• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ; ಮನ್ ಕೀ ಬಾತ್ ಪ್ರೇರಣೆ, ಬದುಕು ಕಟ್ಟಿಕೊಂಡ ಮಹಿಳೆ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಆಗಸ್ಟ್‌, 10: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್‌ ಕಾರ್ಯಕ್ರಮದಿಂದ ಪ್ರೇರಣೆಗೊಂಡ ಮಹಿಳೆ ಕಸದಿಂಸ ರಸ ತೆಗೆಯುತ್ತಿದ್ದು, ಬಾಳೆದಿಂಡಿನಿಂದ ತಮ್ಮ ಬದುಕನ್ನು ಬಂಗಾರವಾಗಿಸಿಕೊಂಡಿದ್ದಾರೆ.

ಇವರ ಸಾಧನೆಯ ಹಾದಿಯನ್ನು ಕೇಳಿದರೆ ಎಂಥವರೂ ಶಾಕ್‌ ಆಗುವುದಂತೂ ನಿಜ. ಎಂ.ಟೆಕ್‌ ಪದವಿ ಮುಗಿಸಿದ್ದರೂ ಕೂಡ ಯಾವುದೇ ಹಂಗಿಲ್ಲದೆ, ಅಂಜಿಕೆಯಿಲ್ಲದೆ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವ ಹಂಬಲದಿಂದ ಚಿಕ್ಕ ಉದ್ಯಮಕ್ಕೆ ಕೈ ಹಾಕುತ್ತಾರೆ.

ಚಾಮರಾಜನಗರ; ನಗರಸಭೆಯಿಂದ ಕಳಪೆ ಧ್ವಜ ಪೂರೈಕೆ, ವರ್ತಕರ ಆಕ್ರೋಶ ಚಾಮರಾಜನಗರ; ನಗರಸಭೆಯಿಂದ ಕಳಪೆ ಧ್ವಜ ಪೂರೈಕೆ, ವರ್ತಕರ ಆಕ್ರೋಶ

ಆ ಚಿಕ್ಕ ಉದ್ಯಮ್ಯವೇ ಇವತ್ತಿನ ದಿನಗಳಲ್ಲಿ ದೊಡ್ಡ ದೊಡ್ಡ ಕಂಪನಿಗಳೂ ಬೇಡಿಕೆ ಇಡುವ ಮಟಕ್ಕೂ ಬೆಳೆದಿದೆ. ಕೆಲವರು ಹೇಳುತ್ತಾರೆ ಕೋಟಿ ಇದ್ದರೆ ಮಾತ್ರ ಬಿಸಿನೆಸ್‌ ಮಾಡುವುದಕ್ಕೆ ಸಾಧ್ಯ ಎಂದು. ಆದರೆ ಚಾಮರಾಜನಗರದ ಈ ದಂಪತಿ ಒಂದು ಚಿಕ್ಕ ಬಾಳೆ ದಿಂಡಿನಿಂದ ಉದ್ಯಮ ಪ್ರಾರಂಭಿಸಿ ಇದೀಗ ಬೃಹತ್‌ ಮಟ್ಟಕ್ಕೆ ಬೆಳೆದಿರುವುದು ದೊಡ್ಡ ದೊಡ್ಡ ಉದ್ಯಮಿಗಳನ್ನೇ ದಂಗಾಗುವಂತೆ ಮಾಡಿದೆ.

ರೈತರು ಬಾಳೆಗೊನೆ ಕೊಯ್ದ ನಂತರ ಬಾಳೆದಿಂಡು ಅನುಪಯುಕ್ತ ಎಂದು ಬಿಸಾಡುತ್ತಾರೆ. ಆದರೆ ಈ ಅನುಪಯುಕ್ತ ಬಾಳೆದಿಂಡಿನಿಂದ ಮ್ಯಾಟ್, ಫ್ಲೋರ್ ಮ್ಯಾಟ್, ಚಾಪೆ, ಬ್ಯಾಗ್, ಪರ್ಸ್‌ಗಳನ್ನು ತಯಾರಿಸಬಹುದು ಎಂಬುದನ್ನು ಚಾಮರಾಜನಗರದ ಪುಷ್ಪಾ ಎಂಬ ಎಂ.ಟೆಕ್ ಪದವೀಧರೆ ತೋರಿಸಿಕೊಟ್ಟಿದ್ದಾರೆ.

ಮೂಲತಃ ಗುಂಡ್ಲುಪೇಟೆ ತಾಲೂಕು ಆಲಹಳ್ಳಿಯ ಎಂ.ಟೆಕ್ ಪದವೀಧರೆ ಪುಷ್ಪಾ ಯಾವುದೇ ಉದ್ಯೋಗಕ್ಕೆ ಸೇರಿರಲಿಲ್ಲ. ಸ್ವಂತ ಉದ್ಯಮ ಪ್ರಾರಂಭಿಸಿ ಕೈಲಾದಷ್ಟು ಜನರಿಗೆ ಉದ್ಯೋಗ ನೀಡಬೇಕು ಎಂಬ ಕನಸು ಹೊತ್ತಿದ್ದರು ಪುಷ್ಪಾ. ಅವರಿಗೆ ಮನ್ ಕೀ ಬಾತ್‌ನಲ್ಲಿ ನರೇಂದ್ರ ಮೋದಿ ಅವರು ಬಾಳೆದಿಂಡಿನ ವಿವಿಧ ವಸ್ತುಗಳನ್ನು ತಯಾರಿ ಬಗ್ಗೆ ಪ್ರಸ್ತಾಪಿಸಿದ್ದನ್ನು ಗಮನದಲ್ಲಿಟ್ಟುಕೊಂಡಿದ್ದರು. ಇದರಿಂದ ಪ್ರೇರಣೆಗೊಂಡ ಪುಷ್ಪಾ ನಾನೇಕೆ ಇದನ್ನು ಪ್ರಯತ್ನಿಸಿಸಬಾರದು ಎಂದು ಯೋಚನೆ ಮಾಡಿ ಈ ನಿರ್ಧಾಕ್ಕೆ ಬಂದಿದ್ದಾರೆ.

 ಉದ್ಯಮಕ್ಕೆ ಖರೀದಿಸಿದ ಯಂತ್ರದ ಬೆಲೆ?

ಉದ್ಯಮಕ್ಕೆ ಖರೀದಿಸಿದ ಯಂತ್ರದ ಬೆಲೆ?

ಬಾಳೆ ದಿಂಡಿನ ಉತ್ಪನ್ನಗಳ ಬಗ್ಗೆ ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿದ್ದರು. ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಾಳೆ ದಿಂಡಿನಿಂದ ಉತ್ಪನ್ನಗಳ ತಯಾರಿಕೆ ಮಾಡುತ್ತಿರುವ ದೃಶ್ಯಾವಳಿಯನ್ನು ಫೋನ್‌ನಲ್ಲಿಯೇ ವೀಕ್ಷಿಸಿದ್ದಾರೆ. ಬಳಿಕ ಕೊಯಮತ್ತೂರಿನಿಂದ 3 ಲಕ್ಷ ರೂಪಾಯಿ ಮೊತ್ತದ ಯಂತ್ರೋಪಕರಣಗಳನ್ನ ಖರೀದಿಸಿದ್ದರು. ಇದೀಗ ಇವರು ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಬಾಳೆ ದಿಂಡು ಉತ್ಪನ್ನಗಳ ತಯಾರಿಕಾ ಉದ್ಯಮ ಆರಂಭಿಸಿದ್ದಾರೆ.

 ನಿರುಪಯುಕ್ತ ವಸ್ತು ಉಪಯೋಗಕ್ಕೆ ಬಂದಿದ್ದು?

ನಿರುಪಯುಕ್ತ ವಸ್ತು ಉಪಯೋಗಕ್ಕೆ ಬಂದಿದ್ದು?

ನಗರ ಪ್ರದೇಶಗಳಲ್ಲಿರುವ ಆರ್ಗ್ಯಾನಿಕ್ ಶಾಪ್, ಗೂಗಲ್, ಫ್ಲಿಪ್‌ಕಾರ್ಟ್, ಅಮೇಜಾನ್ ಮೂಲಕ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಬಾಳೆ ದಿಂಡಿನ ರಸದಲ್ಲಿ ಪೊಟ್ಯಾಷಿಯಂ ಅಂಶ ಇರುವುದರಿಂದ ಅದನ್ನು ಬಿಸಾಡದೆ ಉಪಯೋಗಿಸಿಕೊಳ್ಳುತ್ತಾರೆ. ರಾಸಾಯನಿಕ ಗೊಬ್ಬರದ ಬದಲು ಬಾಳೆ ದಿಂಡಿನ ರಸ ಹಾಗೂ ದಿಂಡಿನಿಂದ ನಾರು ತೆಗೆದ ನಂತರ ಉಳಿಯುವ ವೇಸ್ಟ್‌‌ನಿಂದ ಸಾವಯವ ಗೊಬ್ಬರ ತಯಾರಿಸಿ ಅದನ್ನೇ ತಮ್ಮ ಜಮೀನಿಗೆ ಬಳಸುತ್ತಿದ್ದಾರೆ.

 ಬಿಡುವಿನ ಸಮಯದಲ್ಲಿ ಪತ್ನಿಗೆ ಸಹಾಯ

ಬಿಡುವಿನ ಸಮಯದಲ್ಲಿ ಪತ್ನಿಗೆ ಸಹಾಯ

ಇವರು ತಯಾರಿಸುತ್ತಿರುವ ಬಾಳೆದಿಂಡಿನ ಚಾಪೆಗಳನ್ನು ಕೊಯಮತ್ತೂರಿನ ಕಂಪನಿಯೊಂದು ಖರೀದಿಸುತ್ತಿದೆ. ಬಾಳೆದಿಂಡಿನಿಂದ ತಯಾರಿಸಲಾದ ವಸ್ತುಗಳು ಪರಿಸರಸ್ನೇಹಿ ಆಗಿರುವುದರಿಂದ ಬೇಡಿಕೆ ಹೆಚ್ಚಾಗಬಹುದು ಎನ್ನುವ ಆಶಯವನ್ನೂ ಅವರು ಹೊಂದಿದ್ದಾರೆ. ಮೈಸೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ಪತಿ ಶ್ರೀಕಂಠಸ್ವಾಮಿ ಅವರು ರಜಾ ದಿನಗಳಲ್ಲಿ ಬಾಳೆ ದಿಂಡಿನ ಉತ್ಪನ್ನಗಳನ್ನು ತಯಾರಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ. ಈ ಮೂಲಕ ತಮ್ಮ ಪತ್ನಿಯ ಕಾರ್ಯಕ್ಕೆ ಸದಾ ಸಾಥ್ ನೀಡುತ್ತಾ ಬಂದಿದ್ದಾರೆ.

 ರೈತನ ಮೂಲಕ ಬಾಳೆ ದಿಂಡು ಖರೀದಿ

ರೈತನ ಮೂಲಕ ಬಾಳೆ ದಿಂಡು ಖರೀದಿ

ಈ ದಂಪತಿ ಸುತ್ತಮುತ್ತಲಿನ ಜಮೀನುಗಳಲ್ಲಿ ಬಾಳೆ ಬೆಳೆಯುವ ರೈತರನ್ನು ಸಂಪರ್ಕಿಸಿ ಬಾಳೆ ದಿಂಡು ಬಿಸಾಡದೆ ತಮಗೆ ನೀಡುವಂತೆ ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಂದು ಬಾಳೆ ದಿಂಡಿಗೆ ಇಂತಿಷ್ಟು ಹಣ ಕೊಟ್ಟು ಖರೀದಿಸಲು ಆಲೋಚಿಸಿದ್ದಾರೆ. ಇದರಿಂದ ಸುತ್ತಮುತ್ತಲಿನ ರೈತರಿಗೂ ಲಾಭವಾಗಲಿದೆ ಎಂಬುದು ಅವರ ಆಶಯವಾಗಿದೆ.

Recommended Video

   ICC T20 Ranking ನಂ 2 ಕೆ.ಎಲ್ ರಾಹುಲ್ ಫಿಟ್ನೆಸ್ ಕಥೆಯೇನು..? | Oneindia Kannada
   English summary
   Chamarajanagar women become self employed after listen prime minister Narendra Modi Mann Ki Baat radio function. know more,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X