• search
 • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹದೇಶ್ವರ ಬೆಟ್ಟದ ಲಡ್ಡುಗೆ ಎಫ್‌ಎಸ್‌ಎಸ್‌ಎಐ ಮಾನ್ಯತೆ

|

ಚಾಮರಾಜನಗರ, ನವೆಂಬರ್ 09 : ಮಲೆ ಮಹದೇಶ್ವರ ಬೆಟ್ಟದಲ್ಲಿ ತಯಾರು ಮಾಡುವ ಲಡ್ಡು ಪ್ರಸಾದಕ್ಕೆ ಎಫ್‌ಎಸ್‌ಎಸ್‌ಎಐ ಮಾನ್ಯತೆ ಸಿಕ್ಕಿದೆ. ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳಕ್ಕೆ ಲಕ್ಷಾಂತರ ಭಕ್ತರು ಇದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮುಟ್ಟ ಪ್ರಾಧಿಕಾರ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ತಯಾರು ಮಾಡುವ ಲಡ್ಡು ಪ್ರಸಾದ ಮತ್ತು ದಾಸೋಹ ಪ್ರಸಾದ ತಯಾರಿಕಾ ವಿಧಾನಕ್ಕೆ ಮಾನ್ಯತೆಯನ್ನು ನೀಡಿದೆ.

ಮಲೆ ಮಹದೇಶ್ವರ ದೇವಾಲಯದ ಭಕ್ತರಿಗೆ ವಿಶೇಷ ಸೂಚನೆಗಳು

ಮಲೆ ಮಹದೇಶ್ವರ ಬೆಟ್ಟದ ಆಡಳಿತವನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನೋಡಿಕೊಳ್ಳಲಿದೆ. ಆರು ತಿಂಗಳ ಹಿಂದೆ ಪ್ರಾಧಿಕಾರ ಆಹಾರಕ್ಕೆ ಮಾನ್ಯತೆ ನೀಡಬೇಕು ಎಂದು ಎಫ್‌ಎಸ್‌ಎಸ್‌ಎಐಗೆ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು.

ಮಲೆ ಮಾದೇಶ್ವರ ದೇವಾಲಯದ ಭಕ್ತರ ಗಮನಕ್ಕೆ

ಅರ್ಜಿಯನ್ನು ಪರಿಶೀಲನೆ ನಡೆಸಿದ ಎಫ್‌ಎಸ್‌ಎಸ್‌ಎಐ ಲಡ್ಡು ಹಾಗೂ ದಾಸೋಹ ಪ್ರಸಾದ ತಯಾರಿಕಾ ವಿಧಾನಕ್ಕೆ ಮಾನ್ಯತೆ ನೀಡಿ ಆದೇಶ ಹೊರಡಿಸಿದೆ. ಪ್ರತಿನಿತ್ಯ ಸಾವಿರಾರು ಜನರು ದೇವಾಲಯಕ್ಕೆ ಆಗಮಿಸಲಿದ್ದು, ದಾಸೋಹ ಸ್ವೀಕರಿಸಲಿದ್ದಾರೆ.

ಮಲೆ ಮಹದೇಶ್ವರನ ದೇಗುಲ ಓಪನ್

   Muniratna vs Kusuma : RR Nagar ಕಣದಲ್ಲಿ ಗೆಲ್ಲೋದು ಯಾರು, ಎರಡೂ ಪಕ್ಷಗಳ ಜಿದ್ದಾಜಿದ್ದಿ | Oneindia Kannada

   "ಎಫ್‌ಎಸ್‌ಎಸ್‌ಎಐ ಪರವಾನಗೆ ಸಿಕ್ಕಿರುವುದರಿಂದ ಪ್ರಸಾದ ತಯಾರಿಕಾ ವಿಧಾನಸಲ್ಲಿ ಆರೋಗ್ಯ ಸುರಕ್ಷತೆ, ತಯಾರಿಕೆದಾರರು, ಬಳಕೆದಾರರಿಗೆ ಅದು ತಲುಪುವ ತನಕ ಪ್ರತಿ ಹಂತದಲ್ಲೂ ಹಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ" ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳಿದ್ದಾರೆ.

   English summary
   Male Mahadeshwara temple laddu and prasad get the tag from Food Safety and Standards Authority of India (FSSAI). Temple request for the tag.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X