ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡಿಮೆ ದರಕ್ಕೆ ಗುಣ ಮಟ್ಟದ ಮಾಸ್ಕ್; ಇದು ಮಹಿಳೆಯರ ಸಾಧನೆ

|
Google Oneindia Kannada News

ಚಾಮರಾಜನಗರ, ಮಾರ್ಚ್ 20 : ಎಲ್ಲಾ ಕಡೆ ಈಗ ಕೊರೊನಾ ಸೋಂಕಿನ ಭೀತಿ ಇದೆ. ಮುಂಜಾಗ್ರತಾ ಕ್ರಮವಾಗಿ ಜನರು ಮಾಸ್ಕ್ ಧರಿಸುತ್ತಿದ್ದಾರೆ. ಬೇಡಿಕೆ ಹೆಚ್ಚಿದಂತೆ ಮಾಸ್ಕ್‌ಗಳ ದರ ಕೂಡ ಹೆಚ್ಚಾಗಿದೆ. ಆದರೆ, ಕಡಿಮೆ ಬೆಲೆಗೆ ಗುಣಮಟ್ಟದ ಮಾಸ್ಕ್‌ಗಳನ್ನು ಮಹಿಳೆಯರು ತಯಾರು ಮಾಡುತ್ತಿದ್ದಾರೆ.

ಚಾಮರಾಜನಗರ ತಾಲ್ಲೂಕಿನ ಗೂಳಿಪುರದ ಭುವನೇಶ್ವರಿ ಮಹಿಳಾ ಸ್ವ ಸಹಾಯ ಸಂಘ ಗುಣಮಟ್ಟದ ಮಾಸ್ಕ್‌ಗಳನ್ನು ತಯಾರಿಸಿ, ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸಲು ಮುಂದಾಗಿದೆ. ಗೂಳಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಹಿಳಾ ಸ್ವ ಸಹಾಯ ಸಂಘ ಇದಾಗಿದೆ.

ಕೊರೊನಾ ತಡೆಗೆ ಹುಬ್ಬಳ್ಳಿಯಲ್ಲಿ ಭಿಕ್ಷುಕರಿಗೆ ಮಾಸ್ಕ್ ಹಂಚುತ್ತಿರುವ ಕರಿಯಪ್ಪ!ಕೊರೊನಾ ತಡೆಗೆ ಹುಬ್ಬಳ್ಳಿಯಲ್ಲಿ ಭಿಕ್ಷುಕರಿಗೆ ಮಾಸ್ಕ್ ಹಂಚುತ್ತಿರುವ ಕರಿಯಪ್ಪ!

ಎನ್.ಆರ್.ಎಲ್.ಎಂ. ಯೋಜನೆಯಡಿ ಸಮುದಾಯ ಬಂಡವಾಳ ನಿಧಿ ಕಾರ್ಯಕ್ರಮದಡಿ ಸಾಲ ಸೌಲಭ್ಯ ಪಡೆದು ಹೊಲಿಗೆ ಯಂತ್ರಗಳನ್ನು ಖರೀದಿಸಲಾಗಿದೆ. ಸ್ವ ಉದ್ಯೋಗ ಕೈಗೊಂಡಿರುವಂತಹ ಭುವನೇಶ್ವರಿ ಮಹಿಳಾ ಸ್ವ ಸಹಾಯ ಸಂಘದ ನಾಗರತ್ನಮ್ಮ, ರಾಜಮ್ಮಣ್ಣಿ ಹಾಗೂ ಭಾಗ್ಯಮ್ಮ ಎಂಬುವವರು ಮಾಸ್ಕ್ ತಯಾರಿಯಲ್ಲಿ ತೊಡಗಿದ್ದಾರೆ.

ಕಾರವಾರದಲ್ಲಿ ಮಾಸ್ಕ್ ಧರಿಸಿ ನಾಟಕ ಪ್ರದರ್ಶನ ಕಾರವಾರದಲ್ಲಿ ಮಾಸ್ಕ್ ಧರಿಸಿ ನಾಟಕ ಪ್ರದರ್ಶನ

Mahila Swa Sahaya Sangha Preparing Quality Of Mask

ಪ್ರಸ್ತುತ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಮೂವರು ಮಹಿಳಾ ಮಣಿಯರು, ಸಾಮಾನ್ಯರಿಗೂ ಮಾಸ್ಕ್ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಕೆಲಸಕ್ಕೆ ಕೈ ಹಾಕಿದ್ದಾರೆ. ಉತ್ತಮ ರೀತಿಯ ಬಟ್ಟೆ, ಹತ್ತಿ ಬಟ್ಟೆ ಉಪಯೋಗಿಸಿ, ಬಳಸಲು ಸುಲಭವಾಗುವ ರೀತಿಯಲ್ಲಿ ಮಾಸ್ಕ್ ಹೊಲಿಯಲಾಗಿದೆ. ಇದು ಗುಣಮಟ್ಟದ್ದಾಗಿದ್ದು, ಬೆಲೆಯೂ ಕಡಿಮೆ ಇದೆ.

ತಂದೆಯ ಜನ್ಮದಿನದ ಸ್ಮರಣೆಗಾಗಿ ಉಚಿತ ಮಾಸ್ಕ್ ವಿತರಿಸಿದ ವೈದ್ಯ ತಂದೆಯ ಜನ್ಮದಿನದ ಸ್ಮರಣೆಗಾಗಿ ಉಚಿತ ಮಾಸ್ಕ್ ವಿತರಿಸಿದ ವೈದ್ಯ

ಮಾಸ್ಕ್ ಅಭಾವವನ್ನು ಕಡಿಮೆ ಮಾಡಲು ಇವರು ಕೈಗೊಂಡಿರುವ ಕೆಲಸ ನಿಜಕ್ಕೂ ಸಹಕಾರಿಯಾಗಿದೆ. ಕಡಿಮೆ ದರವಾಗಿರುವುದರಿಂದ ಎಲ್ಲರೂ ಇದನ್ನು ಖರೀದಿಸಬಹುದಾಗಿದೆ. ಕೊರೊನಾ ಭೀತಿಯಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಕಚೇರಿ, ಸಂತೆ, ಮಾರುಕಟ್ಟೆ, ಬಸ್, ರೈಲ್ವೆ ನಿಲ್ದಾಣ ಮುಂತಾದ ಜನ ಸೇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸಿದರೆ ಸೋಂಕು ಹರಡದಂತೆ ತಡೆಯಬಹುದಾಗಿದೆ.

ಚಿತ್ರ, ಬರಹ : ಚಾಮರಾಜನಗರ ವಾರ್ತೆ

English summary
Chamarajanagar mahila swa sahaya sangha preparing quality of mask in reasonable rates. Heavy demand for mask due to coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X