• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆ ಪಕ್ಕದ ಕಾಂಪೌಂಡ್ ನಲ್ಲಿ ಗಾಂಜಾ ಬೆಳೆ: ಪೊಲೀಸ್ ದಾಳಿ

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಅಕ್ಟೋಬರ್ 12: ಮನೆಯ ಪಕ್ಕದಲ್ಲಿ ಸುತ್ತಲೂ 8 ಅಡಿ ಎತ್ತರದ ಕಾಂಪೌಂಡ್ ಕಟ್ಟಿ ಅದಕ್ಕೆ ಬಾಗಿಲು ನಿರ್ಮಿಸದೆ, ಗಾಂಜಾ ಬೆಳೆಯುತ್ತಿದ್ದ ಪ್ರದೇಶದ ಮೇಲೆ ಪೊಲೀಸರು ದಾಳಿ ನಡೆಸಿ, ಗಾಂಜಾ ಬೆಳೆಯನ್ನು ನಾಶಪಡಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

   ಮನೆ ಮುಂದೆ ಗಾಂಜಾ ಗಿಡ, ಖತರ್ನಾಕ್ ಕಳ್ಳರು | Oneindia Kannada

   ಜಿಲ್ಲೆಯ ಹನೂರು ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಮನೆ ಪಕ್ಕದ ಕಾಂಪೌಂಡ್ ನಲ್ಲೇ ಗಾಂಜಾ ಬೆಳೆಯುತ್ತಿದ್ದವರ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳು ಖತರ್ನಾಕ್ ಐಡಿಯಾ ಬಳಸಿ ಬರೋಬ್ಬರಿ 228 ಗಾಂಜಾ ಗಿಡಗಳನ್ನು ಬೆಳೆದಿದ್ದರು ಎನ್ನಲಾಗಿದೆ.

   ಚಾಮರಾಜನಗರದಲ್ಲಿ ರೈತರ "ನಮ್ದು" ಮಾರುಕಟ್ಟೆ ಕಾರ್ಯಾರಂಭ

   ಮೂವರು ಆರೋಪಿಗಳಾದ ಅಳಿಯ ಗೋವಿಂದರಾಜು, ಮಾವ ಚಿನ್ನವೆಂಕಟಾಬೋವಿ ಹಾಗೂ ಭಾಮೈದ ಕುಮಾರ್ ಪರಾರಿಯಾಗಿದ್ದಾರೆ. ಮನೆಯ ಬಳಿ ಕಾಂಪೌಂಡ್ ಬೆಳೆದಿದ್ದ 154 ಕೆ.ಜಿ ಹಸಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

   ಹನೂರು ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಜಮೀನಿನಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆ ಬಳಿ ಯಾವುದೇ ಪ್ರವೇಶ ದ್ವಾರ ಇಲ್ಲದಂತೆ ಕಾಂಪೌಂಡ್ ನಿರ್ಮಿಸಿ ಮಾವ, ಅಳಿಯ ಹಾಗೂ ಮತ್ತೋರ್ವ ಸಂಬಂಧಿ ಗಾಂಜಾ ಬೆಳೆಯುತ್ತಿದ್ದರು.

   ಇದರ ಖಚಿತ ಮಾಹಿತಿ ಮೇರೆಗೆ ರಾಮಾಪುರ ಠಾಣೆ ಪಿಎಸ್ಐ ಮನೋಜ್ ಕುಮಾರ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ, ಮಾದಕ ವಸ್ತು ವಶಪಡಿಸಿಕೊಂಡಿದೆ. ಸದ್ಯ ರಾಮಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮನೋಜ್ ಕುಮಾರ್ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರು ಬಹುಮಾನ ಘೋಷಿಸಿದ್ದಾರೆ.

   English summary
   Police raided a marijuana growing area near the house and destroyed the marijuana crop, This incident took place in Chamarajanagar district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X