• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Man vs Wild Teaser : ರಜನಿಕಾಂತ್ ಎಪಿಸೋಡ್ ಟೀಸರ್ ಔಟ್

|

ಗುಂಡ್ಲುಪೇಟೆ, ಫೆಬ್ರವರಿ 27: ಸೂಪರ್ ಸ್ಟಾರ್ ರಜನಿಕಾಂತ್ 'ಮ್ಯಾನ್ ವರ್ಸಸ್ ವೈಲ್ಡ್' ಕಾರ್ಯಕ್ರಮ ಟೀಸರ್ ಬಿಡುಗಡೆಯಾಗಿದೆ. ಬಂಡೀಪುರ ಅರಣ್ಯ ಪ್ರದೇಶದಲ್ಲಿ ನಿರೂಪಕ ಬೇರ್ ಗ್ರಿಲ್ಸ್ ಜೊತೆಗೆ ರಜನಿಕಾಂತ್ ಜನವರಿಯಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಈ ಎಪಿಸೋಡ್ ಮಾರ್ಚ್ 23ರಂದು ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಬೇರ್ ಗ್ರಿಲ್ಸ್ ಹಾಗೂ ರಜನಿಕಾಂತ್ ಎಟಿವಿ ಬೈಕ್ ನಿಂದ ಅರಣ್ಯಕ್ಕೆ ಎಂಟ್ರಿ ಕೊಡುವ ದೃಶ್ಯದೊಂದಿಗೆ ಎಪಿಸೋಡು ಆರಂಭಗೊಳ್ಳುತ್ತದೆ. ಚಾಮರಾಜನಗರ ಜಿಲ್ಲೆಯ ವೇಣುಗೋಪಾಲ ವನ್ಯಜೀವಿ ಅಭಯಾರಣ್ಯ 1941ರಿಂದ ಹತ್ತು ಹಲವು ಅರಣ್ಯವಾಸಿಗಳಿಗೆ ನೆಲೆ ಒದಗಿಸಿವೆ.

ಡಿಸ್ಕವರಿ ಚಾನೆಲ್ ಕನ್ನಡದಲ್ಲಿ ಲಭ್ಯ, Man vs Wild ಕನ್ನಡದಲ್ಲೇ ನೋಡಿ

ಈ ಚಿತ್ರೀಕರಣದ ವೇಳೆ ರಜನಿಕಾಂತ್ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ರಜನಿಕಾಂತ್, "ಚಿತ್ರೀಕರಣ ಮುಕ್ತಾಯಗೊಂಡಿದೆ. ಕೆಲವು ತರಚು ಗಾಯಗಳಾಗಿವೆ. ನಾನು ಸುರಕ್ಷಿತವಾಗಿದ್ದೇನೆ" ಎಂದು ಸ್ಪಷ್ಟನೆ ನೀಡಿದ್ದರು.

ಇಂಗ್ಲೆಡ್ ಮೂಲದ ಸಾಕ್ಷ್ಯಚಿತ್ರ ತಯಾರಕ ಬೇರ್ ಗ್ರಿಲ್ಸ್ ಹಿಂದೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ 'ಮ್ಯಾನ್ ವರ್ಸಸ್ ವೈಲ್ಡ್' ಕಾರ್ಯಕ್ರಮ ಮಾಡಿದ್ದರು. ಈಗ ರಜನಿಕಾಂತ್ ಜೊತೆ ಕಾರ್ಯಕ್ರಮ ಮಾಡಿದ್ದು, ಅದನ್ನು ಬಂಡೀಪುರದಲ್ಲಿ ಚಿತ್ರೀಕರಿಸಲಾಗಿದೆ.

ಕಾಡು ಪ್ರಾಣಿಗಳಿಗೆ ಯಾವುದೇ ತೊಂದರೆ ಮಾಡಬಾರದು. ಹೆಚ್ಚು ಶಬ್ದ ಮಾಡಬಾರದು ಎಂಬ ಷರತ್ತಿನ ಅನ್ವಯ ಮಂಗಳವಾರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು. ಗುರುವಾರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

English summary
The Discovery Channel has dropped a fresh teaser featuring Superstar Rajinikanth who recently shot an episode of Into The Wild with Bear Grylls in Bandipur forest, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X