ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀನ್ಸ್, ಡಿಎನ್‌ಎ ನೋಡಿ ಟಿಕೆಟ್ ಕೊಡಲು ಆಗುತ್ತಾ?: ಬಿ.ಎಲ್. ಸಂತೋಷ್

|
Google Oneindia Kannada News

Recommended Video

ತೇಜಸ್ವಿನಿ ಅನಂತ್‍ಕುಮಾರ್‍ಗೆ ಏಕೆ ಟಿಕೆಟ್ ನೀಡಿಲ್ಲ ಗೊತ್ತಾ?

ಚಾಮರಾಜನಗರ, ಏಪ್ರಿಲ್ 11: ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಸಚಿವ ದಿ. ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ರಾಜ್ಯ ಬಿಜೆಪಿ ಘಟಕ ಕೂಡ ತೇಜಸ್ವಿನಿ ಅವರ ಹೆಸರನ್ನು ಮಾತ್ರ ಶಿಫಾರಸು ಮಾಡಿತ್ತು. ಆದರೆ, ಪಟ್ಟಿ ಬಿಡುಗಡೆಯಾದಾಗ ತೇಜಸ್ವಿನಿ ಅವರ ಬದಲು ಯುವ ಮುಖಂಡ ತೇಜಸ್ವಿ ಸೂರ್ಯ ಹೆಸರು ಇತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದಕ್ಕೆ ಶಾಸಕರ ರವಿ ಸುಬ್ರಮಣ್ಯ ಮತ್ತು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೇ ಕಾರಣ ಎಂದು ಪಕ್ಷದಲ್ಲಿಯೇ ಅಸಮಾಧಾನ ಕೇಳಿಬಂದಿತ್ತು.

ತೇಜಸ್ವಿನಿ ಭಾವುಕ ಟ್ವೀಟ್ ಗೆ ಅಭಿಮಾನಿಗಳ ಅಕ್ಕರೆಯ ಸಾಂತ್ವನತೇಜಸ್ವಿನಿ ಭಾವುಕ ಟ್ವೀಟ್ ಗೆ ಅಭಿಮಾನಿಗಳ ಅಕ್ಕರೆಯ ಸಾಂತ್ವನ

ಚಾಮರಾಜನಗರದಲ್ಲಿ ನಡೆದ ಪ್ರಬುದ್ಧರ ಸಭೆಯಲ್ಲಿ ಬಿ.ಎಲ್. ಸಂತೋಷ್ ಈ ಬಗ್ಗೆ ಮಾತನಾಡಿದ್ದಾರೆ. ಅನಂತ್ ಕುಮಾರ್ ಅವರ ಪತ್ನಿ ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಲೋಕಸಭೆ ಚುನಾವಣೆಯ ಟಿಕೆಟ್ ತಪ್ಪಿಸಿದ್ದರ ಬಗ್ಗೆ ಪಕ್ಷದ ಅಭಿಮಾನಿಯೊಬ್ಬರು ಪ್ರಶ್ನಿಸಿದರು. ಆಗ ಜೀನ್ಸ್, ಡಿಎನ್‌ಎ ಕಾರಣಗಳಿಗೆ ಟಿಕೆಟ್ ಕೊಡಬೇಕೆಂದರೆ ಹೇಗೆ ಎಂದು ಬಿಎಲ್. ಸಂತೋಷ್ ಹೇಳಿದ್ದಾರೆ. ಸಂತೋಷ್ ಅವರ ಹೇಳಿಕೆ ಪಕ್ಷದ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ ಎನ್ನಲಾಗಿದೆ.

ಅನಂತ್ ಬಗ್ಗೆ ಗೌರವವಿದೆ

ಅನಂತ್ ಬಗ್ಗೆ ಗೌರವವಿದೆ

ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಅನಂತ್ ಕುಮಾರ್ ಒಬ್ಬರು. ಅವರ ಬಗ್ಗೆ ಗೌರವವಿದೆ. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಹಾಗೆಂದ ಮಾತ್ರಕ್ಕೆ ಅವರ ಪತ್ನಿಗೆ ಟಿಕೆಟ್ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಮೂಡುತ್ತದೆ. ನಮಗೆ ಅವರ ಪತ್ನಿ ಕುರಿತೂ ಗೌರವವಿದೆ. ಆದರೆ, ಅವರಿಗೆ ಟಿಕೆಟ್ ನೀಡುವುದೊಂದೇ ಗೌರವ ಆಗುವುದಿಲ್ಲ ಎಂದು ಬುಧವಾರದ ಸಭೆ ವೇಳೆ ಸಂತೋಷ್ ಹೇಳಿದ್ದರು.

ಜೀನ್ಸ್ ಡಿಎನ್‌ಗೆ ಕೊಡಲು ಸಾಧ್ಯವೇ?

ಜೀನ್ಸ್ ಡಿಎನ್‌ಗೆ ಕೊಡಲು ಸಾಧ್ಯವೇ?

ಜೀನ್ಸ್, ಡಿಎನ್‌ಎ ಇರುವ ಮಾತ್ರಕ್ಕೆ ಪಕ್ಷದಿಂದ ಟಿಕೆಟ್ ಕೊಡಲು ಸಾಧ್ಯವಿಲ್ಲ. ಪಕ್ಷದ ಸದಸ್ಯತ್ವಕ್ಕೆ ಬೆಲೆ ಬೇಕಲ್ಲವೇ? ಡಿಎನ್‌ಎ ಆಧಾರದಲ್ಲಿ ಟಿಕೆಟ್ ಕೊಡಿ ಎಂದರೆ ಹೇಗೆ. ಗೌರವ ಎನ್ನುವುದು ಪ್ರತಿಭೆ, ಟಿಕೆಟ್‌ಗೆ ಸಮ ಅಲ್ಲ. ಅನಂತ್ ಕುಮಾರ್ ಅವರಿಗೆ ಸಲ್ಲುವ ಶ್ರೇಯಸ್ಸನ್ನು ಅವರಿಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಬಿಎಲ್ ಸಂತೋಷ್ ಹೇಳಿದ್ದರು.

ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ? ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ?

ಅವಕಾಶ ನೀಡಿದೆ ಬೆಳೆಯಲಿ

ಅವಕಾಶ ನೀಡಿದೆ ಬೆಳೆಯಲಿ

ತೇಜಸ್ವಿನಿ ಅನಂತ್ ಕುಮಾರ್ ಅವರ ಸಾಮರ್ಥ್ಯ ನೋಡಿ ಪಕ್ಷದ ರಾಜ್ಯ ಉಪಾಧ್ಯಕ್ಷರ ಸ್ಥಾನವನ್ನು ನೀಡಿದೆ. ಈ ಅವಕಾಶವನ್ನು ಬಳಸಿಕೊಂಡು ಅವರು ಹೇಗೆ ಬೇಕಾದರೂ ಬೆಳೆಯಲಿ. ಸಾಮರ್ಥ್ಯ ನೋಡಿ, ಪೀಳಿಗೆ ಬದಲಿಸಬೇಕು. ಇರುವವರಿಗೆ, ಇಲ್ಲದವರಿಗೆ ಪಕ್ಷ ಎಂದಿಗೂ ಗೌರವ ಕೊಡುತ್ತದೆ. ಗೌರವವನ್ನು ಟಿಕೆಟ್‌ನಿಂದ ಅಳೆಯಲು ಆಗುವುದಿಲ್ಲ. ಅದು ಅಮೂರ್ತವಾಗಿರುತ್ತದೆ. ಟಿಕೆಟ್ ಕೊಟ್ಟರೆ ಗೌರವ ಇದೆ, ಇಲ್ಲದಿದ್ದರೆ ಗೌರವ ಇಲ್ಲ ಎಂದಲ್ಲ. ಅವರ ಪುಣ್ಯವನ್ನು ಇವರಿಗೆ ಧಾರೆ ಎರೆದು ಟಿಕೆಟ್ ನೀಡಬೇಕು ಎನ್ನುವುದು ಪಕ್ಷಕ್ಕೆ ಆರೋಗ್ಯಕರವಲ್ಲ ಎಂದಿದ್ದರು.

ನಾಯಕರಲ್ಲಿ ಅಸಮಾಧಾನ

ನಾಯಕರಲ್ಲಿ ಅಸಮಾಧಾನ

ಬಿ.ಎಲ್. ಸಂತೋಷ್ ಹೇಳಿಕೆ ರಾಜ್ಯ ನಾಯಕರಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ. ಸಂತೀಷ್ ಅವರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಂತೋಷ್ ಅವರು ಲಘುವಾಗಿ ಮಾತನಾಡಿದ್ದಾರೆ. ರಾಜ್ಯದಲ್ಲಿನ ಪಕ್ಷದ ವಿಚಾರದಲ್ಲಿ ಕೈ ಹಾಕಲು ಅವರು ಯಾರು? ಬಿಜೆಪಿ ಅಧ್ಯಕ್ಷರು ಯಡಿಯೂರಪ್ಪ ಅವರಾ ಅಥವಾ ಸಂತೋಷ್ ಅವರಾ? ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ತೇಜಸ್ವಿನಿಗೆ ಕೈತಪ್ಪಿದ ಟಿಕೆಟ್: ಯಡಿಯೂರಪ್ಪ ಅವರಿಗೂ ಅಚ್ಚರಿ!ತೇಜಸ್ವಿನಿಗೆ ಕೈತಪ್ಪಿದ ಟಿಕೆಟ್: ಯಡಿಯೂರಪ್ಪ ಅವರಿಗೂ ಅಚ್ಚರಿ!

ಸುಮಲತಾ ಅವರಿಗೆ ಬೆಂಬಲ ಏಕೆ?

ಸುಮಲತಾ ಅವರಿಗೆ ಬೆಂಬಲ ಏಕೆ?

ಅನಂತ್ ಕುಮಾರ್ ಅವರ ಪತ್ನಿ ಎಂಬ ಕಾರಣಕ್ಕೆ ಪಕ್ಷಕ್ಕೆ ಕೆಲಸ ಮಾಡದವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದಾದರೆ, ಸುಮಲತಾ ಅಂಬರೀಷ್ ಅವರಿಗೆ ಪಕ್ಷ ಬೆಂಬಲ ನೀಡುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಬಿಜೆಪಿಗೆ ಅಂಬರೀಷ್ ಅವರು ಯಾವ ಕಾಣಿಕೆ ನೀಡಿದ್ದರು? ಅವರ ಪತ್ನಿಯನ್ನು ಬೆಂಬಲಿಸುತ್ತಿರುವುದು ಏಕೆ? ಡಿಎನ್‌ಎ ಜೀನ್ಸ್ ಕಾರಣಕ್ಕೆ ಟಿಕೆಟ್ ಕೊಡಲಾಗದು ಎಂದರೆ ಯಡಿಯೂರಪ್ಪ ಅವರ ರಾಘವೇಂದ್ರ, ಸಿಎಂ ಉದಾಸಿ ಅವರ ಮಗ ಶಿವಕುಮಾರ್ ಉದಾಸಿ ಹೀಗೆ ಅನೇಕರು ತಂದೆಯ ಕಾರಣಕ್ಕೆ ಟಿಕೆಟ್ ಪಡೆದುಕೊಂಡು ಆಯ್ಕೆಯಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

English summary
Lok Sabha elections 2019 : 'Cannot give ticket seeing jeans and DNA' BJP leader BL Santhosh on not giving ticket to Tejaswini Ananth kumar in Bangalore South Constituency. He was speaking in Chamarajnagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X