ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಲ್ಲಾಡಳಿತದ ದಿಕ್ಕು ತಪ್ಪಿಸಿದ ಕೊರೊನಾ ಸೋಂಕಿತ ಮಳವಳ್ಳಿ ಸಿಡಿಪಿಒ

|
Google Oneindia Kannada News

ಚಾಮರಾಜನಗರ, ಮೇ 24: ನಂಜನಗೂಡು ತಾಲ್ಲೂಕಿನ ಹೆಳವರ ಹುಂಡಿಯಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿಲ್ಲವೆಂದು ಮಳವಳ್ಳಿಯ ಸಿಡಿಪಿಒ ತಪ್ಪು ಮಾಹಿತಿ ನೀಡುವ ಮೂಲಕ ಚಾಮರಾಜನಗರ ಜಿಲ್ಲಾಡಳಿತದ ದಿಕ್ಕು ತಪ್ಪಿಸಿದ್ದಾರೆ.

Recommended Video

IPL ಕಪ್ ಗಾಗಿ RCB ಅಭಿಮಾನಿ ಮಾಡಿದ್ದೇನು ನೋಡಿ..! ಶಾಕ್ ಆಗ್ತೀರ | Oneindia Kannada

ಹೆಳವರ ಹುಂಡಿಯಲ್ಲಿದ್ದ ಅಜ್ಜಿ ಮನೆಗೆ ಹೋಗಿದ್ದು ಮಾತ್ರವೆಂದು ಕೊರೊನಾ ವೈರಸ್ ಸೋಂಕಿತ ಸಿಡಿಪಿಒ ಮಾಹಿತಿ ನೀಡಿದ್ದಾರೆ. ಆದರೆ ಇದೀಗ ಮದುವೆ ಮನೆಯಲ್ಲಿ ಊಟ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ಚಾಮರಾಜನಗರಕ್ಕೆ ಕಂಟಕವಾಗುತ್ತಾ ತಮಿಳರ ಅಕ್ರಮ ಪ್ರವೇಶ?ಚಾಮರಾಜನಗರಕ್ಕೆ ಕಂಟಕವಾಗುತ್ತಾ ತಮಿಳರ ಅಕ್ರಮ ಪ್ರವೇಶ?

ಹೆಳವರ ಹುಂಡಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸದೇ, ಊಟಕ್ಕೆ ಮಾತ್ರ ಹಾಜರಾಗಿದ್ದರು. ಜವಾಬ್ದಾರಿ ಅಧಿಕಾರಿಯಾಗಿದ್ದರೂ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಮುಚ್ಚಿಟ್ಟಿದ್ದರು.

Malavalli CDPO Who Gave False Information To Chamarajanagara District Administration

ಮಾಹಿತಿ ಬಂದ ಕೂಡಲೇ ಪರಿಶೀಲನೆ ನಡೆಸಿದ ಚಾಮರಾಜನಗರ ಜಿಲ್ಲಾಡಳಿತ, ಮದುವೆಯಲ್ಲಿ ಸಿಡಿಪಿಒ ಜೊತೆ ಊಟಕ್ಕೆ ಕುಳಿತ ಇಬ್ಬರನ್ನು ಕ್ವಾರಂಟೈನ್ ಮಾಡಿದ್ದಾರೆ. ಜಿಲ್ಲೆಯ ಜನತೆ ಯಾವುದೇ ರೀತಿಯ ಆತಂಕ ಪಡುವ ಅಗತ್ಯ ವಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಸ್ಪಷ್ಟನೆ ನೀಡಿದ್ದಾರೆ.

ಚಾಮರಾಜನಗರ ನಗರಸಭಾ ವ್ಯಾಪ್ತಿಯ ಸೋಮವಾರಪೇಟೆಯ ಯುವತಿ ಜೊತೆ ನಂಜನಗೂಡು ತಾಲ್ಲೂಕಿನ ಹೆಳವರ ಹುಂಡಿ ಹುಡುಗನ ಜೊತೆ ವಿವಾಹ ನಡೆದಿತ್ತು. ಸೋಮವಾರ ಪೇಟೆಯ 26 ಜನ ವಿವಾಹದಲ್ಲಿ ಭಾಗವಹಿಸಿದ್ದರು.

English summary
Malavalli CDPO lied by saying that He was not involved in the marriage of Nanjangud Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X