ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆಮಹದೇಶ್ವರ ಬೆಟ್ಟದಲ್ಲಿ ರಾತ್ರಿ 8ರವರೆಗೂ ಮತದಾನ

|
Google Oneindia Kannada News

ಚಾಮರಾಜನಗರ ಮೇ 12: ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲೆಮಹದೇಶ್ವರ ಬೆಟ್ಟದಲ್ಲಿ ಮತದಾನದ ಪ್ರಕ್ರಿಯೆಯನ್ನು ಸುಮಾರು ಒಂದೂವರೆ ಗಂಟೆ ಕಾಲ ವಿಸ್ತರಿಸಲಾಗಿತ್ತು.

ಮಲೆಮಹದೇಶ್ವರ ಬೆಟ್ಟದ ಮತಗಟ್ಟೆ ಸಂಖ್ಯೆ 148/4 ರಲ್ಲಿ ಬೆಳಗ್ಗಿನಿಂದ ಮತದಾನದ ಪ್ರಕ್ರಿಯೆ ಮಂದಗತಿಯಲ್ಲಿತ್ತು. ಸಂಜೆ ಬಳಿಕ ಮತದಾರರು ಮತಗಟ್ಟೆಯತ್ತ ಸುಳಿಯತೊಡಗಿದರು.

ಕೆಲವೆಡೆ ತಾಂತ್ರಿಕ ತೊಂದರೆ, ಮತದಾನ ಬಹುತೇಕ ಯಶಸ್ವಿ: ಸಂಜೀವ್‌ ಕುಮಾರ್‌ಕೆಲವೆಡೆ ತಾಂತ್ರಿಕ ತೊಂದರೆ, ಮತದಾನ ಬಹುತೇಕ ಯಶಸ್ವಿ: ಸಂಜೀವ್‌ ಕುಮಾರ್‌

ಮತದಾನ ಪ್ರಕ್ರಿಯೆ ಅಂತ್ಯಗೊಳ್ಳುವ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸತೊಡಗಿದರು. ಇದರಿಂದ ಚುನಾವಣಾಧಿಕಾರಿಗಳು 6.30ಕ್ಕೆ ಮತದಾನದ ಸಮಯವನ್ನು ಸ್ಥಗಿತಗೊಳಿಸುವ ಬದಲು 8 ಗಂಟೆಯವರೆಗೂ ನಡೆಸಿದರು.

karnataka assembly elections 2018 voting time extended

ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು 1350 ಮತದಾರರಿದ್ದಾರೆ. ಸಂಜೆ ನಂತರ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರತೊಡಗಿದರು. ಮತಗಟ್ಟೆ ಅಧಿಕಾರಿಗಳು 6 ಗಂಟೆಯ ಒಳಗೆ ಬಂದ ಎಲ್ಲಾ ಮತದಾರರಿಗೂ ಟೋಕನ್ ವಿತರಿಸಿದರು. ಸಂಪೂರ್ಣ ಮತದಾನದ ಕಾರ್ಯ ಮುಗಿಯುವ ವೇಳೆಗೆ ಎಂಟು ಗಂಟೆಯಾಗಿತ್ತು.

ಮತದಾನದ ಅವಧಿ ವಿಸ್ತರಿಸಿದ್ದರೂ ಗ್ರಾಮದ ಚಂದ್ರ ಮತ್ತು ತಾಯಮ್ಮ ಎಂಬುವವರು ಮತದಾನದಿಂದ ವಂಚಿತರಾದರು.

6 ಗಂಟೆ ಹೊತ್ತಿಗೆ ರಾಜ್ಯದ ಒಟ್ಟು ಶೇಕಡವಾರು ಮತದಾನ ಪ್ರಮಾಣ 70%6 ಗಂಟೆ ಹೊತ್ತಿಗೆ ರಾಜ್ಯದ ಒಟ್ಟು ಶೇಕಡವಾರು ಮತದಾನ ಪ್ರಮಾಣ 70%

ಚಂದ್ರ ತಮ್ಮ ಪತ್ನಿಯನ್ನು ಮತಗಟ್ಟೆಗೆ ಕರೆದುಕೊಂಡು ಬಂದು ಮತದಾನ ಮಾಡಿಸಿ ಅವರನ್ನು ಮನೆಗೆ ಬಿಟ್ಟು ಬಂದಿದ್ದರು. ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಾಯಿ ತಾಯಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಪಡೆದ ನಂತರ ಮತಗಟ್ಟೆಗೆ ಬಂದರು. ಆದರೆ ಅವರು ಬರುವಾಗ ಮತದಾನದ ಅವಧಿ ಮುಗಿದಿತ್ತು. ಹೀಗಾಗಿ ಇಬ್ಬರಿಗೂ ಮತದಾನಕ್ಕೆ ಅವಕಾಶ ನೀಡದೆ ವಾಪಸ್ ಕಳುಹಿಸಲಾಯಿತು.

English summary
karnataka assembly elections 2018: Voting time was extended till 8 pm in Malai mahadeshwara betta region of Hanur constituency as the people came to cast their vote late evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X