ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ: ಹನೂರಲ್ಲಿ ರೈತ, ಹಸುವನ್ನು ಕೊಂದ ಚಿರತೆ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಸೆಪ್ಟೆಂಬರ್ 23: ಹಸು ಮೇಯಿಸಲು ತೆರಳಿದ್ದ ರೈತ ಹಾಗೂ ಆತನ ಹಸುವನ್ನು ಚಿರತೆ ಕೊಂದಿರುವ ಆಘಾತಕಾರಿ ಘಟನೆ ಹನೂರು ತಾಲೂಕಿನ ಕೆವಿನ್ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಕೆವಿಎಂ ದೊಡ್ಡಿ ಗ್ರಾಮದ ಗೋವಿಂದಯ್ಯ (65)ಮೃತಪಟ್ಟ ದುರ್ದೈವಿ.‌ ಹಸು ಮೇಯಿಸಲು ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು, ರೈತನನ್ನು ಕೊಂದಿರುವ ಚಿರತೆ, ಆತನ ಬಲಗಾಲನ್ನು ತಿಂದು ಪರಾರಿಯಾಗಿದೆ ಎನ್ನಲಾಗುತ್ತಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ರೈತ ಮುಖಂಡರು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗ; ತ್ಯಾವರೆಕೊಪ್ಪ ಸಫಾರಿಯ ಹಿರಿಯ ಹುಲಿ ಹನುಮ ಸಾವುಶಿವಮೊಗ್ಗ; ತ್ಯಾವರೆಕೊಪ್ಪ ಸಫಾರಿಯ ಹಿರಿಯ ಹುಲಿ ಹನುಮ ಸಾವು

ಇನ್ನೂ ಈ ಸ್ಥಳದಲ್ಲಿ ಈ ಹಿಂದೆ ಚಿರತೆ ಮೇಕೆಯೊಂದನ್ನು ತಿಂದಿತ್ತು, ಇದೀಗ ಹಸುವಿನ ಜೊತೆಗೆ ಮನುಷ್ಯನನ್ನು ಕೊಂಡಿದರುವ ಚಿರತೆ ಆತನ ಕಾಲನ್ನು ತಿಂದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆದಷ್ಟು ಬೇಗೆ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

Leopard Kills a Man and cow in Chamarajanagar

ಪಿರಿಯಾಪಟ್ಟಣದಲ್ಲಿ ಚಿರತೆ ಸೆರೆ
ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರ ಸಮೀಪದ ಜವನಿಕುಪ್ಪೆ ಗ್ರಾಮದಲ್ಲಿ ಗುರುವಾರ ಚಿರತೆಯೊಂದು ಬೋನಿಗೆ ಬಿದ್ಗದಿದೆ. ಕೆಲವು ದಿನಗಳ ಬಿಂದೆ ಗ್ರಾಮದ ಚಂದ್ರ ಎಂಬುವವರ ಸಾಕು ನಾಯಿ ಹಾಗೂ ಕರವನ್ನು ಚಿರತೆ ತಿಂದಿತ್ತು. ನೆಟ್ಟೆಕೆರೆಯಲ್ಲಿ ಮೇಕೆಯೊಂದನ್ನು ಕೊಂದಿದ್ದ ಚಿರತೆಯನ್ನು ಸೆರೆ ಹಿಡಿಯುವಂತೆ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ನಂತರ ಚಿರತೆ ಓಡಾಡುವ ಸ್ಥಳದಲ್ಲಿ ಬೋನಿರಿಸಲಾಗಿತ್ತು . ಗುರುವಾರ ನಾಯಿ ಅಟ್ಟಿಸಿಕೊಂಡು ಬಂದ ಚಿರತೆ ಬೋನಿಗೆ ಬಿದ್ದಿದ್ದು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪಿರಿಯಾಪಟ್ಟಣ ಆರ್‌ಎಫ್‌ಒ ಕಿರಣ್ ಕುಮಾರ್, ಡಿಆರ್‌ಎಫ್‌ಒ ಪಾರ್ವತಿ ಸೇರಿದಂತೆ ಸಿಬ್ಬಂದಿಗಳು ಬಂದು ಚಿರತೆಯನ್ನು ಸೆರೆಹಿಡಿದು ಹೆಬ್ಬಳ ಅರಣ್ಯ ವಲಯದಲ್ಲಿ ಬಿಟ್ಟಿದ್ದಾರೆ.

ದಾವಣಗೆರೆಯಲ್ಲಿ ಚಿರತೆ ಪ್ರತ್ಯಕ್ಷ
ದಾವಣಗೆರೆ ತಾಲೂಕಿನ ಕಂದನ ಕೋವಿ-ರುದ್ರನಕಟ್ಟೆ ಗ್ರಾಮದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ದಾರಿಯಲ್ಲೇ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂಧ ಕಂದನಕೋವಿ, ರುದ್ರನಕಟ್ಟೆ, ಗ್ರಾಮಸ್ಥರು ಹೊರಗೆ ಓಡಾಡಲು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಮನವಿ ಮಾಡಿದ್ದಾರೆ.

English summary
A leopard Killed a farmer and his cow, this shocking incident took place in a village of Hanur taluk, Chamarajnagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X