ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಷಪ್ರಸಾದ ಸೇವನೆ: ಅಸ್ವಸ್ಥಗೊಂಡವರು ಗುಣಮುಖರಾಗಲು ಮೃತ್ಯುಂಜಯ ಹೋಮ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಡಿಸೆಂಬರ್ 18: ಸುಲ್ವಾಡಿ ಗ್ರಾಮದಲ್ಲಿರುವ ಕಿಚ್ಚು ಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ ಈಗಾಗಲೇ 15 ಮಂದಿ ಮೃತಪಟ್ಟು ನೂರಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಈ ಹೃದಯ ವಿದ್ರಾವಕ ಘಟನೆಯಿಂದ ಇಡೀ ಚಾಮರಾಜನಗರ ಜಿಲ್ಲೆಯೇ ದುಃಖದ ಮಡುವಿನಲ್ಲಿ ಮುಳುಗಿದೆ.

ಸುಳ್ವಾಡಿ ವಿಷಪ್ರಸಾದ ಸೇವನೆ ಪ್ರಕರಣ:ತನಿಖೆ ವಿಳಂಬ ಸಾಧ್ಯತೆಸುಳ್ವಾಡಿ ವಿಷಪ್ರಸಾದ ಸೇವನೆ ಪ್ರಕರಣ:ತನಿಖೆ ವಿಳಂಬ ಸಾಧ್ಯತೆ

ಕುಟುಂಬಕ್ಕೆ ಆಧಾರವಾಗಿದ್ದವರನ್ನು, ಭವಿಷ್ಯದಲ್ಲಿ ಬದುಕಿ ಬಾಳಬೇಕಾಗಿದ್ದ ಮಕ್ಕಳನ್ನು, ಗಂಡ, ಹೆಂಡತಿ, ಹೀಗೆ ಒಬ್ಬರನೊಬ್ಬರನ್ನು ಕಳೆದುಕೊಂಡು ಊರಿಗೆ ಊರೇ ಸ್ಮಶಾನವಾಗಿದ್ದು ಜಿಲ್ಲೆಗೆ ಬಂದೊದಗಿರುವ ಸಂಕಷ್ಟ ನಿವಾರಿಸುವಂತೆ ಮತ್ತು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿರುವವರು ಆರೋಗ್ಯ ಸುಧಾರಿಸುವಂತೆ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ದೇವಾಂಗ ಪೇಟೆಯಲ್ಲಿರುವ ಶ್ರೀ ಮಳಿಗೆ ಮಾರಿಯಮ್ಮ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮವನ್ನು ನಡೆಸಲಾಯಿತು.

ಸುಳ್ವಾಡಿ ವಿಷಪ್ರಸಾದ ಪ್ರಕರಣ:ಇನ್ನೆರಡು ದಿನದಲ್ಲಿ ಸಂಪೂರ್ಣ ಮಾಹಿತಿ ಲಭ್ಯಸುಳ್ವಾಡಿ ವಿಷಪ್ರಸಾದ ಪ್ರಕರಣ:ಇನ್ನೆರಡು ದಿನದಲ್ಲಿ ಸಂಪೂರ್ಣ ಮಾಹಿತಿ ಲಭ್ಯ

Murthyanjaya Homa was conducted in Kollegal

ತಿ.ನರಸೀಪುರ ಕ್ಷೇತ್ರದ ಮಾಜಿ ಶಾಸಕರಾದ ಬಿಜೆಪಿ ಮುಖಂಡ ಭಾರತಿಶಂಕರ್ ರವರು ಈ ಮೃತ್ಯುಂಜಯ ಹೋಮದಲ್ಲಿ ಭಾಗಿಯಾಗಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

English summary
Suluvadi Maramma temple tragedy: Murthyanjaya Homa was conducted in Kollegal town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X