• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಕ್ತರ ದರ್ಶನಕ್ಕೆ ಸಜ್ಜುಗೊಂಡ ಮಲೆಮಹದೇಶ್ವರ ಬೆಟ್ಟ

|

ಚಾಮರಾಜನಗರ, ಜೂನ್ 02: ಸದಾ ಭಕ್ತರಿಂದ ತುಂಬಿ ತುಳುಕುವುದರೊಂದಿಗೆ ಆದಾಯದಲ್ಲಿ ಕೋಟ್ಯಧಿಪತಿಯಾಗಿ ಗಮನ ಸೆಳೆಯುತ್ತಿದ್ದ ರಾಜ್ಯದ ಪ್ರಮುಖ ದೇವಾಲಯಗಳಲ್ಲೊಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಹದೇಶ್ವರ ದೇವಾಲಯ ಇದುವರೆಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಭಕ್ತರಿಲ್ಲದೆ ಬಿಕೋ ಎನ್ನುತ್ತಿತ್ತು. ಆದರೆ ಜೂ.8ರಿಂದ ದೇವಾಲಯಗಳ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಿರುವುದರಿಂದ ದೇಗುಲದ ಅಭಿವೃದ್ಧಿ ಪ್ರಾಧಿಕಾರ ಸರ್ವ ರೀತಿಯಲ್ಲಿ ಸಜ್ಜುಗೊಂಡಿದೆ.

   ಕೊರೊನ ಕಾರಣ ಡಿಕೆಶಿ ಪದಗ್ರಹಣ ಸಮಾರಂಭ ರದ್ದು | DK Shivakumar | Oneindia Kannada

   ಸರ್ಕಾರ ದೇವಾಲಯದ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡುವುದರೊಂದಿಗೆ ಹಲವು ನಿಬಂಧನೆಗಳನ್ನು ಹೇರಿದ್ದು, ಅದರಂತೆ ಮಲೆಮಹದೇಶ್ವರ ದೇವಾಲಯದ ಪ್ರಾಧಿಕಾರವು ಭಕ್ತರು ದರ್ಶನದ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವ್ಯವಸ್ಥೆ ಮಾಡಿದೆ. ಪ್ರತಿ ಅಮಾವಾಸ್ಯೆಯಂದು ದೇಗುಲಕ್ಕೆ ಲಕ್ಷಾಂತರ ಜನರು ಬರುತ್ತಿದ್ದರು. ಆದರೆ ಇದೀಗ ನಿಯಮಿತ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

   ಇಂದಿನಿಂದ ಆನ್ ಲೈನ್ ನಲ್ಲಿ ಮಾದಪ್ಪನ ದರ್ಶನ

    ನೂಕುನುಗ್ಗಲಿಗೆ ಅವಕಾಶವಿಲ್ಲ

   ನೂಕುನುಗ್ಗಲಿಗೆ ಅವಕಾಶವಿಲ್ಲ

   ದೇವಸ್ಥಾನದ ಒಳಭಾಗದ ಆವರಣ ಮತ್ತು ಲಡ್ಡು ಪ್ರಸಾದ ಸ್ವೀಕರಿಸುವ ಸ್ಥಳ, ರಂಗಮಂಟಪದಲ್ಲಿ ಒಂದು ಮೀಟರ್ ಅಂತರದಲ್ಲಿ ವೃತ್ತಗಳನ್ನು ಬಿಡಿಸಲಾಗಿದ್ದು, ಭಕ್ತರು ಅದೇ ವೃತ್ತದಲ್ಲಿ ನಿಲ್ಲುವುದು ಅಗತ್ಯವಾಗಿದೆ. ಇನ್ನು ಮೊದಲಿನಂತೆ ನೂಕು ನುಗ್ಗಲಿಗೆ ಅವಕಾಶವಿಲ್ಲ. ಜತೆಗೆ ಸಾವಿರಾರು ಮಂದಿಗೂ ಅವಕಾಶವಿಲ್ಲ ಕೇವಲ 150 ಮಂದಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಅನುವು ಮಾಡಿಕೊಡಲಾಗಿದೆ.

    ಚಿನ್ನದ ತೇರು ಮತ್ತಿತರ ರಥದ ಸೇವೆ ಇಲ್ಲ

   ಚಿನ್ನದ ತೇರು ಮತ್ತಿತರ ರಥದ ಸೇವೆ ಇಲ್ಲ

   ರಂಗ ಮಂಟಪದಲ್ಲಿ ಎಬಿಸಿಡಿ ಎಂಬ ನಾಲ್ಕು ವಿಭಾಗ ಮಾಡಿ ಒಂದೊಂದು ಬ್ಲಾಕ್‌ನಲ್ಲಿ 200 ಮಂದಿ ಕುರ್ಚಿಯಲ್ಲಿ ಕೂರಲು ಅವಕಾಶ ಮಾಡಿಕೊಡಲಾಗುತ್ತಿದ್ದು, ದೇಗುಲ ಪ್ರವೇಶಕ್ಕೂ ಮುನ್ನ ಸಾನಿಟೈಸರ್ ಮಾಡುವ ಜೊತೆಗೆ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಗುತ್ತದೆ. ಇದೆಲ್ಲದರ ನಡುವೆ ಮಾದಪ್ಪನ ಬಹುಮುಖ್ಯ ಸೇವೆಯಾದ ಚಿನ್ನದ ತೇರು ಮತ್ತಿತರ ರಥದ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಜತೆಗೆ ಪರ ಮಾಡುವುದಕ್ಕೂ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಭಕ್ತರು ಬರುವವರು ಮೊದಲಿನಂತೆ ಸಿಕ್ಕ ಸಿಕ್ಕ ವಾಹನಗಳಾದ ಗೂಡ್ಸ್ ಆಟೋ, ಟ್ರ್ಯಾಕ್ಟರ್ ನಲ್ಲಿ ಬರುವವರಿಗೆ ಪ್ರವೇಶವಿಲ್ಲ. ಬಸ್ ಕಾರು, ಬೈಕ್ ‌ನಲ್ಲಿ ಬರುವ ಭಕ್ತರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

   ಮಹದೇಶ್ವರ ಬೆಟ್ಟದಲ್ಲಿ ಹಸಿವು ನೀಗಿಸಿದ ಮಾದಪ್ಪನ ಲಾಡು

    ಇಪ್ಪತ್ತು ಸಾವಿರ ಲಾಡು ತಯಾರಿ

   ಇಪ್ಪತ್ತು ಸಾವಿರ ಲಾಡು ತಯಾರಿ

   ಕ್ಷೇತ್ರದಲ್ಲಿ ಮೊದಲಿನಂತೆ ದಾಸೋಹ ಇರಲಿದೆಯಾದರೂ ಸಾಮೂಹಿಕವಾಗಿ ಕುಳಿತು ಸೇವನೆಗೆ ಅವಕಾಶವಿಲ್ಲ ಎನ್ನಲಾಗಿದೆ. ಇನ್ನು ಕ್ಷೇತ್ರಕ್ಕೆ ಬರುವ ಭಕ್ತರಿಗಾಗಿ ಸುಮಾರು ಇಪ್ಪತ್ತು ಸಾವಿರ ಲಾಡುಗಳನ್ನು ತಯಾರಿಸಲಾಗಿದೆ. ಸುಮಾರು ಎರಡು ತಿಂಗಳ ಕಾಲ ಭಕ್ತರಿಲ್ಲದೆ ಬಿಕೋ ಎನ್ನುತ್ತಿದ್ದ ಕ್ಷೇತ್ರದಲ್ಲಿ ಜೂ.8 ರಿಂದ ಭಕ್ತರು ಕಾಣಿಸಲಿದ್ದಾರೆ.

   ಸರ್ಕಾರ ಹಲವು ನಿರ್ಬಂಧ ಹೇರಿದ್ದು, ಅದನ್ನು ಪಾಲಿಸಿಕೊಂಡು ಕ್ಷೇತ್ರಕ್ಕೆ ಆಗಮಿಸಿದರೆ ಮಾತ್ರ ಮಹದೇಶ್ವರನ ದರ್ಶನ ಪಡೆಯಲು ಸಾಧ್ಯವಿದೆ. ಮೊದಲಿನಂತೆ ಗುಂಪುಗುಂಪಾಗಿ ಆಗಮಿಸುವಂತಿಲ್ಲ. ಜತೆಗೆ ಸ್ವಚ್ಛತೆ ಕಾಪಾಡುವುದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಲಾಕ್ ಡೌನ್ ಆದಲ್ಲಿಂದ ಭಕ್ತರನ್ನೇ ನಂಬಿ ಬದುಕುತ್ತಿದ್ದ ಇಲ್ಲಿನ ಹೂಹಣ್ಣು ವ್ಯಾಪಾರಿಗಳು ಸೇರಿದಂತೆ ಇತರೆ ವ್ಯಾಪಾರ ನಡೆಸುವವರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಇದೀಗ ದೇವಾಲಯದ ಬಾಗಿಲು ತೆರೆಯುತ್ತಿರುವ ವಿಚಾರ ತಿಳಿದು ಸಂತಸಗೊಂಡಿದ್ದಾರೆ.

    ದೇವಸ್ಥಾನ ತೆರೆಯುತ್ತಿರುವುದು ಜಿಲ್ಲಾಡಳಿತಕ್ಕೆ ಸವಾಲು?

   ದೇವಸ್ಥಾನ ತೆರೆಯುತ್ತಿರುವುದು ಜಿಲ್ಲಾಡಳಿತಕ್ಕೆ ಸವಾಲು?

   ಸದ್ಯ ಹಸಿರು ವಲಯದಲ್ಲಿರುವ ಚಾಮರಾಜನಗರ ಜಿಲ್ಲಾಡಳಿತಕ್ಕೆ ಈಗ ದೇವಾಲಯ ತೆರೆಯುತ್ತಿರುವುದು ಸವಾಲು ಎನ್ನುವುದು ಅಷ್ಟೇ ಸತ್ಯ. ಏಕೆಂದರೆ ಇಲ್ಲಿಗೆ ಸ್ಥಳೀಯರು ಮಾತ್ರವಲ್ಲದೆ, ಹೊರಗಿನಿಂದಲೂ ಭಕ್ತರು ಬರುವುದರಿಂದ ಅವರೆಲ್ಲರ ಆರೋಗ್ಯ ತಪಾಸಣೆ ನಡೆಸುವ ಮೂಲಕ ಎಚ್ಚರಿಕೆ ವಹಿಸಬೇಕಾಗುತ್ತದೆ. ರಾಜ್ಯದಲ್ಲಿಯೇ ಹಸಿರು ವಲಯದಲ್ಲಿರುವ ಏಕೈಕ ಜಿಲ್ಲೆಯಾಗಿರುವ ಚಾಮರಾಜನಗರದ ಜಿಲ್ಲಾಡಳಿತ ಇದೀಗ ಬಹು ಎಚ್ಚರಿಕೆಯಿಂದ ಭಕ್ತರಿಗೆ ಪ್ರವೇಶ ನೀಡಬೇಕಾಗಿದೆ.

   English summary
   Famous Male Mahadeshwara Temple in chamarajanagar district, getting ready for devotees after lockdown relaxation,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more