ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್‌ ಗಾಂಧಿ ಕಾರ್ಯಕ್ರಮಕ್ಕೆ ಬರುವವರು ಹಾರ ತರಬೇಡಿ ಎಂದಿದ್ದೇಕೆ ಡಿಕೆಶಿ?

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಸೆಪ್ಟೆಂಬರ್‌, 14: "ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಬಂದ ಬಳಿಕ ಭ್ರಷ್ಟಾಚಾರ ತಾಂಡವವಾಡುತ್ತಿದೆ." ಯಾವ ಸರ್ಕಾರಿ ಕಚೇರಿ ಬಾಗಿಲು ತಟ್ಟಿದರೂ ಅಧಿಕಾರಿಗಳು ಕಾಸು-ಕಾಸು ಎಂದು ಲಂಚ ಕೇಳುತ್ತಾರೆ. ಕಮಿಷನ್ ಪಡೆಯುವುದು 40%ಗೆ ತಲುಪಿದೆ. ಸರ್ಕಾರಿ ನೌಕರಿ ಪಡೆಯಬೇಕಾದರೇ 50, 60 ಲಕ್ಷ ಇನ್ನು ಕೆಲವರು 1 ಕೋಟಿ ರೂಪಾಯಿಯನ್ನೂ ಕೊಟ್ಟಿದ್ದಾರೆ. ಪೊಲೀಸ್ ನೇಮಕಾತಿಯಲ್ಲಿ ಉತ್ತರ ಪತ್ರಿಕೆಗಳೇ ಬದಲಾಗಿದೆ. ಕೋಟಿ ಲೆಕ್ಕದಲ್ಲಿ ಹಣವನ್ನು ಕೊಟ್ಟು ಕೆಲಸ ತೆಗೆದುಕೊಂಡವನು ಸುಮ್ಮನಿರುತ್ತಾನಾ? ಎಂದು ಪ್ರಶ್ನಿಸಿದರು.

ನಮ್ಮ ಕೈಯನ್ನೇ ಈಗ ನಂಬುವುದಕ್ಕೆ ಆಗುತ್ತಿಲ್ಲ. ಯಾರು ಏನು ಹೇಗೆ ಅಂತಾ ಗೊತ್ತಿರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊಳ್ಳೇಗಾಲದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಕೊಳ್ಳೇಗಾಲದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಫೂರ್ವಭಾವಿ ಸಭೆಯನ್ನು ನಡೆಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಅವರು, ನನಗೆ ಯಾರೂ ಮಾಲೆ ಹಾಕಬೇಡಿ. ಚುನಾವಣೆಯಲ್ಲಿ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ, ಗೆಲುವಿನ ಮಾಲೆಯನ್ನು ಹಾಕಿ ಎಂದು ಹೇಳಿದರು.

"ರಾಜೀವ್ ಗಾಂಧಿ ಅವರನ್ನು ಯಾರು ಕೊಂದಿದ್ದು, ಹಾರ ಹಾಕಲು ಬಂದವರು. ಇಂದಿರಾ ಗಾಂಧಿ ಅವರಿಗೆ ಗನ್ ಮ್ಯಾನ್ ಗುಂಡಿಟ್ಟಿದ್ದ. ಆದ್ದರಿಂದ ಯಾರನ್ನು ನಾವು ನಂಬುವಂತಿಲ್ಲ. ನಮ್ಮ ಕೈಯನ್ನೇ ನಾವು ನಂಬುವಂತಿಲ್ಲ. ಆದ್ದರಿಂದ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರುವವರು ಮಾಲೆಗಳನ್ನು ತರಬೇಡಿ. ನನಗೂ ಹಾರವನ್ನು ತರಬೇಡಿ. ಬಹಳ ಹುಷರಾಗಿರಬೇಕು," ಎಂದು ಆತಂಕವನ್ನು ಹೊರಹಾಕಿದರು.

No garland for Rahul Gandhi program: DK Shivakumar expressed concern

ಯಾತ್ರಗೆ ಜನ ಸೇರಿಸಲು ಡಿಕೆಶಿ ಸೂಚನೆ
ರಾಜ್ಯದಲ್ಲಿ ಗುಂಡ್ಲುಪೇಟೆ ಮಾರ್ಗದ ಮೂಲಕ ಜೋಡೋ ಯಾತ್ರೆ ಆರಂಭಗೊಳ್ಳುತ್ತಿದ್ದು, ಜಿಲ್ಲೆಯ ಒಂದೊಂದು ಕ್ಷೇತ್ರಗಳಿಂದ ಕನಿಷ್ಠ 10 ಸಾವಿರ ಜನ ಕಾರ್ಯಕರ್ತರು ಭಾಗಿ ಆಗಬೇಕು. ಮದುವೆಗೆ ಕರೆದಂತೆ ಕರಪತ್ರ ಹಿಡಿದು ಜನರಿಗೆ ಈ ಯಾತ್ರೆಯ ವಿಚಾರವನ್ನು ಮುಟ್ಟಿಸಿ ಅವರನ್ನು ಕರೆತನ್ನಿ ಎಂದು ಮುಖಂಡರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ, ಕೇರಳದ ಕಾಂಗ್ರೆಸ್ ಶಾಸಕ ರೋಸ್ ಜಾನ್ ಉಪಸ್ಥಿತರಿದ್ದರು. ಕೊಳ್ಳೇಗಾಲ ಕಾರ್ಯಕ್ರಮದ ಬಳಿಕ ಚಾಮರಾಜನಗರ, ಗುಂಡ್ಲುಪೇಟೆಯಲ್ಲೂ ಫೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು.

No garland for Rahul Gandhi program: DK Shivakumar expressed concern

ನಳಿನ್‌ ಕುಮಾರ್‌ ಕಟೀಲ್‌ಗೆ ಡಿಕೆಶಿ ಟಕ್ಕರ್‌:
ಕಾಂಗ್ರೆಸ್ ಮಾಡಿದ್ದೆಲ್ಲ ಭ್ರಷ್ಟಾಚಾರ ಎಂಬ ನಳೀನ್ ಕುಮಾರ್ ಕಟೀಲ್ ಟ್ವೀಟ್ ಬಗ್ಗೆ ಕೊಳ್ಳೇಗಾಲದಲ್ಲಿ ಪ್ರತಿಕ್ರಿಯಿಸಿದ ಅವರು, ಮೂರು ವರ್ಷದಿಂದ ಇವರ ಬಾಯಿ ಏನಾಗಿತ್ತು ಎಂದು ಪ್ರಶ್ನಿಸಿದರು. ಇನ್ನು ಕೆಪಿಸಿಸಿ ಅಧ್ಯಕ್ಷರ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎರಡು ವರ್ಷದಿಂದ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಸೆಪ್ಟೆಂಬರ್‌ 16ರಂದು ಚುನಾವಣೆ ನಡೆಯುತ್ತದೆ. ಪಿಆರ್‍ಒ ಆಗಿ ನಾಸೀಫನ್ ಬರುತ್ತಿದ್ದು, ಅವರು ತಮಿಳುನಾಡಿನವರಾಗಿದ್ದಾರೆ. ಅವರು ಸದಸ್ಯರ ಜೊತೆ ಮಾತುಕತೆ ನಡೆಸುತ್ತಾರೆ. ಕೆಪಿಸಿಸಿಗೆ ಆಯ್ಕೆ ಆಗಿರುವ ಯಾರು ಬೇಕಾದರೂ ಸ್ಪರ್ಧಿಸಬಹುದು. ಸೆಪ್ಟೆಂಬರ್‌ 20ರೊಳಗೆ ಚುನಾವಣಾ ಪ್ರಕ್ರಿಯೆ ಮುಗಿಸಬೇಕಿದೆ. ನಾನು ಮತ್ತೆ ಆಯ್ಕೆ ಆಗುತ್ತೇನೋ ಇಲ್ಲವೊ ಗೊತ್ತಿಲ್ಲ. ಪಕ್ಷ ಏನು ಜವಾಬ್ದಾರಿ ಕೊಡುತ್ತದೆಯೋ ಅದನ್ನು ನಿಭಾಯಿಸುತ್ತೇನೆ ಎಂದರು.

'ಭಾರತ್ ಜೋಡೊ' ಐಕ್ಯತೆಯ ವಿವರಣೆ
ಭಾರತ್ ಜೋಡೋ ಯಾತ್ರೆಯು ದೇಶದಲ್ಲೇ ದೊಡ್ಡ ಐಕ್ಯತಾ ಯಾತ್ರೆ ಆಗಿದೆ. ಐಕ್ಯತಾ ಯಾತ್ರೆಗೆ ಜನತೆ ಉತ್ತಮ ಪ್ರೋತ್ಸಾಹ ಕೊಡುತ್ತಿದ್ದಾರೆ. ಯಾತ್ರೆಯ ಉದ್ದೇಶ ತಿಳಿಸುವ ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ಮಾಡುತ್ತಿದ್ದೇನೆ. ಸೆಪ್ಟೆಂಬರ್‌ 30 ರಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶ ಮಾಡಲಿದೆ. ಯಾತ್ರೆಯಲ್ಲಿ ಪಕ್ಷಾತೀತವಾಗಿ ಭಾಗವಹಿಸಬಹುದು. ಎಷ್ಟು ಜನ ಬೇಕಾದರೂ ಭಾಗವಹಿಸಲು ಅವಕಾಶವಿದೆ. ಯಾತ್ರೆ ಸಂದರ್ಭದಲ್ಲಿ ರಾಹುಲ್‍ ಗಾಂಧಿ ಅವರು ರೈತರು, ಮಹಿಳೆಯರು ಸೇರಿದಂತೆ ವಿವಿಧ ಸಂಘಟನೆಗಳನ್ನು ಭೇಟಿ ಮಾಡಲಿದ್ದಾರೆ. ಪ್ರತಿದಿನ ಇಬ್ಬರು ಶಾಸಕರಿಗೆ ಯಾತ್ರೆಯ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದರು.

English summary
When Rahul Gandhi came to Karnataka as part of Bharat Jodo, KPCC president DK Shivakumar requested that those attending his event should not bring garlands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X