ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ದಿನದಲ್ಲಿ ಮಲೆ ಮಹದೇಶ್ವರನ ಆನ್ ಲೈನ್ ದರ್ಶನ!

|
Google Oneindia Kannada News

ಚಾಮರಾಜನಗರ, ಮೇ 26: ಇನ್ನೆರಡು ದಿನದಲ್ಲಿ ಆನ್ ಲೈನ್‌ ಮೂಲಕ ಮಲೆ ಮಹದೇಶ್ವರನ ದರ್ಶನ ಜನತೆಗೆ ಸಿಗಲಿದ್ದು, ಪೋಸ್ಟ್ ಮೂಲಕ‌ ಪ್ರಸಾದವನ್ನೂ ಸ್ವೀಕರಿಸಬಹುದು ಎಂದು ಮಲೆ ಮಹದೇಶ್ವರ ಪ್ರಾಧಿಕಾರ ಮಂಡಳಿ ತಿಳಿಸಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ಭಕ್ತರಿಗೆ ಆನ್ ಲೈನ್ ಮೂಲಕ ಏಳುಮಲೆ ಒಡೆಯ ಮಲೆ ಮಹದೇಶ್ವರನ ದರ್ಶನ ಇನ್ನು ಎರಡು ದಿನಗಳಲ್ಲಿ ಪ್ರಾರಂಭವಾಗಲಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಮಲೆ ಮಹದೇಶ್ವರ ಕ್ಷೇತ್ರವಿದೆ.

ಬಂಡೀಪುರ ಕಾಡಂಚಿನಲ್ಲಿ ತಲೆ ಎತ್ತಿರುವ ಕಟ್ಟಡಗಳ ತೆರವು ಯಾವಾಗ?ಬಂಡೀಪುರ ಕಾಡಂಚಿನಲ್ಲಿ ತಲೆ ಎತ್ತಿರುವ ಕಟ್ಟಡಗಳ ತೆರವು ಯಾವಾಗ?

ಈಗಾಗಲೇ ಟ್ರಯಲ್ ನಡೆಸಲಾಗುತ್ತಿದ್ದು, ತಾಂತ್ರಿಕವಾಗಿ ಎಲ್ಲಾ ಸರಿ ಹೋಗಿದ್ದು, ಮಲೆ ಮಹದೇಶ್ವರ ಬೆಟ್ಟದ ಅಧಿಕೃತ ವೆಬ್ ಸೈಟಿನಲ್ಲಿ ಪ್ರತಿದಿನ‌ ಬೆಳಿಗ್ಗೆ ಮತ್ತು ಸಂಜೆ ಉಚಿತವಾಗಿ ಆನ್ ಲೈನ್ ಮೂಲಕ ದರ್ಶನ ಮಾಡಬಹುದಾಗಿದೆ.

Male Mahadeshwara Online Darshan To Start In Two Days

ಬೆಳಗಿನ ಅಭಿಷೇಕ‌ ಸಮಯವಾದ 4.30 ರಿಂದ 6 ಗಂಟೆ, ಮತ್ತು ಸಂಜೆ 6.45 ರಿಂದ 8 ಗಂಟೆಯವರೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಮಹದೇಶ್ವರ ಸ್ವಾಮಿ ಪೂಜೆಯ ನೇರಪ್ರಸಾರ ಮಾಡಲು ಸಿದ್ದಮಾಡಿಕೊಳ್ಳಲಾಗಿದೆ.

ಆನ್ ಲೈನ್ ಮೂಲಕವೇ ಸ್ವಾಮಿಯ ಭಕ್ತರು ಸೇವಾ ಚೀಟಿ ಪಡೆದು ಅವರ ಹೆಸರಿನಲ್ಲಿ ಪೂಜೆ ಮಾಡಿಸಬಹುದು. ವಿಶೇಷವಾಗಿ ಕರ್ನಾಟಕ ರಾಜ್ಯದ ಭಕ್ತರು ಸೇವೆ ಮಾಡಿಸಿದರೆ, ಅಂಚೆ ಮೂಲಕ ಕಲ್ಲುಸಕ್ಕರೆ, ದ್ರಾಕ್ಷಿ, ವಿಭೂತಿ ಹಾಗೂ ಬಿಲ್ವಪತ್ರೆಯನ್ನು ರವಾನಿಸಲಾಗುತ್ತದೆ. ಆದರೆ ಬೇರೆ ರಾಜ್ಯದ ಭಕ್ತರಿಗೆ ಅಂಚೆ ಪ್ರಸಾದ ಇಲ್ಲವೆಂದು ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಮೂಲಗಳಿಂದ ಮಾಹಿತಿ ಬಂದಿದೆ.

English summary
Male Mahadeshwars darshana will be available to the public in the next two days and Prasada can be received by post, the Male Mahadeshwara Authority Board said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X