ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಶತಮಾನದ ಬಳಿಕ ಪೌರಕಾರ್ಮಿಕರಿಗೆ ಸಿಕ್ತು ಮನೆ ಹಕ್ಕು

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಜುಲೈ 3: ಸುಮಾರು ನೂರು ವರ್ಷಗಳಿಂದ ವಾಸಿಸುತ್ತಿದ್ದರೂ ಮನೆಯ ಜಾಗ ಅವರ ಹೆಸರಿನಲ್ಲಿರಲಿಲ್ಲ. ಯಾರಾದರೂ ಬಂದೂ ಖಾಲಿ ಮಾಡಿ ಎನ್ನಬಹುದು ಎಂಬ ಆತಂಕದಲ್ಲಿದ್ದ ನಗರದ ಪೌರಕಾರ್ಮಿಕರು ನಿರಾಳರಾಗಿದ್ದಾರೆ.

ನಗರದ ಕರಿನಂಜನಪುರ-ನ್ಯಾಯಾಲಯ ರಸ್ತೆಯಲ್ಲಿರುವ ಒಂಬತ್ತನೇ ವಾರ್ಡ್ ಗೆ ಸೇರಿದ ಸುಮಾರು 92 ಮನೆಗಳ ಸಮೂಹ ಇರುವ ಪೌರಕಾರ್ಮಿಕರ ಕಾಲೋನಿಗೆ ಶನಿವಾರ 'ಹಕ್ಕುಪತ್ರ'ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವಿತರಿಸಿ ಪೌರ ಕಾರ್ಮಿಕರ ಆತಂಕ ದೂರ ಮಾಡಿದ್ದಾರೆ.

ಡೋಲಿ ಮೂಲಕ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದ ಜನ: ಇದು ಸರ್ಕಾರ ತಲೆತಗ್ಗಿಸುವ ಘಟನೆಡೋಲಿ ಮೂಲಕ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದ ಜನ: ಇದು ಸರ್ಕಾರ ತಲೆತಗ್ಗಿಸುವ ಘಟನೆ

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಈ ಕಾಲೋನಿಯ 84 ಮನೆಗಳಿಗೆ ಹಕ್ಕುಪತ್ರ ವಿತರಿಸಿದ್ದು ಪೌರ ಕಾರ್ಮಿಕರಿಗೆ ಹೊಸದಾಗಿ ಮನೆಗಳನ್ನು ಕಟ್ಟಿಕೊಡುವ ಭರವಸೆಯನ್ನು ನೀಡಿದ್ದಾರೆ.

ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ಕುದುರೆ ಕಟ್ಟಲು ಚಾಮರಾಜನಗರದಲ್ಲಿ ನಿರ್ಮಿಸಿದ್ದ ಮನೆಗಳನ್ನು, ಆ ಕಾಲದಲ್ಲಿ ಪುರದ ಶುಚಿತ್ವ ಕಾಪಾಡುತ್ತಿದ್ದ ಪೌರಕಾರ್ಮಿಕರಿಗೆ ನೀಡಿದ್ದರು. ಕೇವಲ ಎಂಟತ್ತು ಜನರಿದ್ದ ಸಮೂಹಕ್ಕೆ ಅಂದು ಮನೆಗಳನ್ನು ನೀಡಲಾಗಿತ್ತು.

ಚಾಮರಾಜನಗರ; ಈ ಶಾಲೆಯಲ್ಲಿ ಪಾಠದ ಜೊತೆ ಬಿಲ್ಲು, ಕತ್ತಿವರಸೆ ತರಬೇತಿ! ಚಾಮರಾಜನಗರ; ಈ ಶಾಲೆಯಲ್ಲಿ ಪಾಠದ ಜೊತೆ ಬಿಲ್ಲು, ಕತ್ತಿವರಸೆ ತರಬೇತಿ!

ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣವಾಗಿದ್ದ ಮನೆಯಲ್ಲೇ ವಾಸ

ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣವಾಗಿದ್ದ ಮನೆಯಲ್ಲೇ ವಾಸ

ಮೈಸೂರು ಅರಸರ ಆಡಳಿತಾವಧಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸುವವರಿಗೆ ಈ ಜಾಗವನ್ನು ನೀಡಿದ್ದರು. ಆಗ ಬೆರಳೆಣಿಕೆಯಷ್ಟಿದ್ದ ಜನಸಂಖ್ಯೆ ಹೆಚ್ಚಿದಂತೆಲ್ಲ ಅಕ್ಕಪಕ್ಕದಲ್ಲೇ ಪುಟ್ಟಪುಟ್ಟ ಗುಡಿಸಲುಗಳು ತಲೆ ಎತ್ತಿಕೊಂಡಿದ್ದವು. ಸ್ವಾತಂತ್ರ್ಯ ಪೂರ್ವದಲ್ಲೇ ನಿರ್ಮಾಣವಾಗಿದ್ದ ಹಳೆಯ ಮನೆಗಳನ್ನೇ ಇತ್ತೀಚಿನ ವರ್ಷಗಳಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನವೀಕರಿಸಲಾಗಿತ್ತು. ಆದರೆ ಯಾವುದೇ ಕುಟುಂಬಕ್ಕೂ ತಾವು ವಾಸಿಸುತ್ತಿರುವ ಮನೆಗಳ ಮೇಲೆ ಹಕ್ಕಿರಲಿಲ್ಲ. ಹೀಗಾಗಿ ಅಲ್ಲಿನ ನಿವಾಸಿಗಳು ಕಳೆದ ಹತ್ತಾರು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದರು.

ಗಾಲಿಪುರ ಮಹೇಶ್ ನೆರವು

ಗಾಲಿಪುರ ಮಹೇಶ್ ನೆರವು

ಹತ್ತಾರು ವರ್ಷಗಳಿಂದ ತಮ್ಮ ಮನೆಗಳಿಗೆ ಹಕ್ಕುಪತ್ರ ಇಲ್ಲದೇ ತೊಂದರೆಗೆ ಸಿಲುಕಿದ್ದ ಇಲ್ಲಿನ ನಿವಾಸಿಗಳು ಈಗ ನಿರಾಳರಾಗಿದ್ದಾರೆ. ನಗರಸಭೆ ಸದಸ್ಯ ಗಾಳಿಪುರ ಮಹೇಶ್ ಒತ್ತಾಸೆ ಬಳಿಕ ಕನಸು ನನಸಾಗುತ್ತಿದ್ದು, ಕಳೆದ ವರ್ಷ ಈ ಕಾಲೋನಿಗೆ ಬೀದಿ ದೀಪ ಆಳವಡಿಸಿ ಮನೆಗಳ ಮುಂದೆ ಬೆಳಕು ಹರಿಸಲಾಗಿತ್ತು. ಈಗ ಹಕ್ಕುಪತ್ರ ನೀಡುವ ಮೂಲಕ ಬಡ ಮನಸುಗಳಲ್ಲಿ ಬೆಳಕು ತುಂಬಲಾಗಿದೆ.

ಕಾಲೋನಿಯನ್ನೇ ನವೀಕರಿಸಲು ಮನವಿ

ಕಾಲೋನಿಯನ್ನೇ ನವೀಕರಿಸಲು ಮನವಿ

ಹಕ್ಕುಪತ್ರ ಪಡೆಯೋದು ನಮ್ಮ ಕನಸಾಗಿತ್ತು.ಆದರೆ ಈ ಕಾಲೋನಿಯಲ್ಲಿ ಈವರೆಗೆ ನಾವೆಲ್ಲರೂ ಅನ್ಯೋನ್ಯತೆಯಿಂದ ವಾಸ ಮಾಡುತ್ತಾ ಬಂದಿದೀವಿ. ಆದರೆ ನಮ್ಮ ಮೊಮ್ಮಕ್ಕಳು ಹೀಗೆಯೇ ಸರಿದೂಗಿಸಿಕೊಂಡು ಹೋಗಲಾರರು. ಆದ್ದರಿಂದ ಸರ್ಕಾರ ನಮ್ಮ ಇಡೀ ಕಾಲೋನಿಯನ್ನೇ ನವೀಕರಿಸಿ, ಸುಸಜ್ಜಿತ ರಸ್ತೆ, ನೀರು, ಚರಂಡಿ, ಮಕ್ಕಳು ಆಟವಾಡೋಕೆ ಪಾರ್ಕು, ಸಮುದಾಯ ಭವನ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಾರೆ ಇಲ್ಲಿನ ನಿವಾಸಿ ಸರಸಮ್ಮ.

ಮನೆಯ ಹಿರಿಯರ ಹೆಸರಿಗೆ ಪತ್ರ

ಮನೆಯ ಹಿರಿಯರ ಹೆಸರಿಗೆ ಪತ್ರ

ಹಕ್ಕು ಪತ್ರ ಕೊಡಿಸಿದ್ದರ ಬಗ್ಗೆ ನಗರಸಭಾ ಸದಸ್ಯ ಗಾಳಿಪುರ ಮಹೇಶ್ ಮಾತನಾಡಿ, ತಾನು ಒಂಬತ್ತನೇ ವಾರ್ಡಿನಲ್ಲಿ ಗೆದ್ದ ನಂತರ ಮಾಡಿದ ಮೊದಲ ಕೆಲಸವೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಇಲ್ಲಿನ ನಿವಾಸಿಗಳ ಬಗ್ಗೆ ಚರ್ಚೆ ಮಾಡಿದ್ದು. ಈವರೆಗೆ ಅವರ ಹೆಸರಲ್ಲಿ ಹಕ್ಕುಪತ್ರವೇ ಇಲ್ಲದಿರುವುದರಿಂದ ಸರ್ಕಾರದ ಯಾವುದೇ ಸವಲತ್ತನ್ನೂ ಅವರು ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ಕೊಳಚೆ‌ ನಿರ್ಮೂಲನಾ ಮಂಡಳಿ ವತಿಯಿಂದ ಇಲ್ಲಿನ ಮನೆಗಳ ಹಿರಿಯ ನಿವಾಸಿ ಹೆಸರಲ್ಲಿ ಹಕ್ಕುಪತ್ರ ಕೊಡಲಾಗಿದೆ. ಹಕ್ಕುಪತ್ರ ನೀಡಿರುವುದು ವೈಯಕ್ತಿಕವಾಗಿ ನನಗೂ ಖುಷಿ ನೀಡಿದೆ ಎಂದರು.

Recommended Video

Kohli ಹಾಗು Bairstow ನಡುವೆ ಏನಿದು ಗಲಾಟೆ | *Cricket | OneIndia Kannada

English summary
Housing minister of Karnataka V. Somanna distribute house documents papers to pourakarmika families, who living in Chamarajanagar more than 100 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X