಸಿಗೆಯಲ್ಲಿ ಲಾಕ್ ಡೌನ್ ಕಾರಣದಿಂದಾಗಿ ಸಾರ್ವಜನಿಕರಿಗೆ ಅರಣ್ಯದೊಳಗೆ ಪ್ರವೇಶ ನೀಡಿರಲಿಲ್ಲ. ಇದರಿಂದಾಗಿ ಕಾಡ್ಗಿಚ್ಚು ಸಂಭವಿಸಿರಲಿಲ್ಲ. ಜತೆಗೆ ಕಾಡುಪ್ರಾಣಿಗಳು ಅರಣ್ಯದಲ್ಲಿ ನಿರ್ಭಯವಾಗಿ ಸಂಚರಿಸುತ್ತಿದ್ದವು.

Recommended Video

ಮೈಕ್ ಆಫ್ ಇದೆ ಅಂದ್ಕೊಂಡು ಪ್ರೆಸ್ ಮೀಟ್ ನಲ್ಲೇ ಡಿಕೆಶಿ ಮಾನ ಹರಾಜು ಹಾಕಿದ ಉಗ್ರಪ್ಪ | Oneindia Kannada
ವಿವಿಧ ಪ್ರಾಣಿಗಳ ಗಣತಿ

ವಿವಿಧ ಪ್ರಾಣಿಗಳ ಗಣತಿ

ಈ ಬಾರಿ ಉತ್ತಮವಾಗಿ ಮಳೆಯಾಗಿರುವ ಹಿನ್ನಲೆಯಲ್ಲಿ ಇಡೀ ಅರಣ್ಯ ಹಸಿರಿನಿಂದ ಕಂಗೊಳಿಸುತ್ತಿದ್ದು, ಹಿಂದೆ ಬೆಂಕಿ ಅನಾಹುತದಿಂದ ಬೋಳಾಗಿದ್ದ ಕಾಡಿನಲ್ಲಿ ಹಸಿರು ಕಾಣಿಸುತ್ತಿದೆ. ಹೀಗಾಗಿ ಪ್ರಾಣಿಗಳು ಓಡಾಡುತ್ತಿದ್ದು ಅವುಗಳ ಗಣತಿ ಕಾರ್ಯವನ್ನು ಪರಿಣತಿ ಪಡೆದಿರುವ ತಂಡಗಳು ಹುಮ್ಮಸ್ಸಿನಿಂದ ನಡೆಸುತ್ತಿರುವುದು ಕಂಡು ಬಂದಿದೆ.

English summary
After Tiger census now forest department began the other animals census in Gundlupet, Chamarajanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X