ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರ; ಗಾಯಾಳು ಹುಲಿ ಪತ್ತೆ, ಅರಣ್ಯ ಇಲಾಖೆ ಕಣ್ಗಾವಲು

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 21; ಹುಲಿ ಸಂರಕ್ಷಿತ ಅರಣ್ಯವಾದ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾದ ಕಾರಣದಿಂದ ಹುಲಿಗಳ ನಡುವೆ ಕಾದಾಟ ಹೆಚ್ಚಾಗುತ್ತಿರುವುದು ಇತ್ತೀಚೆಗಿನ ಬೆಳವಣಿಗೆಯಾಗಿದೆ. ಈಗ ಗಾಯಗೊಂಡ ಹುಲಿಯೊಂದು ಪತ್ತೆಯಾಗಿದೆ. ಗಡಿಯ ವಿಚಾರದಲ್ಲಿ ಹುಲಿಗಳ ನಡುವೆ ಕಾಡಿನಲ್ಲಿ ಕಾದಾಟ ನಡೆಯುವುದು ಸಹಜ ಪ್ರಕ್ರಿಯೆ ಈ ವೇಳೆ ಹುಲಿಗಳು ಗಂಭೀರವಾಗಿ ಗಾಯಗೊಳ್ಳುತ್ತವೆ.

ಆಗಾಗ್ಗೆ ಹುಲಿಗಳ ಸಾವಿನ ಸಂಖ್ಯೆಯೂ ವರದಿಯಾಗುತ್ತಿದ್ದು, ಕೆಲವು ಸಹಜವಾಗಿ ಸಾವನ್ನಪ್ಪಿದರೆ ಮತ್ತೆ ಕೆಲವು ಕಾದಾಟದಿಂದಲೇ ಸಾವನ್ನಪ್ಪುತ್ತಿರುವುದು ಕಂಡು ಬರುತ್ತಿದೆ. ಇದೀಗ ಬಂಡೀಪರ ಹುಲಿ ಸಂರಕ್ಷಿತ ಪ್ರದೇಶ ಸಫಾರಿ ಝೋನ್‌ನಲ್ಲಿ ಗಾಯಗೊಂಡ ಹುಲಿಯೊಂದು ಕಾಣಿಸಿಕೊಂಡಿದೆ.

ನಿಟ್ಟುಸಿರು ಬಿಟ್ಟ ನೀಲಗಿರಿ ಜಿಲ್ಲೆ ಜನ; ನರಭಕ್ಷಕ ಹುಲಿ ಸೆರೆ ನಿಟ್ಟುಸಿರು ಬಿಟ್ಟ ನೀಲಗಿರಿ ಜಿಲ್ಲೆ ಜನ; ನರಭಕ್ಷಕ ಹುಲಿ ಸೆರೆ

ಈ ಹುಲಿಯು ಸುಮಾರು ಏಳರಿಂದ ಎಂಟು ವರ್ಷದ ಪ್ರಾಯದ್ದಾಗಿದ್ದು, ನಿತ್ರಾಣ ಸ್ಥಿತಿಯಲ್ಲಿ ಸಂಚರಿಸುತ್ತಿದ್ದ ದೃಶ್ಯ ಬಂಡೀಪರ ಪ್ರವಾಸೋದ್ಯಮ ಪ್ರದೇಶದ ಗಂಜಿಕಟ್ಟೆ ಬಳಿ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಕಂಡು ಬಂದಿದೆ.

ಬಂಡೀಪುರ; ಹುಲಿ ಜೊತೆ ಸಸ್ಯಾಹಾರಿ ಪ್ರಾಣಿಗಳ ಗಣತಿ ಬಂಡೀಪುರ; ಹುಲಿ ಜೊತೆ ಸಸ್ಯಾಹಾರಿ ಪ್ರಾಣಿಗಳ ಗಣತಿ

Injured Tiger Found In Bandipur Safari Area

ಹುಲಿಯಿರುವ ಪರಿಸ್ಥಿತಿಯನ್ನು ಗಮನಿಸಿದರೆ ಹುಲಿಯು ಮತ್ತೊಂದು ಹುಲಿಯೊಂದಿಗೆ ಕಾದಾಡಿದ ಪರಿಣಾಮ ಹುಲಿಯ ಬೆನ್ನಿನ ಕೆಳಭಾಗದ ಎರಡು ಕಡೆಗಳಲ್ಲಿ ದೊಡ್ಡ ಗಾಯವಾಗಿದೆ ಹೀಗಾಗಿ ಬೇಟೆಯಾಡಲು ಸಾಧ್ಯವಾಗದೆ ನಿತ್ರಾಣ ಸ್ಥಿತಿಗೆ ತಲುಪಿರಬಹುದೆಂದು ಶಂಕಿಸಲಾಗಿದೆ.

ವಿಶೇಷ ವರದಿ: ಜುಲೈ 5ರಿಂದ ಆನ್‌ಲೈನ್‌ನಲ್ಲಿ ಬಂಡೀಪುರ ಸಫಾರಿ ಟಿಕೆಟ್ ಲಭ್ಯ!ವಿಶೇಷ ವರದಿ: ಜುಲೈ 5ರಿಂದ ಆನ್‌ಲೈನ್‌ನಲ್ಲಿ ಬಂಡೀಪುರ ಸಫಾರಿ ಟಿಕೆಟ್ ಲಭ್ಯ!

ಇದೀಗ ಹುಲಿ ಕಾಣಿಸಿಕೊಂಡಿರುವುದರಿಂದ ಅದರ ಆರೋಗ್ಯದತ್ತ ನಿಗಾ ವಹಿಸಲು ಅರಣ್ಯ ಇಲಾಖೆ ಮುಂದಾಗಿದೆ. ಹುಲಿಯು ಚೇತರಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಹುಲಿ ಪತ್ತೆಗಾಗಿ ಕ್ಯಾಮರಾ ಅಳವಡಿಸಲಾಗಿದ್ದು, ಅದನ್ನು ಪತ್ತೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಹುಲಿ ಗಾಯದ ಕಾರಣದಿಂದ ಬೇಟೆಯಾಡಲು ಸಾಧ್ಯವಾಗದೆ ಹಸಿವು ಮತ್ತು ನಿಶ್ಯಕ್ತಿಯಿಂದ ಬಳಲುತ್ತಿದೆ. ಅದು ಸದ್ಯ ಎಲ್ಲಿದೆ? ಎಂಬುದರ ಬಗ್ಗೆ ಪತ್ತೆ ಹಚ್ಚಲು ಅದರ ಚಲನವಲನಗಳ ಮೇಲೆ ನಿಗಾ ಇಡಲಾಗಿದ್ದು ಸದ್ಯ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಿ ಅದರ ಮೇಲೆ ಸಿಬ್ಬಂದಿ ನಿಗಾವಹಿಸಿದ್ದಾರೆ.

"ಒಂದು ವೇಳೆ ಹುಲಿಯು ಚೇತರಿಸಿಕೊಳ್ಳದೆ ಇದ್ದಲ್ಲಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್.ನಟೇಶ್ ತಿಳಿಸಿದ್ದಾರೆ.

ಹೆಚ್ಚು ಹುಲಿಗಳು; ಹುಲಿ ಗಣತಿಯ ವರದಿ ಪ್ರಕಾರ ಕರ್ನಾಟಕದಲ್ಲಿ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯಲ್ಲಿ ಹೆಚ್ಚು ಹುಲಿಗಳಿವೆ. ಬಂಡೀಪುರ 2ನೇ ಸ್ಥಾನದಲ್ಲಿದೆ. ನಾಗರಹೊಳೆಯಲ್ಲಿ 127 ಹುಲಿಗಳಿದ್ದರೆ, ಬಂಡೀಪುರದಲ್ಲಿ 126 ಹುಲಿಗಳಿವೆ.

2020ರ ಮಾಹಿತಿ ಪ್ರಕಾರ ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಮಧ್ಯ ಪ್ರದೇಶ ರಾಜ್ಯದಲ್ಲಿ 526 ಹುಲಿಗಳಿವೆ. ಕರ್ನಾಟಕದಲ್ಲಿ 524 ಹುಲಿಗಳಿವೆ. 3ನೇ ಸ್ಥಾನದಲ್ಲಿ ಉತ್ತರಾಖಂಡ್ ರಾಜ್ಯವಿದ್ದು, ಅಲ್ಲಿ 442 ಹುಲಿಗಳಿವೆ.

ಹುಲಿ ಗಣತಿ; ಬಂಡೀಪುರದಲ್ಲಿ ಅರಣ್ಯ ಇಲಾಖೆಯ ಸಿಬ್ಭಂದಿಗಳು ಈಗಾಗಲೇ ಹುಲಿಯ ಗಣತಿ ಮಾಡಿದ್ದಾರೆ. ಈಗ ಹುಲಿಗಳ ನಡುವೆ ವಾಸವಿರುವ ಇತರೆ ಸಸ್ಯಹಾರಿ ಪ್ರಾಣಿಗಳ ಗಣತಿಗೂ ಅಧಿಕಾರಿಗಳು ಮುಂದಾಗಿದ್ದಾರೆ. ಹುಲಿಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಸಂತಸದ ಸಂಗತಿಯಾಗಿದ್ದರೂ ಅವುಗಳೇ ವಾಸವಿರುವ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇತರೆ ಪ್ರಾಣಿಗಳು ಎಷ್ಟಿವೆ? ಎಂಬುದು ಮುಖ್ಯವಾಗುತ್ತದೆ.

ಹುಲಿ ಜೊತೆಗೆ ಇತರೆ ಸಸ್ಯಹಾರಿ ಪ್ರಾಣಿಗಳ ಗಣತಿಯನ್ನು ನಡೆಸಲಾಗುತ್ತದೆ. ಈ ಹಿಂದೆ 2005, 2009, 20013, 20017ರಲ್ಲಿ ಅಂದರೆ ನಾಲ್ಕು ಬಾರಿ ನಡೆಸಲಾಗಿತ್ತು. ಈಗ ನಡೆಯುತ್ತಿರುವುದು 15ನೇ ಅಖಿಲ ಭಾರತ ಹುಲಿ ಹಾಗೂ ದೊಡ್ಡ ಸಸ್ಯಹಾರಿ ಪ್ರಾಣಿಗಳ ಅಂದಾಜು ಪ್ರಕ್ರಿಯೆ ಆಗಿದೆ.

Recommended Video

ವಿದೇಶದಿಂದ ಸಿಕ್ಕ ಗಿಫ್ಟ್ ಗಳನ್ನೇ ಮಾರಿಕೊಳ್ಳೋ ದುಸ್ಥಿತಿ ಬಂತು ಪಾಕಿಸ್ತಾನಕ್ಕೆ | Oneindia Kannada

ಈ ಗಣತಿಯ ಭಾಗವಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಷ್ಟು ಸಸ್ಯಾಹಾರಿ ಪ್ರಾಣಿಗಳು ವಾಸವಾಗಿವೆ? ಎಂಬುವುದರ ಅಂಕಿ ಅಂಶಗಳನ್ನು ಸಂಗ್ರಹ ಮಾಡಲಾಗುತ್ತದೆ. ಈ ಸಂಬಂಧ ವಿವಿಧ ತಂಡಗಳನ್ನು ರಚಿಸಿ ಗಣತಿ ಕಾರ್ಯವನ್ನು ನಡೆಸಲಾಗುತ್ತಿದೆ.

English summary
Injured tiger found in Bandipur safari area. Tiger may injured during fight with another tiger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X