ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರದಲ್ಲಿ ವಕೀಲರು-ಪೊಲೀಸರ ನಡುವಿನ ತಿಕ್ಕಾಟದಲ್ಲಿ ಬಡವಾದ ಕಕ್ಷಿದಾರರು

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಫೆಬ್ರವರಿ 12: ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಬರುವ ಅದೆಷ್ಟೋ ಕಕ್ಷಿದಾರರು ಈಗ ಮನಸ್ಸಲ್ಲೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾಕೆ ಅಂತೀರಾ? ಕಾರಣವಿಷ್ಟೇ.

ಗುಂಡ್ಲುಪೇಟೆ ಠಾಣೆಯೊಂದರಲ್ಲಿ ವಕೀಲರೊಬ್ಬರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದೆ. ಇದೀಗ ಪ್ರಕರಣ ದಾಖಲಿಸಿದ ಇನ್ಸ್ ಪೆಕ್ಟರ್ ಅನ್ನು ಅಮಾನತು ಮಾಡಬೇಕೆಂದು, ಸೂಕ್ತ ವಿಚಾರಣೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಕೆಲವು ನ್ಯಾಯವಾದಿಗಳು ಪ್ರತಿಭಟಿಸುತ್ತಿದ್ದಾರೆ.

ವಕೀಲರ ಮೇಲೆ ಸುಳ್ಳು ಪ್ರಕರಣ, ಇನ್ಸ್‌ಪೆಕ್ಟರ್ ಅಮಾನತಿಗಾಗಿ ಧರಣಿವಕೀಲರ ಮೇಲೆ ಸುಳ್ಳು ಪ್ರಕರಣ, ಇನ್ಸ್‌ಪೆಕ್ಟರ್ ಅಮಾನತಿಗಾಗಿ ಧರಣಿ

ಇತ್ತ ಕರ್ತವ್ಯನಿರತ ಪೊಲೀಸರ ಮೇಲೆ ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಎಷ್ಟು ಸರಿ ಎಂದು ಪೊಲೀಸರ ವಲಯದಲ್ಲಿ ಕೇಳಿಬರುತ್ತಿದೆ. ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೊ ಹಾಗೇ ನ್ಯಾಯವಾದಿಗಳು-ಪೊಲೀಸರೊಬ್ಬರ ತಿಕ್ಕಾಟದಿಂದ ಕಾರ್ಯ ಕಲಾಪಗಳನ್ನು ನ್ಯಾಯವಾದಿಗಳು ಬಹಿಷ್ಕರಿಸುತ್ತಿರುವ ಪರಿಣಾಮ ಕಕ್ಷಿದಾರರು ವ್ಯರ್ಥವಾಗಿ ಬಂದು ಹೋಗುತ್ತಿದ್ದಾರೆ.

Lawyers have been protesting against police in Chamarajanagar

ಕೆಲವರ ಪ್ರಕಾರ ವಕೀಲರದ್ದು ತಪ್ಪಿಲ್ಲವೆಂದಿದ್ದರೆ , ತಪ್ಪು ಎಸಗಿದ್ದಾರೆ ಎನ್ನಲಾದ ಪೊಲೀಸರ ವಿರುದ್ಧ ನ್ಖಾಯಾಲಯದಲ್ಲಿಯೇ ಖಾಸಗಿ ದೂರು‌ ದಾಖಲಿಸಿ ನ್ಯಾಯ ಪಡೆಯಬಹುದಲ್ಲವೇ.? ಸಾಂಕೇತಿಕವಾಗಿ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸುವುದು ಸರಿ.

 ರೆಡ್ಡಿಗೆ ಜಾಮೀನು ಸಿಗುತ್ತೋ ಇಲ್ವೋ: ವಕೀಲರು ಹೇಳುವುದೇನು? ರೆಡ್ಡಿಗೆ ಜಾಮೀನು ಸಿಗುತ್ತೋ ಇಲ್ವೋ: ವಕೀಲರು ಹೇಳುವುದೇನು?

ಆದರೆ ಅದನ್ನೇ ಮುಂದುವರೆಸುವುದರಿಂದ ಮುಗ್ಧ ಕಕ್ಷಿದಾರರು ನೋವು ಅನುಭವಿಸುವುದು ಎಷ್ಟು ಸರಿ.!?ಎನ್ನುತ್ತಾರೆ ಕೆಲವು ಕಾನೂನು ತಿಳಿದವರು. ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ಸಾಮರಸ್ಯ ಕೊರತೆಯಿಂದ ಬಡಪಾಯಿ ಜನರು ಹೆಣಗಾಡುತ್ತಿದ್ದು, ಹೈ ಕೊರ್ಟ್ ರಿಜಿಸ್ಟಾರ್ ಅವರೇ ಸೂಕ್ತ ಮಾರ್ಗದರ್ಶನ ನೀಡಬೇಕಾಗಿದೆ.

English summary
A false case has been registered against a lawyer in Gundlupete station.For this reason the lawyers have been protesting against police for over a week in Chamarajanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X