ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರದಲ್ಲಿ ಸ್ಯಾಟಲೈಟ್ ಫೋನ್​ ಬಳಕೆ ಕುರಿತು ಮಾಹಿತಿ

|
Google Oneindia Kannada News

ಚಾಮರಾಜನಗರ, ಅಕ್ಟೋಬರ್ 31: ಚಾಮರಾಜನಗರದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್‌.ಡಿ. ಆನಂದ್ ಕುಮಾರ್ ಮಾಹಿತಿ ನೀಡಿದ್ದಾರೆ.

ಚಾಮರಾಜನಗರದ ಬೇರಂಬಾಡಿ ಗ್ರಾಮದ ಬಳಿ ಸ್ಯಾಟಲೈಟ್ ಫೋನ್ ಪತ್ತೆಯಾಗಿರುವುದು ಖಾತ್ರಿಯಾಗಿದೆ.

ಚಾಮರಾಜನಗರ ಗಡಿಯಲ್ಲಿ ನಕ್ಸಲ್ ಮೇಲೆ ಹದ್ದಿನ ಕಣ್ಣುಚಾಮರಾಜನಗರ ಗಡಿಯಲ್ಲಿ ನಕ್ಸಲ್ ಮೇಲೆ ಹದ್ದಿನ ಕಣ್ಣು

ಬಂಡೀಪುರ ಅರಣ್ಯದಲ್ಲಿ ಸತತ ಎರಡು ದಿನಗಳಿಂದ ನಕ್ಸಲ್ ನಿಗ್ರಹ ದಳ ಹಾಗೂ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರೊಂದಿಗೆ ಎಎನ್ಎಫ್ ಜತೆ 10 ಮಂದಿ ಕಮಾಂಡೋಗಳನ್ನು ನಿಯೋಜಿಸಲಾಗಿದೆ.

Information On Satellite Phone Usage In Chamarajanagar

ಸ್ಯಾಟಲೈಟ್ ಫೋನ್​ ಬಳಕೆ ಬಗ್ಗೆ ಗೊತ್ತಾಗುತ್ತಿದ್ದಂತೆ ಚಾಮರಾಜನಗರ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದಲ್ಲದೆ ಕಳೆದ ಮೂರು ದಿನಗಳ ಹಿಂದೆ ಕೇರಳದಲ್ಲಿ ನಾಲ್ವರು ನಕ್ಸಲರನ್ನು ಎನ್​ಕೌಂಟರ್ ಮೂಲಕ ಹೊಡೆದುರುಳಿಸಲಾಗಿದ್ದು, ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ನಕ್ಸಲರು ದಾಳಿ ನಡೆಸಬಹುದೆಂಬ ಶಂಕೆಯಿಂದ ಗಡಿಭಾಗದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸ್ಪಿ ಆನಂದಕುಮಾರ್ ಕೂಡ ಪಾಲ್ಗೊಂಡಿದ್ದಾರೆ. ಇದಲ್ಲದೆ, ಮೂಲೆಹೊಳೆ ಚೆಕ್​ಪೋಸ್ಟ್​ನಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಇದುವರೆಗೂ ಯಾವುದೇ ರೀತಿಯ ನಕ್ಸಲ್ ಚಟುವಟಿಕೆ ಕಂಡು ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

English summary
District Superintendent of Police Anand Informed that satellite phone use in Chamarajanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X