ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರ ವ್ಯಾಪ್ತಿಯಲ್ಲಿ ಕಾಡುಹಂದಿಗೆ ಚಿರತೆ ಬಲಿ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಮಾರ್ಚ್ 9: ಜಿಲ್ಲೆಯಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದಲ್ಲದೆ, ತಿಂಗಳೊಳಗೆ ಬಂಡೀಪುರ ಹುಲಿಯೋಜನೆ ವ್ಯಾಪ್ತಿಯಲ್ಲಿ ಎರಡು ಚಿರತೆ ಮರಿಗಳನ್ನು ಬಲಿ ಪಡೆದಿವೆ.

ಇದೀಗ ಬಂಡೀಪುರ ಹುಲಿ ಯೋಜನೆಯ ಕಾಡಂಚಿನಲ್ಲಿ ಕಾಡುಹಂದಿ ದಾಳಿಗೆ ಆರು ತಿಂಗಳ ಚಿರತೆ ಮರಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಚಿರತೆ ಮರಿ ಸಾವಿಗೆ ಕಾಡುಹಂದಿಯೇ ಕಾರಣ ಎಂದು ಆರ್‍ಎಫ್‍ ಓ ನವೀನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಶ್ವ ವನ್ಯಜೀವಿ ದಿನ: ಕಣ್ಮನಸೆಳೆವ ವನ್ಯಪ್ರಪಂಚದ 10 ಚಿತ್ರಗಳುವಿಶ್ವ ವನ್ಯಜೀವಿ ದಿನ: ಕಣ್ಮನಸೆಳೆವ ವನ್ಯಪ್ರಪಂಚದ 10 ಚಿತ್ರಗಳು

ಹುಲಿ ಯೋಜನೆಯ ಓಂಕಾರ್ ವಲಯದ ಮಂಚಹಳ್ಳಿ ಹಾಗೂ ಕೋಟೆಕೆರೆ ನಡುವೆ ಇರುವ ರಂಗಸ್ವಾಮಿ ಎಂಬುವರ ಜಮೀನಿನ ಬಳಿ ಆರು ತಿಂಗಳ ಹೆಣ್ಣು ಚಿರತೆ ಕಳೇಬರ ಕಂಡು ಬಂದಿದೆ. ಕಾಡುಹಂದಿಗಳು ದಾಳಿ ನಡೆಸಿ, ಇದನ್ನು ಕೊಂದಿವೆ.

Leopard

ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಳೇಬರವನ್ನು ಸುಟ್ಟುಹಾಕಲಾಗಿದೆ. ಕಳೆದ ಫೆಬ್ರವರಿ 17ರಂದು ಗುಡ್ಡದ ಇನ್ನೊಂದು ಬದಿಯಲ್ಲಿ ಕಾಡುಹಂದಿ ದಾಳಿಯಿಂದ ಚಿರತೆಮರಿ ಸಾವನ್ನಪ್ಪಿತ್ತು.

ಈ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಕೂಡ ಭಯಪಡುವಂತಾಗಿದೆ. ಈಗಾಗಲೇ ರೈತರೊಬ್ಬರ ಮೇಲೆ ದಾಳಿ ನಡೆಸಿ, ಆಸ್ಪತ್ರೆಗೆ ಸೇರುವಂತೆ ಮಾಡಿವೆ.

ಕಾಡಾನೆ, ಹುಲಿ, ಚಿರತೆಗಳೊಂದಿಗೆ ಈಗ ಕಾಡುಹಂದಿಗಳು ಉಪಟಳ ನೀಡುತ್ತಿದ್ದು, ಕಾಡಂಚಿನ ರೈತರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯಿಂದ ಕಾಡುಹಂದಿಗಳಿಗೆ ಕಡಿವಾಣ ಹಾಕದಿದ್ದರೆ ರೈತರು ನೆಮ್ಮದಿಯಾಗಿ ಬದುಕುವುದು ಅಸಾಧ್ಯ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

English summary
Leoprd killed by wild boar in Bandipur forest area, Chamarajnagar district. Recently wild boar attacks become moe in this area and farmers complain against this issue to forest department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X