ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಅಸ್ಮಿತೆ ನಂಬಿ ಠೇವಣಿ ಕಳೆದುಕೊಂಡ ವಾಟಾಳ್ ನಾಗರಾಜ್

By Mahesh
|
Google Oneindia Kannada News

ಬೆಂಗಳೂರು, ಮೇ 17: ಚಾಮರಾಜನಗರದಿಂದ ಐದು ಬಾರಿ ಶಾಸಕರಾಗಿ ಅಸೆಂಬ್ಲಿಯಲ್ಲಿ ಕನ್ನಡ ಪರ ದನಿಯಾಗಿದ್ದ ವಾಟಾಳ್ ನಾಗರಾಜ್ ಅವರು ಈ ಬಾರಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಮೂಲಕ ಕಣಕ್ಕಿಳಿದಿದ್ದರು. ಆದರೆ, ಕನ್ನಡ ಅಸ್ಮಿತೆ, ಪ್ರಾದೇಶಿಕ ಸಮಾನತೆ ಯಾವ ಅಂಶಗಳು ವಾಟಾಳ್ ಕೈ ಹಿಡಿಯಲಿಲ್ಲ.

ಕನ್ನಡ ಸಂಘಟನೆಗಳು, ಪ್ರಾದೇಶಿಕ, ದಲಿತ ಹಾಗೂ ರೈತ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಸ್ಥಾಪನೆಯಾದ ಕರ್ನಾಟಕ ಪ್ರಜಾ ಸಂಯುಕ್ತ ರಂಗದ ಬೆಂಬಲದ ಮೂಲಕ ವಾಟಾಳ್ ಸ್ಪರ್ಧಿಸಿದ್ದರು.

ಕ್ಷೇತ್ರ ಪರಿಚಯ : ಚಾಮರಾಜನಗರದಲ್ಲಿ ಬಿಜೆಪಿ- ಕಾಂಗ್ರೆಸ್ ಫೈಟ್ಕ್ಷೇತ್ರ ಪರಿಚಯ : ಚಾಮರಾಜನಗರದಲ್ಲಿ ಬಿಜೆಪಿ- ಕಾಂಗ್ರೆಸ್ ಫೈಟ್

ಪ್ರಾದೇಶಿಕತೆ, ಕನ್ನಡ ಅಸ್ಮಿತೆ ವಿಷಯವನ್ನು ನಂಬಿಕೊಂಡ ವಾಟಾಳ್ ಅವರನ್ನು ಯಾರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.

 Karnataka Election Results 2018 : Pro Kannada activist Vatal Nagaraj lost deposit Chamarajanagar

2018ರಲ್ಲಿ ಈ ಕ್ಷೇತ್ರದಲ್ಲಿ ವಾಟಾಳ್ ಅವರು 14 ಅಂಚೆ ಮತಗಳನ್ನು ಪಡೆದಿದ್ದು, ಇವಿಎಂನಿಂದ 5963 ಮತಗಳು ಗಳಿಸಿದ್ದು, ಒಟ್ಟಾರೆ 5977 ಮಾತ್ರ ಪಡೆದುಕೊಂಡು 7ನೇ ಸ್ಥಾನ ಗಳಿಸಿ ಠೇವಣಿ ಕಳೆದುಕೊಂಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಕಾಂಗ್ರೆಸ್ಸಿನ ಸಿ ಪುಟ್ಟರಂಗಶೆಟ್ಟಿ ಅವರು 559 ಅಂಚೆ ಮತಗಳು + 75404ಇವಿಎಂ ಮತಗಳನ್ನು ಪಡೆದಿದ್ದು ಒಟ್ಟಾರೆ 75963 ಮತಗಳನ್ನು ಪಡೆದರು. ಬಿಜೆಪಿಯ ಪ್ರೊ ಕೆ. ಆರ್ ಮಲ್ಲಿಕಾರ್ಜುನಪ್ಪ 547+70503 =71050ಮತಗಳನ್ನು ಗಳಿಸಿ 4913ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

English summary
Karnataka Election Results 2018 : Pro Kannada activist,Kannada Chaluvali Vatal Paksha leader Vatal Nagaraj lost deposit in Chamarajanagar constituency. Five time MLA Vatal this time contested with help from Karnataka Praja Samyukta Ranga party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X