• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಗಿಣಿಗೆ ಡ್ರಗ್ಸ್ ನಂಟು ಇದೆ ಎಂದು ಗೊತ್ತಿರಲಿಲ್ಲ; ಸಚಿವ ನಾರಾಯಣಗೌಡ

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಸೆಪ್ಟೆಂಬರ್ 7: ಸಿಸಿಬಿ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಅವರ ಡ್ರಗ್ಸ್ ನಂಟಿನ ಬಗ್ಗೆ ನನಗೆ ಗೊತ್ತಿರಲಿಲ್ಲ ಎಂದು ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ನಾರಾಯಣ ಗೌಡ ತಿಳಿಸಿದರು.

   Raginiನಾ ಬಿಟ್ಟು ಬಿಡಿ ಅಂತಿದ್ದಾರಂತೆ ಈ ದೊಡ್ಡ ಮನುಷ್ಯ | Oneindia Kannada

   ಚಾಮರಾಜನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗಕ್ಕೂ ನನಗೂ ಹೆಚ್ಚಿನ ಸಂಪರ್ಕ‌ ಇಲ್ಲ. ಉಪ ಚುನಾವಣೆ ಸಂದರ್ಭದಲ್ಲಿ ಪಕ್ಷದ ಹಿತೈಷಿಗಳು ರಾಗಿಣಿ ಅವರನ್ನು ಪ್ರಚಾರಕ್ಕೆ ಕರೆಸಿದ್ದರು. ನಟಿ ರಾಗಿಣಿ ಅವರನ್ನು ನಾನು ಪ್ರಚಾರಕ್ಕೆ ಕರೆಸಿರಲಿಲ್ಲ. ಅವರಾಗಿಯೇ ಪ್ರಚಾರಕ್ಕೆ ಬಂದರೆ ಬರಬೇಡಿ ಅಂತ ಹೇಳಲು ಸಾಧ್ಯವೇ? ಎಂದು ಸಚಿವ ನಾರಾಯಣ ಗೌಡ ಪ್ರಶ್ನಿಸಿದರು.

   ಗಾಂಜಾ, ಮಾದಕ ವಸ್ತು ವಿರುದ್ಧ ಮೈಸೂರು ಪೊಲೀಸ್ ಕಾರ್ಯಾಚರಣೆ

   ರಾಗಿಣಿ ಪರವಾಗಿ ಪಕ್ಷದಲ್ಲಿ ಯಾರೂ ಇಲ್ಲದಿದ್ದರೂ, ವಿರೋಧ ಪಕ್ಷಗಳ ನಾಯಕರು ಮಾತ್ರ ಬಿಜೆಪಿ ನಾಯಕರು ರಾಗಿಣಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.

   ರಾಗಿಣಿ ಅವರು ಈ ರೀತಿ ಎಂದು ಗೊತ್ತಿರಲಿಲ್ಲ. ಚುನಾವಣಾ ಸಂದರ್ಭದಲ್ಲಿ ಪ್ರಚಾರಕ್ಕೆ‌ ಬಂದರೆ ನಾವು ಏನು‌ ಮಾಡುವುಕ್ಕೆ ಆಗುತ್ತದೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.

   English summary
   "I did not know about actress Ragini Dwivedi's drug Relationship' said Minister Narayana Gowda In Chamarajanagara.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X